Select Your Language

Notifications

webdunia
webdunia
webdunia
webdunia

ಆತ ಅಬ್ಸೆಸಿವ್ ಕಂಪಲ್ಸೀವ್ ಡಿಜಾರ್ಡರ್ ಎನ್ನುವ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ.. ಯಾರಾತ ?

ಆತ ಅಬ್ಸೆಸಿವ್ ಕಂಪಲ್ಸೀವ್ ಡಿಜಾರ್ಡರ್ ಎನ್ನುವ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ.. ಯಾರಾತ ?
ಮುಂಬೈ , ಶುಕ್ರವಾರ, 22 ಆಗಸ್ಟ್ 2014 (10:33 IST)
ಬಾಲಿವುಡ್ ನ ಯಶಸ್ವಿತಾರೆ ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಅವರ ನಡುವಿನ ಡೇಟಿಂಗ್ ವಿಷ್ಯ ಬಾಲಿವುಡ್ ನ ತೆರೆದಿಟ್ಟ ಸತ್ಯ ಸಂಗತಿ ಆಗಿದೆ.ಈ ಬಗ್ಗೆ ವಿವರಿಸುವ ಅಗತ್ಯ ಇಲ್ಲ.ಆದರೆ   ತನ್ನ ಮಾಜಿ ಪ್ರಿಯಕರನಿಗೆ ಸಂಬಂಧಪಟ್ಟಂತೆ ಆಕೆ ತಿಳಿಸಿರುವ ಸಂಗತಿಗಳು ಮಾತ್ರ ಬಾಲಿವುಡ್ ಮಂದಿಗೆ ಮಾತ್ರವಲ್ಲ ಮೀಡಿಯಾದವರು ಆಕೆ ಇನ್ನೇನು ಹೇಳುತ್ತಾಳೋ ಎಂದು ಕಾಯುವಂತೆ ಮಾಡಿದೆ.
 
ನಿಜವಾದ ಪ್ರೀತಿ ಇದಲ್ಲಿ ಅವರ ಲೋಪಗಳು ಸಹಿತ ಇಷ್ಟ ಆಗುತ್ತದೆ ಎನ್ನುವ ಸಂಗತಿಯನ್ನು ಆಕೆ ಹೇಳಿದ್ದಾಳೆ. ಆದ್ದರಿಂದ ರಣಬೀರ್ ಕೆಲವು  ಸಮಸ್ಯೆ ಎದುರಿಸುತ್ತಿದ್ದಾರೆ, ಆದರೂ ತಾನು ಅಂತಹ ಯಾವುದೇ ಸಂಗತಿಗಳಿಗೂ ಸಹಿತ ಆದ್ಯತೆ ನೀಡಲ್ಲ ಎನ್ನುವ ಸಂಗತಿ ಹೇಳಿದ್ದಾಳೆ. 
 
ರಣಬೀರ್ ಬಗ್ಗೆ ಹೇಳುತ್ತಾ ಆತ ಅಬ್ಸೆಸಿವ್ ಕಂಪಲ್ಸೀವ್ ಡಿಜಾರ್ಡರ್ ಎನ್ನುವ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಹೊಂದಿರುವವರು ಸುಮ್ಮ ಸುಮ್ಮನೆ  ಹೆದರುವುದು,ಆರಾಮವಾಗಿ ಇಲ್ಲದೆ ಇರುವುದು, ಮಾಡಿದ ಕೆಲಸವನ್ನು ಮತ್ತೆ ಮತ್ತೆ ಮಾಡುವುದು, ಅನಗತ್ಯ ಆತುರ ಪ್ರದರ್ಶಿಸುವುದು ಈ ರೀತಿಯ ಸಂಗತಿಗಳಿಂದ ಹೆಚ್ಚು ಗೊತ್ತಾಗುತ್ತಾರೆ.  
 
........ಇನ್ನು ಇದೆ. ಮುಂದೆ ಓದಿ 
 
 

ಈ ಕಾಯಿಲೆಯ ಲಕ್ಷಣಗಳೆಲ್ಲವೂ   ರಣಬೀರ್ ಗೆ ಇದೆ ಎಂದಿದ್ದಾಳೆ ದೀಪಿ. ನೀಟಾಗಿ ಇದ್ದರೂ ಸಹಿತ ಅದನ್ನು ಮತ್ತೆ ಮತ್ತೆ ಸ್ವಚ್ಛ ಮಾಡಲು ಬಯಸುವುದು, ಮತ್ತೆಮತ್ತೆ ಗಮನಿಸುವುದು, ಆತುರತೆ,ಹೆಚ್ಚು ಪ್ರೀತಿಸುವುದು, ಲೈಂಗಿಕ ವಿಷಯದಲ್ಲಿ ಹೆಚ್ಚು ಮುಂದುವರೆಯುವುದು ಇವೆಲ್ಲವೂ ಸಹಿತ ಆ ಕಾಯಿಲೆಯ ಲಕ್ಷಣಗಳಾಗಿವೆ, ಲೋಕೇಶನ್ ನಲ್ಲಿ ಆತನ ವರ್ತನೆ ವಿಭಿನ್ನವಾಗಿರುತ್ತದೆ ಎನ್ನುವ ಸಂಗತಿಯನ್ನು ಸಹಿತ ಹೇಳಿದ್ದಾಳೆ ಈ ಚೆಲುವೆ. 
 
ಸ್ವಲ್ಪ ವೇಳೆಯಲ್ಲೇ ಮತ್ತೆ ಪರ್ಫ್ಯೂಮ್  ಬಳಸುವುದು, ಮತ್ತೆ ಮತ್ತೆ ತಲೆ ಬಾಚಿಕೊಳ್ಳುವುದು, ಚುಯಿಂಗಂ ಅಗೀತಾ ಇರೋದು, ಇವೆಲ್ಲ ಲಕ್ಷಣಗಳು ಬೇರೆಯವರಿಗೆ  ವಿಚಿತ್ರವಾಗಿ ಕಂಡರೂ ತನಗೆ ಮಾತ್ರ ಅಮಾಯಕನಾಗಿ ಕಾಣುತ್ತಾರೆ ಎಂದು ಹೊಗಳುತ್ತಾ ಆತನ ಲೋಪಗಳನ್ನು ನಗುತ್ತ ಪ್ರಪಂಚದ ಮುಂದೆ ಬಿಚ್ಚಿದ್ದಾಳೆ ದೀಪಿಕ.. ಇಷ್ಟು ದಿನ ಆದ ಬಳಿಕ ಹೀಗೆ ಬಿಚ್ಚಿಡುವ ಬುದ್ಧಿ ಆಕೆಗೆ ಬಂದಿದ್ದಾದರೂ ಯಾಕೆ? ಹಳೆಯ ಸೇಡು ಇಂದು ಹೊರ ಹೊಮ್ಮಿದೆಯೇ? ಎಲ್ಲವೂ ಸಧ್ಯಕ್ಕೆ ಕ್ವಶ್ಚನ್ ಮಾರ್ಕ್. 

Share this Story:

Follow Webdunia kannada