Select Your Language

Notifications

webdunia
webdunia
webdunia
webdunia

ಮೊದಲು ಬೆತ್ತಲೆ ಆಮೇಲೆ ಮೈತುಂಬ ಬಟ್ಟೆ ಹಾಕೊಂಡು ಆಮೀರ್ ಖಾನ್ ಪೋಟೋ ತೆಗೆಸಿಕೊಂಡರಂತೆ .. !

ಮೊದಲು ಬೆತ್ತಲೆ ಆಮೇಲೆ ಮೈತುಂಬ ಬಟ್ಟೆ ಹಾಕೊಂಡು ಆಮೀರ್ ಖಾನ್  ಪೋಟೋ ತೆಗೆಸಿಕೊಂಡರಂತೆ  .. !
ಮುಂಬೈ , ಶುಕ್ರವಾರ, 22 ಆಗಸ್ಟ್ 2014 (10:30 IST)
ಪೀಕೆ ಚಿತ್ರದ ಮೊದಲ ಪೋಸ್ಟರ್ ಅದೇ ಕಣ್ರೀ ಬೆತ್ತಲೆ ಚಿತ್ರಕಥೆ ಸಾಕಷ್ಟು ಸುದ್ದಿ ಮಾಡಿತ್ತು. ತನ್ನ ಬೆತ್ತಲೆ ರೂಪವನ್ನು  ರೈಲು ಕಂಬಿ ಮೇಲೆ ನಿಂತು ಪ್ರದರ್ಶನ ಮಾಡಿದ್ದರು ಆಮೀರ್ ಪೀಕೆ ಚಿತ್ರದ ಪೋಸ್ಟರ್ನಲ್ಲಿ. ಆದರೆ ಆ ಸಂಗತಿ ಸಾಕಷ್ಟು ಗಲಾಟೆ ಗದ್ದಲ ಎಬ್ಬಿಸಿದ್ದು ಎಲ್ಲರಿಗೂ ತಿಳಿದೇ ಇದೆ, ಅದನ್ನು ಆತ ಆರಾಮವಾಗಿ ಎದುರಿಸಿದರು.. ಸರಿಯಾದ ಉತ್ತರ ಹೇಳಿ ಎಲ್ಲರ ಬಳಿ ತಾನು ಸುಮ್ಮನೆ ಹೆದರಲ್ಲ, ನಾನು ಮಾಡಿದ ಕೆಲಸ ಸದಾ ಭಿನ್ನ ಎಂದು ಹೇಳಿದರು.
 
ತಾನು ಪಬ್ಲಿಸಿಟಿಗಾಗಿ ಈ ಪೋಸ್ಟರ್  ಬಿಡುಗಡೆ ಮಾಡಲಿಲ್ಲ, ಆ ಸಿನಿಮಾ ಪೂರ್ತಿ ವೀಕ್ಷಿಸಿದ ಬಳಿಕ ನಿಮಗೆ ಅರ್ಥ ಆಗುತ್ತದೆ ಎನ್ನುವ ಉತ್ತರ ಕೊಟ್ಟಿದ್ದಾರೆ. ಮತ್ತೆ ಈಗಷ್ಟೆ ಬೇರೆ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ ಆಮೀರ್. ಆರಂಭದ ಪೋಸ್ಟರ್ ನಲ್ಲಿ ಟ್ರಾನ್ಸ್ಸಿಸ್ಟರ್ ಅಡ್ಡ ಹಿಡಿದು ನಿಂತಿದ್ದ ಆಮೀರ್ ಈಗ ಪೂರ್ತಿ ಬಟ್ಟೆ ಧರಿಸಿ ಬ್ಯಾಂಡ್ ಮೇಲೆ ಹಿಡಿದು ನಿಂತಿರುವ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಒಟ್ಟಾರೆ ದಿನಕ್ಕೊಂದು ಹೊಸ ಸಂಗತಿಗಳಿಂದ ಈ ಚಿತ್ರದ ಪೋಸ್ಟರ್ ಹೊರ ಬರುತ್ತಿದೆ.ಜನಕ್ಕೆ ದಿನೇ ದಿನೇಆ ಚಿತ್ರದ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿದೆ ಎನ್ನುವುದು ಸತ್ಯ ! . 

Share this Story:

Follow Webdunia kannada