Select Your Language

Notifications

webdunia
webdunia
webdunia
webdunia

ಶಾರುಖ್ - ಕಾಜೋಲ್ ಮತ್ತೆ ನಟಿಸ್ತಾರಂತೆ..ಇದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆಯಂತೆ !

ಶಾರುಖ್ - ಕಾಜೋಲ್ ಮತ್ತೆ ನಟಿಸ್ತಾರಂತೆ..ಇದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆಯಂತೆ !
ಮುಂಬೈ , ಗುರುವಾರ, 21 ಆಗಸ್ಟ್ 2014 (09:57 IST)
ಆ ಚಿತ್ರದಲ್ಲಿ ಎಲ್ಲವೂ ಸಹಿತ ಇಷ್ಟ  ಆಯ್ತು ಜನಕ್ಕೆ. ಅದು ರೀಮೇಡ್  ಮಾಡದಷ್ಟು   ಪ್ರಖ್ಯಾತವಾಯ್ತು. ಥಿಯೇಟರ್ ನಲ್ಲಿ ವರ್ಷಾನುಗಟ್ಟಲೆ ನಡೆಯಿತು. ಆ ಚಿತ್ರದ ಪಾತ್ರಧಾರಿಗಳಾಗಿದ್ದ ರಾಜ್ ಮತ್ತು ಸಿಮ್ರಾನ್ ಹಾಗೂ ಆ ಸಿನಿಮಾದ ಹಾಡುಗಳು ಯುವಜನಾಂಗದ ಜೀವನ ಹಾಡಾಯಿತು. ಅಂದಂಗೆ ಇಷ್ಟೆಲ್ಲಾ ವಿವರ ಹೇಳುತ್ತಿರುವ ಜೋಡಿ ಮತ್ತು ಚಿತ್ರ ಮತ್ಯಾವುದು ಅಲ್ಲ ಶಾರೂಖ್ ಖಾನ್ ಮತ್ತು ಕಾಜೋಲ್ ನಟನೆಯ ದಿಲ್ವಾಲೇ ದುಲ್ಹನಿಯಾ ಲೇಜಾಯೆಂಗೆ . ಡಿಡಿಎಲ್ಜೆ ಎನ್ನುವ ಹೆಸರಿನಿಂದ  ಖ್ಯಾತಿ ಆಗಿರುವ ಈ ಚಿತ್ರ ಮಾಡಿದಷ್ಟು ದಾಖಲೆ ಮತ್ಯಾವ ಚಿತ್ರವೂ ಸಹಿತ ಮಾಡಿಲ್ಲವೇನೋ! ಬಾಜಿಗರ್ ಮೂಲಕ ಈ ಜೋಡಿ ಒಟ್ಟಾಗಿ ನಟಿಸುವ ಕಾರ್ಯಕ್ರಮ ಆರಂಭಿಸಿದರು. ನಂತರ ಡಿಡಿಎಲ್ಜೆ .... ಹೀಗೆ ಪಟ್ಟಿ ದೊಡ್ಡದು.. ಆದರೂ ಸಹಿತ ಅತ್ಯಂತ ಜನಪ್ರಿಯ ಜೋಡಿಯಾಗಿ ಬಾಲಿವುಡ್ ನಲ್ಲಿ ರಾರಾಜಿಸಿತು.
 
 ಆ ಬಳಿಕ ಕಾಜೋಲ್ ಮಕ್ಕಳು ಸಂಸಾರ ಅಂತ  ತನ್ನ ಗಮನ ಮನೆಯತ್ತ ಕೇಂದ್ರೀಕರಿಸಿದ ಕಾರಣ  ಬಣ್ಣ ಹಚ್ಚಲು ಆದ್ಯತೆ ನೀಡಲೇ ಇಲ್ಲ. ಈಗ ಮತ್ತೆ ಆಕೆ ಬಣ್ಣ ಹಚ್ಚುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ವಿಲನ್ ಪಾತ್ರಧಾರಿ ಆಗುವ ಸಾಧ್ಯತೆ  ಇದೆ ಎಂದು ಕೆಲವು  ದಿನಗಳ ಹಿಂದೆ ಬರೆದಿದ್ದೆವು, ಆದರೆ ಈಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ, ಈ ಜೋಡಿ ಮತ್ತೆ ಒಟ್ಟಾಗಿ ನಟಿಸಲು ಸಿದ್ಧತೆ ನಡೆಸಿದ್ದಾರಂತೆ. ಮೈ ನೆಮ್ ಈಜ್ ಖಾನ್ ನಂತರ ಮತ್ತೇ ಒಟ್ಟಾಗಿ ನಟಿಸುವುದಕ್ಕೆ ಸಿದ್ಧ ಆಗಿದ್ದಾರೆ. ಈ ಮುಖಾಂತರ ಅವರು ಇತಿಹಾಸ ಮರುಕಳಿಸುವ ನಿಟ್ಟಿನಲ್ಲಿ ಸಾಗಿದ್ದಾರೆ. ಇದನ್ನು ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿದ್ದಾರಂತೆ! 

Share this Story:

Follow Webdunia kannada