Select Your Language

Notifications

webdunia
webdunia
webdunia
webdunia

ನಾನು ನನ್ನ ಭಾಷೆಯ ಚಿತ್ರದಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ನಟಿಸಲ್ಲ ..

ನಾನು ನನ್ನ ಭಾಷೆಯ ಚಿತ್ರದಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ನಟಿಸಲ್ಲ ..
ಮುಂಬೈ , ಮಂಗಳವಾರ, 9 ಸೆಪ್ಟಂಬರ್ 2014 (11:13 IST)
ಸುನೀಲ್ ಶೆಟ್ಟಿ ಕನ್ನಡ ಚಿತ್ರದಲ್ಲಿ ನಟಿಸುತ್ತಾರೆ. ಅದರಲ್ಲಿ ಅವರು ಬಹುಮುಖ್ಯ ಪಾತ್ರದಲ್ಲಿ ನಟಿಸಲು ಸಿದ್ಧ ಆಗಿದ್ದಾರೆ. ನಿಕೇಶ  ನಟಿಸುತ್ತಿರುವ ಅಲೋನ್ ಚಿತ್ರ ಅನೇಕ ಭಾಷೆಗಳಲ್ಲಿ  ಏಕಕಾಲಕ್ಕೆ ಸಿದ್ಧ ಆಗುತ್ತಿದ್ದು, ಇದರಲ್ಲಿ ನಿಕಿಶಾಗೆ ಹೆಚ್ಚು ಚಾನ್ಸ್, ಅಲ್ಲದೆ ಮಹಿಳಾ ಆಧಾರಿತ, ನಾಯಕಿಯಾಧಾರಿತ ಚಿತ್ರವಾದ ಕಾರಣ, ಈ ಸಿನಿಮಾದಲ್ಲಿ ನಾಯಕನಿಗೆ ಕೆಲಸ ಕಡಿಮೆ ಎನ್ನುವ ಸವಿವರ ವಿವರಗಳನ್ನು ಆ ಚಿತ್ರದ ನಿರ್ದೇಶಕ ಜೆಕೆ  ಮಾಧ್ಯಮಗಳ ಮುಂದೆ ಹೇಳಿದ್ದರು. ಅದನ್ನು ಯಥಾವತ್ ತಿಳಿಸಿದ್ದೆವು. 
 
ಅಲ್ಲದೆ ಆ ಚಿತ್ರದಲ್ಲಿ ಸುನೀಲ್ ಶೆಟ್ಟಿ ಅವರು ಪೊಲೀಸ್ ಅಧಿಕಾರಿಯ ಪಾತ್ರಧಾರಿಯಾಗಿದ್ದು ಮುಖ್ಯ ಪಾತ್ರ ನಿರ್ವಹಿಸುತ್ತಾರೆ ಎಂದೆಲ್ಲ ಹೇಳಿದ್ದ ನಿರ್ದೇಶಕರ ಮಾತು ಓಳು ಬರಿ ಓಳು ಎನ್ನುವ ಸುದ್ದಿ ಹೊರ ಬಂದಿದೆ. ಯಾಕೆಂದರೆ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ನಾನು ಕನ್ನಡದವನು. ನನ್ನ ಭಾಷೆಯ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಲಾ? ಅಭಿನಯಿಸುವುದಾದರೆ  ಹೀರೋ ಆಗ್ತೀನೆ ವಿನಃ ಸಣ್ಣಪುಟ್ಟ ಪಾತ್ರಗಳಲ್ಲ ಎಂದು ಹೇಳಿ ನಿರ್ದೇಶಕರ ಸುಳ್ಳು ಸುದ್ದಿ ಹರಡುವ ಕ್ರಿಯೆಗೆ ಬ್ರೇಕ್ ಹಾಕಿದ್ದಾರೆ ಸುನೀಲ್ .

Share this Story:

Follow Webdunia kannada