Select Your Language

Notifications

webdunia
webdunia
webdunia
webdunia

ನಾನು ಅನಗತ್ಯ ಖರ್ಚು ಮಾಡಲ್ಲ ಹಾಗೆ ಮಾಡುವುದು ನನಗೆ ಗೊತ್ತೇ ಇಲ್ಲ - ಕತ್ರಿನ ಕೈಫ್

ನಾನು ಅನಗತ್ಯ ಖರ್ಚು ಮಾಡಲ್ಲ ಹಾಗೆ ಮಾಡುವುದು ನನಗೆ ಗೊತ್ತೇ ಇಲ್ಲ -  ಕತ್ರಿನ ಕೈಫ್
ಮುಂಬೈ , ಬುಧವಾರ, 20 ಆಗಸ್ಟ್ 2014 (10:24 IST)
ಕೆಲವರ ಅದೃಷ್ಟ ಯಾವರೀತಿ ಇರುತ್ತದೆ ಎನ್ನುವುದು ಗೊತ್ತೇ ಇರಲ್ಲ. ನಟಿ ಕತ್ರಿನ ಕೈಫ್ ವಿಷಯದಲ್ಲೂ ಸಹಿತ ಹೀಗೆ ಆಗಿದೆ. ಆರಂಭಿಕ ಹಣದಲ್ಲಿ ಬರಿ ಫ್ಲಾಪ್ ಚಿತ್ರಗಳ ನಾಯಕಿ ಎಂದು ಬಿಂಬಿತ ಆಗಿದ್ದ ಈ ಚೆಲುವೆ ಅದಾದ ಬಳಿಕ ಗೆಲುವನ್ನು ತನ್ನದಾಗಿಸಿಕೊಂಡಳು. ಈಗ ಏಕೆ ಬಾಲಿವುಡ್ ನ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬಳು.ಇತ್ತೀಚಿಗೆ ಫೋರ್ಬ್ಸ್ ಇಂಡಿಯ ದಲ್ಲಿ ಟಾಪ್ ಟೆನ್ ನಲ್ಲಿ ಸ್ಥಾನ ಪಡೆದಾಕೆ.ಪ್ರೀತಿ, ನಟನೆ ಹೀಗೆ ಕೆಲವೊಂದು ಸಂಗತಿಗಳು ಆಕೆಯನ್ನು ಜನರಿಗೆ ಹೆಚ್ಚು  ಗೊತ್ತಾಗುವಂತೆ ಮಾಡಿತ್ತು. ಆ ಸಂಗತಿಗಳು ಏನೇ ಇರಲಿ ಆಕೆ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಸ್ಟ್ರಿಕ್ಟ್. ಆಕೆಯ ತಾಯಿ ಸೂಸಾನ್ ಹೇಳುವಂತೆ ತಾನು ಗಳಿಸಿದ ಹಣದಲ್ಲಿ ಒಂದಷ್ಟು ಭಾಗ ಸಮಾಜಸೇವೆಗೆ ಮೀಸಲಿಟ್ಟಿದ್ದಾಳೆ. 
 
ನಮ್ಮದು ದೊಡ್ಡ ಕುಟುಂಬ. ಹೇಳಿಕೊಳ್ಳುವಂತಹ ಆಸ್ತಿವಂತರಲ್ಲ ನಾವು. ಆದ್ದರಿಂದ ಹಣಕಾಸಿನ ಬೆಲೆ ನನಗೆ ಚೆನ್ನಾಗಿ ಗೊತ್ತು. ಆದ್ದರಿಂದ ನಾನು ಅತಿಯಾಗಿ ಶಾಪಿಂಗ್ ಮಾಡುವ, ಸಿಕ್ಕಾಪಟ್ಟೆ ಖರ್ಚು ಮಾಡುವ ವಿಷಯದತ್ತ ಆದ್ಯತೆ ನೀಡಲ್ಲ. ಆದಷ್ಟು ಸರಳವಾದ ಉಡುಪುಗಳನ್ನು ಧರಿಸಲು ನಾನು ಇಷ್ಟ ಪಡ್ತೀನಿ ಬೆಲೆ ಬಾಳುವ ವಾಚ್ ಗಳು, ಆಭರಣಗಳನ್ನು ಕೊಳ್ಳುವುದಕ್ಕೆ ಆದ್ಯತೆ ನೀಡುವುದೇ ಇಲ್ಲ. ಇವೆಲ್ಲ ಅನಗತ್ಯ ಖರ್ಚುಗಳು ಎನ್ನುವ ಭಾವನೆ ನನ್ನದು. ಓಡಾಡಲು ಸ್ವಲ್ಪ ಹೆಚ್ಚೇ ಖರ್ಚಾಗುತ್ತದೆ. ತುಂಬಾ ಇಷ್ಟ ಆದರೆ ಅಂತಹವನ್ನು ಕೊಳ್ಳುತ್ತೇನೆ. ನಾನು  ಫಿಕ್ಸೆಡ್  ದಿಪಾಜಿಟ್, ಬಾಂಡ್ಸ್ ಗಳಲ್ಲಿ ಹಣ ಹೂಡಲು ಆಸಕ್ತಿ ನನಗೆ.ನ್ಯೂ ಇಯರ್  ನಲ್ಲಿ ಡ್ಯಾನ್ಸ್ ಮಾಡಲು ನನಗೆ ಆಸಕ್ತಿ ಇಲ್ಲಎಂದಿದ್ದಾಳೆ ಈ ಚೆಲುವೆ. ಸಿನಿಮಾದಲ್ಲಿ ನೋಡುವ ಪಾತ್ರಗಳಿಗಿಂತ ಕಲಾವಿದರು ಭಿನ್ನ ಬದುಕನ್ನು ಹೊಂದಿರುತ್ತಾರೆ ಅನ್ನೋದಕ್ಕೆ ಇದೆ ಸಾಕ್ಷಿ !

Share this Story:

Follow Webdunia kannada