Select Your Language

Notifications

webdunia
webdunia
webdunia
webdunia

ಇಮ್ರಾನ್ ಹಶ್ಮಿ ಮುತ್ತಿಗೆ ಪಾಕಿಸ್ತಾನ್ ಮಂದಿಯ ಕಣ್ಣು ರೆಡ್ ರೆಡ್!

ಇಮ್ರಾನ್ ಹಶ್ಮಿ ಮುತ್ತಿಗೆ  ಪಾಕಿಸ್ತಾನ್ ಮಂದಿಯ ಕಣ್ಣು ರೆಡ್ ರೆಡ್!
ಮುಂಬೈ , ಬುಧವಾರ, 3 ಸೆಪ್ಟಂಬರ್ 2014 (09:17 IST)
ಮುದ್ದು ಮಾಡುವ.. ಮುತ್ತಿಟ್ಟು ಮುತ್ತಿಟ್ಟು ಹೆಸರು ಮಾಡಿದ ನಟಿ ಯಾರು ಎನ್ನುವ ಪ್ರಶ್ನೆಗೆ ಥಟ್ಟಂತ ಹೇಳಿ ಬಿಡ್ತಾರೆ ದೀಪಿಕ ಪಡುಕೋಣೆ ಅಂತ. ಅದೇರೀತಿ ಮುತ್ತಿನ ನಟ ಯಾರು ಅಂದ್ರೆ ಇಮ್ರಾನ್ ಹಶ್ಮಿ ಎಂದು ಯಾರೇ ಆಗಲಿ ನೇರವಾಗಿ ಹಾಗು ಧೈರ್ಯದಿಂದ ಹೇಳಿ ಬಿಡ್ತಾರೆ. ಅಷ್ಟೊಂದು ಮುತ್ತು ಕೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ ಇಮ್ರಾನ್.ಅಷ್ಟೇ ಅಲ್ಲದೆ ಆತನಿಗೆ ತನ್ನ ಮುತ್ತಿನ ಬಗ್ಗೆ ಸಾಕಷ್ಟು ಹೆಮ್ಮೆ ಇದೆ. ತಾನು ನೀಡುವ ಮುತ್ತು ಹೆಚ್ಚು ಭಾವುಕತೆ, ರಸಿಕತೆ ಮತ್ತು ಎಲ್ಲಾ ಕಥೆಯನ್ನು ಹೊಂದಿರುತ್ತದೆ, ಆದರೆ ಈಗ ನವನಟರ   ಮುತ್ತುಗಳು ಕೃತಕತೆ , ನಿಸ್ಸಾರತೆ ಆ ಕಥೆ ಈ ಕಥೆ ಹೊಂದಿದೆ ಎನ್ನುವ ಮಾತನ್ನು ಸಹಿತ ಆತ ಹೇಳಿದ್ದರು. ಮುತ್ತು ಕೊಡುವುದರಲ್ಲಿ ತಾನು ನಿಸ್ಸೀಮ ಅನ್ನುವುದನ್ನು ತಿಳಿಸುವ ರಭಸದಲ್ಲಿ ಇಮ್ರಾನ್ ಹದ್ದು ಮೀರಿದ್ದಾರೆ ಎಂದು  ಮಾಧ್ಯಮಗಳು ಬೇಸರ ಹೊಂದಿವೆ.
 
ಹೀರೋ ಇಮ್ರಾನ್ ಹಶ್ಮಿ ಹೊಸ ಚಿತ್ರ ರಾಜ ನಟವರ್ ಲಾಲ್  . ಅದರಲ್ಲಿ ಪಾಕಿಸ್ತಾನಿ ಟಾಪ್ ನಟಿ ಹುಮೈವೋ  ವೂಲಿಕ್  ಈತನ ಜೊತೆಗಾತಿ ಆಗಿದ್ದಾಳೆ. ಈ  ಚಿತ್ರದಲ್ಲಿ ಆತ ಆ ಪಾಕಿಸ್ತಾನಿ ನಟಿಗೆ ನೀಡಿದ ಮುತ್ತು ಕಂಡು ಅಲ್ಲಿನವರು ಕೆಂಗೆಟ್ಟು ಹೋಗಿದ್ದಾರೆ. ಅಷ್ಟೇ ಅಲ್ಲದೆ ಆ ಮುದ್ದನ್ನು ಕಟ್ ಮಾಡಿ ಎಂದು ಸಾಮಾನ್ಯರು ಹೇಳುತ್ತಿದ್ದಾರಂತೆ. ಪಾಕ್ ಸಂಸ್ಕೃತಿ... ಅದೂ... ಇದನ್ನು ವೂಲಿಕ್ ಹಾಳು ಮಾಡಿದ್ದಾಳೆ  ಈ ಕ್ರಿಯೆಯಿಂದ ಎಂದು ಅಲ್ಲಿನವರ ಕಣ್ಣು ರ ರೆಡ್ ರೆಡ್ ಆಗಿದೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.   ಸೊ ಪಾಕಿಗಳು ಯಾವ ರೀತಿ ಕೋಪ ತೀರಿಸಿ ಕೊಳ್ತಾರೋ ಸಧ್ಯಕ್ಕೆ ನಮಗೆ ಗೊತ್ತಿಲ್ಲ. 

Share this Story:

Follow Webdunia kannada