Select Your Language

Notifications

webdunia
webdunia
webdunia
webdunia

ಮೇರಿಕೋಮ್ ಪ್ರದರ್ಶನಕ್ಕೆ ಇಂಫಾಲದಲ್ಲಿ ಉಗ್ರಗಾಮಿಗಳ ಅಡ್ಡಿ

ಮೇರಿಕೋಮ್  ಪ್ರದರ್ಶನಕ್ಕೆ ಇಂಫಾಲದಲ್ಲಿ  ಉಗ್ರಗಾಮಿಗಳ ಅಡ್ಡಿ
ಮುಂಬೈ , ಮಂಗಳವಾರ, 9 ಸೆಪ್ಟಂಬರ್ 2014 (11:17 IST)
ಬಾಕ್ಸಿಂಗ್ ಚಾಂಪಿಯನ್ ಆಗಿರುವ ಮೇರಿ ಕೋಂ  ಬದುಕಿನ ಚಿತ್ರಣ ಇರುವ ಮೇರಿ ಕೋಮ್ ಅವರ ಸಿನಿಮಾದಲ್ಲಿ  ಪ್ರಿಯಾಂಕ ಚೋಪ್ರ ನಟಿಸಿರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರ  ಈಗ ಭರ್ಜರಿಯಾಗಿ ಪ್ರದರ್ಶಿತವಾಗುತ್ತಿದ್ದರು ಸಹಿತ  ಮಣಿಪುರಿಯ ರಾಜಧಾನಿ ಇಂಫಾಲದಲ್ಲಿ ಪ್ರದರ್ಶಿತವಾಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಮೇರಿ  ಚಿತ್ರದ ಸಹ ನಿರ್ಮಾಪಕ ವಾಯಕಾಂ 18  ಮೋಶನ್ ಪಿಕ್ಚರ್ಸ್  ಮೇರಿ ಕೋಮ್ ಪತಿ ಆನ್ಲರ್ ಅವರನ್ನು ಸಂಪರ್ಕಿಸಿದ್ದಾರೆ. ಮಣಿಪುರ್ ಮುಖ್ಯಮಂತ್ರಿ ಒಕ್ರಮ್ ಐಬೊಬಿ ಸಿಂಗ್  ಕಚೇರಿಯ ಅಧಿಕಾರಿಗಳ ಜೊತೆ ಸೇರಿ ಚಿತ್ರದ ಬಿಡುಗಡೆ  ಚರ್ಚೆ ಮಾಡಲಾಗುತ್ತಿದೆ. .  ಮೇರಿಕೋಂ ಬಿಡುಗಡೆಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದು 18 ಮೋಶನ್ ಪಿಕ್ಚರ್ಸ್ ಮಂದಿ ಹೇಳಿದ್ದಾರೆ.  
 
ಕಳೆದ ಕೆಲ ಕಾಲದಿಂದ ಮಣಿಪುರ್‌ನಲ್ಲಿ ಹಿಂದಿ ಚಿತ್ರಗಳ ಪ್ರದರ್ಶನವನ್ನು ಉಗ್ರವಾದಿಗಳು ನಿಷೇಧಿಸಿದ್ದಾರೆ. ವಿಶ್ವವೆಲ್ಲಾ ವೀಕ್ಷಿಸುತ್ತಾ ಇದ್ದಾರೆ, ಮಣಿಪುರದಲ್ಲಿ ಈ ಸಿನಿಮಾ ನಿಷೇಧ ಅತ್ಯಂತ ಖೇದ ಉಂಟು ಮಾಡಿದೆ ಎನ್ನುವ ಮಾತನ್ನು ಮೇರಿ ಕೋಂ ತಿಳಿಸಿದ್ದಾರೆ. ಈ ಚಿತ್ರದ ಬಿಡುಗಡೆಗೆ ಸರ್ಕಾರ  ಕ್ರಮ ಕೈಗೊಳ್ಳಬೇಕು ಎನ್ನುವ ಮಾತನ್ನು ಆಕೆ ಹೇಳಿದ್ದಾರೆ. ಇತ್ತೀಚಿಗೆ ಮುಂಬೈನಲ್ಲಿ ಪ್ರದರ್ಶಿತವಾಗಿದ್ದ ಪ್ರೀಮಿಯರ್ ಷೋನಲ್ಲಿ ಆಕೆಯ ಕುಟುಂಬದ ಸದಸ್ಯರು,  ಮಿತ್ರವರ್ಗ  ಭಾಗವಹಿಸಿದ್ದರು. ಪ್ರಿಯಾಂಕ ಚೋಪ್ರ ನಟನೆ ಎಲ್ಲರ ಗಮನ ಸೆಳೆದಿದೆ. 

Share this Story:

Follow Webdunia kannada