Select Your Language

Notifications

webdunia
webdunia
webdunia
webdunia

ಹಣದ ಸುರಿಮಳೆ ಸುರಿಸುತ್ತಿರುವ ಅಜಯ್ ದೇವಗನ್ ಸಿಂಘಂ ರಿಟರ್ನ್ಸ್

ಹಣದ ಸುರಿಮಳೆ ಸುರಿಸುತ್ತಿರುವ ಅಜಯ್ ದೇವಗನ್ ಸಿಂಘಂ ರಿಟರ್ನ್ಸ್
ಮುಂಬೈ , ಗುರುವಾರ, 21 ಆಗಸ್ಟ್ 2014 (10:09 IST)
ಅಜಯ್ ದೇವಗನ್ ಮತ್ತು ಕರೀನ ಕಪೂರ್ ಅವರ ನಟನೆಯ ಸಿಂಘಂ ರಿಟರ್ನ್ಸ್ ಚಿತ್ರವೂ ತುಂಬಾ ಕಲೆಕ್ಷನ್  ಗಳಿಸುತ್ತಿದೆ. ಬಿಡುಗಡೆಯಾದ ದಿನದಿಂದ ಈ ಚಿತ್ರವೂ ಅತ್ಯುತ್ತಮ ರೀತಿಯಲ್ಲಿ ಗಳಿಕೆಯನ್ನು ಮಾಡುತ್ತಿದೆ. ಈ ಚಿತ್ರ ಆರಂಭಿಕ ದಿನದಲ್ಲಿ ಸುಮಾರು 30  ಕೋಟಿಗಳಷ್ಟು ಮೊತ್ತವನ್ನು ಗಳಿಕೆ ಮಾಡಿತು. ಈ ಮೂಲಕ ಅದು 100  ಕೋಟಿ ಕ್ಲಬ್ ಗೆ ಸೇರುವ   ಕಾಲ ಬೇಗ ಬರಲಿದೆ ಎಂದು ಬಾಕ್ಸಾಫೀಸ್ ತಜ್ಞರು ಹೇಳಿದ್ದಾರೆ. ಈಗ ಕಳೆದ ನಾಲ್ಕು ದಿನಗಳಿಂದ 92 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿ 2014  ರಲ್ಲಿ ಬಿಡುಗಡೆ ಆದ ಅತ್ಯಧಿಕ ಕಲೆಕ್ಷನ್  ಮಾಡಿದ ಚಿತ್ರಗಳ ಸಾಲಿಗೆ ಸೇರ್ಪಡೆ ಆಗಿದೆ.  
 
ಕಾಲಿವುಡ್  ನಟ  ಸೂರ್ಯ ಅಭಿನಯಿಸಿದ ಸಿಂಗಂ 2  ಸಹ ಕೇವಲ ನಾಲ್ಕು ದಿನದಲ್ಲೇ ಸಿಕ್ಕಾಪಟ್ಟೆ ಗಳಿಕೆ  ಮಾಡಿ ಡಿಸ್ಟ್ರಿಬ್ಯೂಟರ್ಸ್  ಹಣದ ಮಳೆ ಸುರಿಸಿತ್ತು. ಹಿಂದಿಯಲ್ಲೂ ಸಹ ಅದೇ ರಭಸ ಆರಂಭ ಆಗಿದೆ. ಈ ಮೂಲಕ ಸಿಂಘಂ ಹೆಸರು ಒಳ್ಳೆಯ ಹಣವನ್ನು ನೀಡುತ್ತಿದೆ ಚಿತ್ರದ ಮಂದಿಗೆ.  ಸಿನಿಮಾವನ್ನು ನಿರ್ದೇಶಿಸಿದ್ದಾರೆ ರೋಹಿತ್ ಶೆಟ್ಟಿ. 

Share this Story:

Follow Webdunia kannada