Select Your Language

Notifications

webdunia
webdunia
webdunia
webdunia

ಎರಡು ಚಿತ್ರಗಳು ಉತ್ತಮ ಕಥೆ ಹೊಂದಿದೆ..ತಪ್ಪದೆ ವೀಕ್ಷಿಸಿ- ಶಾಹಿದ್ ಕಪೂರ್

ಎರಡು ಚಿತ್ರಗಳು ಉತ್ತಮ ಕಥೆ ಹೊಂದಿದೆ..ತಪ್ಪದೆ ವೀಕ್ಷಿಸಿ- ಶಾಹಿದ್ ಕಪೂರ್
ಮುಂಬೈ , ಬುಧವಾರ, 20 ಆಗಸ್ಟ್ 2014 (10:30 IST)
ಅಕ್ಟೋಬರ್ 2 ಗಾಂಧಿ ಜಯಂತಿ , ರಾಷ್ಟ್ರಪಿತನ ಜನ್ಮದಿನದಂದು ಸಿನಿಮಾ ಬಿಡುಗಡೆ ಮಾಡುವ ಸಂಭ್ರಮ ಸಿನಿ ಮಂದಿಯದ್ದಾಗಿದೆ. ಅಂದು ಹೈದರ್ ಮತ್ತು ಬ್ಯಾಂಗ್ ಬ್ಯಾಂಗ್ ಚಿತ್ರ ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಈ ಎರಡು ಚಿತ್ರಗಳು ಸಾಹಿತ ಭಿನ್ನವಾದ ಕಥಾ ಹಂದರ ಹೊಂದಿದೆ ಎನ್ನುವ ಮಾತನ್ನು ಬಾಲಿವುಡ್ ಚಾಕೊಲೆಟ್ ಹೀರೋ ಶಾಹಿದ್ ಕಪೂರ್ ಹೇಳಿದ್ದಾರೆ. ಅವೆರಡು ಚಿತ್ರಗಳು ಚೆನ್ನಾಗಿ ಗಳಿಕೆ ಮಾಡಿ ಜನಮನಕ್ಕೆ ಹತ್ತಿರ ಆಗುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ ಶಾಹಿದ್. ಹೃತಿಕ್ ಗೆ ಗುಡ್ಲಕ್ ಹೇಳಿರುವ ಶಾಹಿದ್ ಈ ಬ್ಯಾಂಗ್ ಬ್ಯಾಂಗ್ ಚಿತ್ರದ ಪ್ರೊಮೊ ನೋಡಿದ್ದೇನೆ. ತುಂಬಾ ಚಂದ ಇದೆ. ನಾನು ತಪ್ಪದೆ ಆ ಚಿತ್ರವನ್ನು ಥಿಯೇಟರ್ ಗೆ ಹೋಗಿ ವೀಕ್ಷಿಸುತ್ತೇನೆ ಎನ್ನುವ ಮಾತನ್ನು ಹೇಳಿದ್ದಾರೆ ಶಾಹಿದ್. 
 
 ಒಂದೇ ದಿನ ಈ ಎರಡು ಚಿತ್ರಗಳು ಬಿಡುಗಡೆ ಆಗುತ್ತಿರುವುದಕ್ಕೆ ತನಗೆ ಎಂದಿಗೂ ಆತಂಕ ಇಲ್ಲ. ಏಕೆಂದರೆ ಅವೆರಡು ಅತ್ಯಂತ ಅಪರೂಪದ ಸಿನಿಮಾಗಳು . ಮುಖ್ಯವಾಗಿ ಭಾರಿ ಬಜೆಟ್ ಇಲ್ಲದ ಹೈದರ್ ಚಿತ್ರದ ಬಗ್ಗೆ ನನಗೆ ಸಾಕಷ್ಟು ವಿಶ್ವಾಸವಿದೆ. ಎರಡು ಸಿನಿಮಾ ಒಟ್ಟಿಗೆ ಬಿಡುಗಡೆ ಆಗುತ್ತಿರುವುದರಿಂದ ಪ್ರೇಕ್ಷಕರು ಗಲಿಬಿಲಿ ಆಗುವ ಅಗತ್ಯವಿಲ್ಲ. ಎರಡು ಚಿತ್ರವನ್ನು ವೀಕ್ಷಿಸಿ ಎಂಜಾಯ್ ಮಾಡಿ ಎನ್ನುವ ಮಾತನ್ನು ಹೇಳಿದ್ದಾರೆ ಶಾಹಿದ್.ಎರಡುಭಿನ್ನ ರೀತಿಯ ಸಂಗತಿಗಳನ್ನು ಈ ಎರಡು ಚಿತ್ರಗಳು ಹೊಂದಿವೆ ಎಂದಿದ್ದಾರೆ ಶಾಹಿದ್. ಹೈದರ್ ಚಿತ್ರವನ್ನು ವಿಶಾಲ್ ಭಾರಧ್ವಾಜ್ ಅವರು ನಿರ್ದೇಶನ ಮಾಡಿದ್ದಾರೆ, ಬ್ಯಾಂಗ್ ಬ್ಯಾಂಗ್ ಗೆ ಸಿದ್ಧಾರ್ಥ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಹೈದರ್ ನಲ್ಲಿ ಶಾಹಿದ್ ಅಲ್ಲದೆ ತಬು, ಇರ್ಫಾನ್ ಖಾನ್, ಕೇಕೆ ಮೆನನ್, ಶ್ರದ್ಧಾ ಕಪೂರ್ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಬ್ಯಾಂಗ್  ಬ್ಯಾಂಗ್ನಲ್ಲಿ ಹೃತಿಕ್ ಮತ್ತು ಕತ್ರಿನ ಮುಖ್ಯ ಪಾತ್ರಧಾರಿಗಳಾಗಿದ್ದಾರೆ.   

Share this Story:

Follow Webdunia kannada