Select Your Language

Notifications

webdunia
webdunia
webdunia
webdunia

ನನ್ನ ವೃತ್ತಿಯೊಂದಿಗೆ ನಾನು ಮದುವೆ ಆಗಿದ್ದೀನಿ..ನನ್ನ ಗಮನ ಕೇವಲ ಸಿನಿಮ ಕಡೆಗೆ ಮಾತ್ರ !

ನನ್ನ ವೃತ್ತಿಯೊಂದಿಗೆ ನಾನು ಮದುವೆ ಆಗಿದ್ದೀನಿ..ನನ್ನ  ಗಮನ ಕೇವಲ ಸಿನಿಮ ಕಡೆಗೆ ಮಾತ್ರ !
ಮುಂಬೈ , ಶನಿವಾರ, 23 ಆಗಸ್ಟ್ 2014 (10:09 IST)
ಬಾಲಿವುಡ್ ನ ಹಾಟೆಸ್ಟ್ ನಟ ಯಾರು ಅಂದ್ರೆ ರಣಬೀರ್ ಕಪೂರ್ ಹೆಸರನ್ನು ಸೂಚಿಸುತ್ತಾರೆ ಹೆಣ್ಣುಮಕ್ಕಳು. ಅವರು ಮಾತ್ರವಲ್ಲ ಒಟ್ಟಾರೆ ಅಂತಹ ಅಭಿಪ್ರಾಯ ಬರುವಂತೆ ಇದ್ದಾರೆ ರಣಬೀರ್ ಕಪೂರ್. ಅದೇ ರೀತಿ  ಹಾಟೆಸ್ಟ್ ಪೇರ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ಗೊತ್ತಿದೆ ರಣ ಬೀರ್ ಕಪೂರ್ ಮತ್ತು ಕತ್ರಿನ ಕೈಫ್. ಈ ಜೋಡಿ ಕಳೆದ ಕೆಲವು ವರ್ಷಗಳಿಂದ ಮಾಡಿರುವಸುದ್ದಿ ಅಷ್ಟಿಷ್ಟಲ್ಲ . ಅವರಿಬ್ಬರೂ ಪ್ರತಿಯೊಂದು ಪತ್ರಿಕೆ , ದೃಶ್ಯ ಮಾಧ್ಯಮದ ಹಾಟೆಸ್ಟ್ ಪೇರ್ ಆಗಿ ರಾರಾಜಿಸಿದ್ದರು . ಇನ್ನೇನು ಮದುವೆ ಆಗಿಯೇ ಬಿಡ್ತಾರೆ ಎಂದು ಎಲ್ಲರು ನಿರ್ಧಾರ ಮಾಡಿ ಆಯ್ತು ಆದರೆ ಅದ್ಯಾಕೋ ಈ ಜೋಡಿ ಈ ವಿಷಯಕ್ಕೆ ಸಂಬಂಧಪಟ್ಟಂತೆ ಸೈಲೆಂಟ್ ಆಗಿದೆ. 
 
ಮುಖ್ಯವಾಗಿ  ಇವರಿಬ್ಬರ ಪ್ರೀತಿ ಬ್ರೇಕ್ ಅಪ್ ಆಗಿದೆ ಎನ್ನುವ ಸಣ್ಣ ಸುದ್ದಿ ಈಗ ದೊಡ್ಡದಾಗಿ ಬೆಳೆಯುವಂತಹ ಮಾತನ್ನು ರಣಬೀರ್ ಕಪೂರ್ ಆಡಿದ್ದಾರೆ. ಕತ್ರಿನ ನನ್ನ ಹಳೆಯ ಗೆಳತಿ.ಇತ್ತೀಚೆಗೆ ನಾನು ಲಂಡನ್ ಗೆ ಹೋಗಿ ಆಕೆಯ ತಾಯಿ ಜೊತೆ ಮಾತನಾಡಿದೆ. ಸಧ್ಯಕ್ಕೆ ನಾನು ನನ್ನ ವೃತ್ತಿಯ ಜೊತೆ ಮದುವೆ ಮಾಡಿಕೊಂಡಿದ್ದೇನೆ. ನನ್ನ ಗಮನ ಏನಿದ್ದರೂ ಸಿನಿಮಾ ಸಿನಿಮಾ ಮತ್ತು ಸಿನಿಮಾ ಎಂದು ಹೇಳಿದ್ದಾರೆ. ಈ ಮುಖಾಂತರ ಈ ಜೋಡಿಯ ಗಟ್ಟಿಮೇಳ   ಆಗುವ ಸಾಧ್ಯತೆ ಕಡಿಮೆ ಆಗಿದೆ. ಯಾವಾಗ ಕಡಿಮೆ ಆಗುತ್ತದೆಯೋ ಆಗ ಕ್ಷೀಣಿಸುವ ದಿನಗಳು ಸಮೀಪದಲ್ಲಿ ಇದೆ ಎಂದೇ ಅರ್ಥ. ಕತ್ರಿನ  2015  ರಲ್ಲಿ ಮದುವೆ ಆಗ್ತೀನಿ ಎಂದು ಹೇಳಿದ್ದಾಳೆ. ಆಕೆಯ ಮದುವೆ ಯಾರೊಂದಿಗೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. 

Share this Story:

Follow Webdunia kannada