Webdunia - Bharat's app for daily news and videos

Install App

ನಿಮ್ಮದಾ ಈ ನಾಯಿಮರಿ... ಯಾರದು ಈ ನಾಯಿ... ?

Webdunia
ಬುಧವಾರ, 3 ಸೆಪ್ಟಂಬರ್ 2014 (09:19 IST)
ಸಾಮಾನ್ಯವಾಗಿ  ಚಿತ್ರರಂಗದಲ್ಲಿ ಮಾತ್ರವಲ್ಲ ಯಾವುದೇ ಕ್ಷೇತ್ರದಲ್ಲಿ ಗೆದ್ದವರು ತಮ್ಮ ಬದುಕಲ್ಲಿ ಅನೇಕ ಖುಷಿಗಳನ್ನು ಕಳೆದು ಕೊಳ್ತಾರೆ. ಅವರು ಸಾರ್ವಜನಿಕ ಬದುಕಿನ  ಭಾಗ ಆಗಲು ಸಾಧ್ಯ ಆಗದೆ ಇರುವಂತೆ ಮಾಡುತ್ತದೆ ಅವರ ಸಾಧನೆ. ಇನ್ನು ಕೆಲವು ಸಾಧಕರು ತಾವಾಯ್ತು ತಮ್ಮ ಬದುಕಾಯ್ತು ಎಂದು ಸುಮ್ಮನೆ ಇದ್ದು ಬಿಟ್ಟಿರ್ತಾರೆ. ಆದರೆ ಆ ಎಲ್ಲ ಸಂಗತಿಗಳನ್ನು ಪಕ್ಕಕ್ಕೆ ಇಟ್ಟು ನಟಿ ತಮನ್ನ ತನ್ನ ವಿಶೇಷತೆ ಮೆರೆದಿದ್ದಾಳೆ.  ಮುಂಬೈ ಸಬ್ಬರ್ನ್ ನಲ್ಲಿ ಸದಾ ಬ್ಯುಸಿ ಆಗಿರುವ  ದಕ್ಷಿಣ ಖಾರ್ ನಲ್ಲಿ ತಮ್ಮುಗೆ ಒಂದು ನಾಯಿ ಮರಿ ಸಿಕ್ಕಿತು. ಅದು ಸಾಕಿದ ನಾಯಿಮರಿ ಹಾಗೂ ಕೊಕರ್ ಸ್ಪಾನಿಯಲ್ ಎನ್ನುವ ತಳಿಯದ್ದು ಎನ್ನುವ ಸಂಗತಿ ಆಕೆಯ ಅರಿವಿಗೆ ಬಂತು. ಸರಿ ಅದರ ಯಜಮಾನನನ್ನು ಹುಡುಕಿದರೂ ಪ್ರಯೋಜನ ಆಗಲಿಲ್ಲ. ಆಕೆ ಆ ಪ್ರಾಣಿಯನ್ನು ಬಿಡಲಾಗದೆ ಮನೆಗೆ ಕರೆತಂದಳು. 
 
ಯಾವುದೋ ನಾಯಿ ಸಿಕ್ತು ಬಿಡು.. ಒಂದಷ್ಟು   ಆಹಾರ ಹಾಕಿಕೊಂಡು ಇರೋಣ ಎನ್ನುವ  ನಿರ್ಧಾರಕ್ಕೆ ಬರದೆ ತಮನ್ನ ತನಗೆ ದೊರಕಿದ ಆ ನಾಯಿಯ ಫೋಟೋ ತೆಗೆದು ಅದನ್ನು  ಟ್ವಿಟ್ಟರ್  ಹಾಕಿ ಯಾರಾದರು ಇದರ ಓನರ್ ಇದ್ರೆ ಬನ್ರಪ್ಪ- ಬನ್ರಮ್ಮ ಎಂದು ಹೇಳಿದ್ದಾಳೆ. ಮೊದಲಿನಿಂದಲೂ ಆಕೆಗೆ ನಾಯಿಯ ಬಗ್ಗೆ ಅಪಾರ ಪ್ರೀತಿ. ಮನೆಯಲ್ಲಿ ಪೋಷಕರಿಗೆ ನಾಯಿ ಸಾಕುವ ವಿಷಯದಲ್ಲಿ ವಿರೋಧ. ಈಗ  ಬಯಸದೆ ಬಂದ ಭಾಗ್ಯ ಇದಾಗಿದ್ದು, ಆ ಭಾಗ್ಯ ಎಷ್ಟು ದಿನ ತಮ್ಮು ಬಳಿ ಇರುತ್ತೋ ನೋಡುವ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments