Select Your Language

Notifications

webdunia
webdunia
webdunia
webdunia

ವರುಣ್ ಧವನ್ ಚಿತ್ರದಲ್ಲಿ ಅಭಿನಯಿಸಲು ಐಶ್ವರ್ಯ ಅಸಮ್ಮತಿ

ವರುಣ್ ಧವನ್  ಚಿತ್ರದಲ್ಲಿ ಅಭಿನಯಿಸಲು ಐಶ್ವರ್ಯ ಅಸಮ್ಮತಿ
ಮುಂಬೈ , ಮಂಗಳವಾರ, 9 ಸೆಪ್ಟಂಬರ್ 2014 (11:19 IST)
ಪುನಃ ಚಿತ್ರರಂಗದಲ್ಲಿ ತನ್ನ ಪ್ರತಿಭೆ ತೋರಲು ಸಿದ್ಧತೆ ನಡೆಸಿರುವ ಐಶ್ವರ್ಯ ರೈ ಬಗ್ಗೆ ದಿನಕ್ಕೊಂದು ಕಥೆ ಹುಟ್ಟುತ್ತಲೇ ಇದೆ. ಸಾಮಾನ್ಯವಾಗಿ ಸ್ವಲ್ಪ ವಯಸ್ಸಾದ ಹೆಣ್ಣುಮಕ್ಕಳಿಗೆ ಅಮ್ಮ ಇನ್ನು ಸ್ವಲ್ಪ ದಿನ ಆದ ಬಳಿಕ ಅಜ್ಜಿ ಪಾತ್ರ ನೀಡಿ ಸಂಭ್ರಮಿಸುವ ಸಿನಿಮಂದಿ ಅದೇ ಹೀರೊಗಳಿಗಿಂತ 20 - 30  ವರ್ಷಗಳಷ್ಟು  ಕಡಿಮೆ ಇರುವ ಹೆಣ್ಣುಮಕ್ಕಳನ್ನು ಹೀರೋಯಿನ್‌ಗಳನ್ನಾಗಿ ಮಾಡಿ 'ಅಂಕಲ್ಲು -ಬಾಲಕಿ'  ಡ್ಯುಯೆಟ್ ಹಾಡುವಂತೆ ಮಾಡಿ ಬಿಡ್ತಾರೆ. ಆದರೆ ಐಶ್  ಚಿತ್ರರಂಗದವರ ಪಾಲಿಗೆ ಇನ್ನು ಹರೆಯ ಚೆಲುವೆ. ಆಕೆಗೆ ಮದುವೆ ಮಗಳು ಸ್ವಲ್ಪ ಹೆಚ್ಚೇ ಅನ್ನಿಸುವ ದಪ್ಪ ಎಲ್ಲವೂ ಜೊತೆಗಿದ್ದರೂ ಸಹಿತ ಐಶ್  ಜೊತೆ ನಟಿಸಲು ಯಂಗ್ ಹೀರೋಗಳು ತುದಿಗಾಲಲ್ಲಿ ನಿಂತಿದ್ದಾರೆ.  ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ  ಡೇವಿಡ್ ಧವನ್ ಅವರ ಪುತ್ರ ವರುಣ್ ಜೊತೆ ನಟಿಸುವ ಅವಕಾಶ ದೊರಕಿತ್ತು. 27  ರ ಹರೆಯದ ವರುಣ್ ಜೊತೆ ಬಾದಲ್ಪೂರ್ ಚಿತ್ರದಲ್ಲಿ  ನಟಿಸಲು ಐಶ್ ಆಸಕ್ತಿ ತೋರಿಸಿಲ್ಲ.
 
ಜಜ್ಬಾಗಿಂತಲೂ ಮುನ್ನ ಆಕೆಗೆ ಈ ಆಫರ್ ಬಂದಿದ್ದರು ಸಮ್ಮತಿಸಿಲ್ಲ. ಆರಂಭದಲ್ಲಿ ಸಾಯಿ ರಾಮ್ ಸ್ಟೋರಿ ಬಗ್ಗೆ ಚರ್ಚೆಯನ್ನು ಸಹಿತ ಮಾಡಿದ್ದಾಳೆ ಐಶ್. ಆ ಬಳಿಕ ಅದ್ಯಾಕೋ ಬೇಡ ಎಂದು ಹೇಳಿದ್ದಾಳೆ.ದರೆ ತಿಳಿದು ಬಂದ ಸುದ್ದಿ ಆಕೆಗೆ ವರುಣ್ ಮೇಲೆ ಕೋಪವಲ್ಲ ಬದಲಿಗೆ ಹುಮ ಖುರೇಶಿ, ನವಾಜುದ್ದೀನ್ ಸಿದ್ಧಿಕಿ, ಯಾಮಿ ಗೌತಂ ಇದರಲ್ಲಿ ನಟಿಸುವುದು ಮುಖ್ಯ ಕಾರಣವಂತೆ! ಹೀಗೂ ಉಂಟೆ !! 
 

Share this Story:

Follow Webdunia kannada