Webdunia - Bharat's app for daily news and videos

Install App

ನನ್ನ ಮಗುವನ್ನು ನಾನು ಹೇಳಿದ ದಿನ ನೋಡಲು ಬನ್ನಿ

Webdunia
ಬುಧವಾರ, 3 ಸೆಪ್ಟಂಬರ್ 2014 (09:22 IST)
ಬಾಡಿಗೆ ತಾಯಿಯ ಮೂಲಕ  ಮೂರನೇ ಮಗುವನ್ನು ಪಡೆದ ಶಾರುಖ್ ಖಾನ್ . ಆ ಮಗುವಿಗೆ ಅಬ್ರಾಂ ಎನ್ನುವ ಹೆಸರು ನೀಡಿದ್ದಾರೆ. ಆ ಮಗು ಏಳನೇ ತಿಂಗಳಲ್ಲಿ ಜನ್ಮಿಸಿದ ಕಾರಣ ಅನೇಕ ತಿಂಗಳುಗಳು ಆಸ್ಪತ್ರೆಯಲ್ಲಿಯೇ ಇರ ಬೇಕಾಯ್ತು. ಆ ಮಗುವಿನ ಹುಟ್ಟುವುದಕ್ಕಿಂತ ಮುನ್ನ  ಶಾರುಖ್ ಲಿಂಗ ಪರೀಕ್ಷೆ ಮಾಡಿಸಿದ್ದರು ಅದೂ ಇದೂ ಎನ್ನುವ ಸುದ್ದಿಯು ಹರಡಿತ್ತು. ಆದರೆ ಇವೆಲ್ಲದರ ಬಗ್ಗೆ  ಸೂಕ್ತ ಉತ್ತರ ನೀಡಿ ಶಾರುಖ್ ಸುಮ್ಮನಾಗಿಸಿದ್ದರು. ಇತ್ತೀಚಿಗೆ ಮತ್ತೊಮ್ಮೆ ಅವರು ಮೀಡಿಯಾಗಳ  ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ನನ್ನ ಕಿರಿಯ ಮಗ ಅಬ್ರಾಂ ಇನ್ನು ತುಂಬಾ ಚಿಕ್ಕವನು. ಅವನ ಬಗ್ಗೆ ಸಿನಿಮಾ ಪತ್ರಿಕೆಗಳು ಬರೆಯುವುದು ಬೇಕಾಗಿಲ್ಲ. ನಾನು ನಟ ನನ್ನ ಬಗ್ಗೆ ಕೋಪ ಇದ್ರೆ ನನ್ನ ಮೇಲೆ ಬರೆಯಿರಿ ವಿನಃ ಆ ಮಗುವಿನ ಬಗ್ಗೆ ಅಲ್ಲ. ನಾನೇ ಒಮ್ಮೆ ಕರೆದು ಅವನನ್ನು ನಿಮಗೆ ತೋರಿಸುತ್ತೇನೆ, ಅಲ್ಲಿವರೆಗೂ ಸುಮ್ಮನೆ ಇರಿ . ನಾನು ಕರೆಯುವ ತನಕ ಏನೇನೋ  ಕಲ್ಪಿಸಿಕೊಂಡು ಬರೆಯಬೇಡಿ ಎಂದು ಹೇಳಿದ್ದಾರೆ.. ಮುಖ್ಯವಾಗಿ ಮಾಧ್ಯಮಿಗಳ ಬಗ್ಗೆ ಅಸಂತೃಪ್ತಿ ವ್ಯಕ್ತ ಪಡಿಸಿದ್ದಾರೆ ಶಾರುಖ್. 
 
 ಏಳು ತಿಂಗಳಿಗೆ ಜನ್ಮಿಸಿದ್ದ ಆ ಕಂದ ಅನಾರೋಗ್ಯಕ್ಕೆ ಈಡಾಗಿದ್ದ ಎನ್ನುವ ಸಂಗತಿ  ಗೊತ್ತಿದ್ದರು ಬ್ರೆಕಿಂಗ್ ನ್ಯೂಸ್ ಗಾಗಿ ಅನೇಕರು ಆ ಕುಟುಂಬದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದರು. ತಮ್ಮ ಮೂರನೇ ಮಗುವನ್ನು ಮಾಧ್ಯಮದ ಕಣ್ಣಿಗೆ ಬೀಳಿಸಲು ಆಸಕ್ತಿ ತೋರದ ಶಾರೂಖ್ ಖಾನ್ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಓದಿದವನು.. ವಿವೇಚನೆ ಇದೆ ನನಗೆ ಅನಗತ್ಯವಾಗಿ ಏನೇನೋ ಬರೆಯ ಬೇಡಿ.. ! ಈ ಪಾಪ್ಯುಲಾರಿಟಿ  ಅನ್ನುವ ಸಿಂಹಾಸನ ಎಷ್ಟು ಮುಳ್ಳುಗಳನ್ನು ಹೊಂದಿರುತ್ತೆ.. ಅದಕ್ಕೆ ಸಾಧಕರ ಬದುಕೇ ಸಾಕ್ಷಿ  !!
  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?