Webdunia - Bharat's app for daily news and videos

Install App

ಸಾಹಸ ದೃಶ್ಯದಲ್ಲಿ ಪಾಲ್ಗೊಂಡ ರಿತೇಶ್ ಕೈಗಳು ಬೆಂಕಿ ಅನಾಹುತಕ್ಕೆ ಬಲಿ !

Webdunia
ಗುರುವಾರ, 14 ಆಗಸ್ಟ್ 2014 (10:14 IST)
ಸಿನಿಮಾ ನೋಡುವವರು ಆರಾಮವಾಗಿ ಅದರ ಬಗ್ಗೆ ಕಾಮೆಂಟ್ ಮಾಡ್ತಾರೆ, ಚೆನ್ನಾಗಿಲ್ಲ ಅಂತ ಮುಖಕ್ಕೆ ಹೊಡೆದಂತೆ ಮಾತಾಡಿಬಿಡುತ್ತಾರೆ. ಅಷ್ಟೇ ಅಲ್ಲದೆ  ಹೀರೋಗಳು ತೆಗೆದುಕೊಳ್ಳುವ ಸಂಭಾವನೆ ಬಗ್ಗೆ ಚರ್ಚೆ ಮಾಡುತ್ತಾ, ಸುಲಭವಾಗಿ ಗಳಿಸಿದ ದುಡ್ಡು ಅಂತ ಹೇಳಿ ಬಿಡ್ತಾರೆ. ಆದರೆ ಚಿತ್ರೀಕರಣದ ಸಮಯದಲ್ಲಿ ಅವರು ಎದುರಿಸುವ ಸಮಸ್ಯೆಗಳು ತೊಂದರೆಗಳು ಯಾರಿಗೂ ಗೊತ್ತೇ ಆಗಲ್ಲ. ಇತ್ತೀಚಿಗೆ ಹೀಗೆ ಆಗಿದೆ. ದಕ್ಷಿಣ ಭಾರತದಲ್ಲಿ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲೂ ಸಹಿತ  ನಟಿಸಿರುವ ಜೆನಿಲಿಯ ಈಗ  ರಿತೇಶ್ ದೇಶ್ ಮುಖ್ ಪತ್ನಿ. ಆಕೆ ಮದುವೆ ಆದ ಬಳಿಕ ಮತ್ತೆ ಸಿನಿಮಾಗಳ ಕಡೆಗೆ ಕಣ್ಣೆತ್ತಿ ನೋಡಿಲ್ಲ. ವಿಷಯ ಅದಲ್ಲ ಬಿಡಿ . ಇತ್ತೀಚಿಗೆ ಬಂಗಿಸ್ಥಾನ್ ಅನ್ನುವ ಚಿತ್ರದ ಶೂಟಿಂಗ್ ನಲ್ಲಿ ರಿತೇಶ್ ಕೈಗಳು ಸುಟ್ಟಿವೆ. ಅದನ್ನು ಆತ ತನ್ನ ಸೋಶಿಯಲ್ ನೆಟ್ವರ್ಕ್ ನಲ್ಲಿ  ಮೂಲಕ ಅಭಿಮಾನಿಗಳ ಮುಂದೆ ಇಟ್ಟಿದ್ದಾರೆ. ಸಿನಿಮಾದಲ್ಲಿ ನೈಜತೆಗಾಗಿ ಸಾಕಷ್ಟು ಪ್ರಯತ್ನ ಪಡುತ್ತಾರೆ, ಅಂತಹ ಸಮಯದಲ್ಲಿ ಅನಾಹುತಗಳು, ಆಕ್ಸಿಡೆಂಟ್ ಗಳು ಆಗೋದು ಸಹಜ. 
 
ಈಗಂತೂ ಹೀರೋಗಳು ನೈಜತೆಗಾಗಿ ಸಾಹಸ ದೃಶ್ಯಗಳಲ್ಲಿ ಮತ್ತು ಫೈಟ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.
2015  ರಲ್ಲಿ ಬಂಗಿಸ್ಥಾನ್ ಚಿತ್ರ ಬಿಡುಗಡೆಗೆ ಸಿದ್ಧ ಆಗುತ್ತಿದೆ. ರಿತೇಶ್ ಅಲ್ಲದೆ ಪುಳುಕಿತ್ ಸಾಮ್ರಾಟ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕರುಣ್ ಅನ್ಶುಮನ್ ಈ ಚಿತ್ರದ ನಿರ್ದೇಶಕ . ಈ ಸಿನಿಮಾದಲ್ಲಿ ಜಾಕ್ವೆಲಿನ್  ಫರ್ನಾಂಡೀಸ್ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಕಿಕ್ ಚಿತ್ರದಲ್ಲಿ ಆಕೆಯ ಸ್ಪೆಶಲ್ ಡ್ಯಾನ್ಸ್ ಹಿಟ್ ಆದ ಕಾರಣ ಈ ಚಿತ್ರದಲ್ಲೂ ಸಹಿತ ನಟಿಸುತ್ತಿದ್ದಾಳೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments