Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಎಂಟನೇ ಆವೃತ್ತಿಗೆ ಸಲ್ಮಾನ್ ಒಪ್ಪಿಗೆ.. ಸಧ್ಯದಲ್ಲೇ ಶುರು ಆಗುತ್ತೆ ಹಿಂದಿ ಬಿಗ್ ಬಾಸ್

ಬಿಗ್ ಬಾಸ್ ಎಂಟನೇ ಆವೃತ್ತಿಗೆ ಸಲ್ಮಾನ್ ಒಪ್ಪಿಗೆ.. ಸಧ್ಯದಲ್ಲೇ ಶುರು ಆಗುತ್ತೆ ಹಿಂದಿ ಬಿಗ್ ಬಾಸ್
ಮುಂಭೈ , ಮಂಗಳವಾರ, 12 ಆಗಸ್ಟ್ 2014 (09:55 IST)
ಕನ್ನಡ ಬಿಗ್ ಬಾಸ್ ಈಗ ತನ್ನ ಕೆಲಸ ಆರಂಭ ಮಾಡಿ ತಿಂಗಳುಗಳು ಕಳೆದಿವೆ. ಆದರೆ ಈಗ ಆ ಕಾರ್ಯಕ್ರಮದ ಬೆನ್ನಲ್ಲೇ ಹಿಂದಿ ಬಿಗ್ ಬಾಸ್ ಸಂಗತಿಯು ಸಹಿತ ಹೊರ ಬಂದಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಯಾವ ರೀತಿ ಪಾಪ್ಯುಲರ್ ಮಾಡಿದರೋ ಅದೇರೀತಿ ಹಿಂದಿಯಲ್ಲಿ ಬಿಗ್ ಬಾಸ್  ಮುಖ್ಯ ಆಕರ್ಷಣೆ ಸಲ್ಮಾನ್ ಖಾನ್. ಆತನ ಮಾತು ಕೇಳಲು ಟೀವಿ  ಸೆಟ್ ಮುಂತೆ ಕೋಟ್ಯಾಂತರ ಜನರು  ಕುಳಿತುಕೊಳ್ಳುವ ಸಂಗತಿ ಸುಳ್ಳಲ್ಲ. 
 
ಆದರೆ ಕಳೆದ ಬಾರಿ ಅಂದ್ರೆ 7  ನೇ ಆವೃತ್ತಿ ಸಾಕಷ್ಟು ಕಿರಿಕಿರಿ ಉಂಟು ಮಾಡಿದ್ದು ಸತ್ಯ.  ಆ ಬಾರಿ ಬಿಗ್ ಬಾಸ್ ಮನೆಯಲ್ಲಿ ಅನೇಕ ಅವಘಡಗಳು ನಡೆದು ತಾನು ಎಂದಿಗೂ ಈ ಕಾರ್ಯಕ್ರಮದ ಹೋಸ್ಟ್ ಮಾಡಲ್ಲ ಎಂಬಿತ್ಯಾದಿಯಾಗಿ ಕೋಪಗೊಂಡು ಹೇಳಿದ್ದರು ಸಲ್ಮಾನ್. ಆದರೆ ಅವರಿಲ್ಲದ ಆ ಕಾರ್ಯಕ್ರಮ ವೀಕ್ಷಿಸಲು ಮನಸ್ಸು ಯಾರಿಗೆ ಇರುತ್ತೆ. ಕಲರ್ಸ್ ವಾಹಿನಿಯವರು ಸಲ್ಲು ಮನ ಒಲಿಸಿದ್ದಾರೆ . ಆ ಕಾರ್ಯಕ್ರಮದ ಎಂಟನೇ ಆವೃತ್ತಿಗೆ ಸಿದ್ಧತೆ ನಡೆದಿದೆ. 
 
ಇದಕ್ಕೆ ಅಗತ್ಯವಾದ ಡಾಕ್ಯು ಮೆಂಟ್ಸ್  ಗೆ ಸಹಿ ಹಾಕಿದ್ದಾರೆ ಸಲ್ಮಾನ್. ಈ ಕಾರ್ಯಕ್ರಮ ಸೆಪ್ಟೆಂಬರ್ ತಿಂಗಳಲ್ಲಿ ಆರಂಭ ಆಗುತ್ತಿದೆಯಂತೆ. ಮತ್ತೊಮ್ಮೆ ಈ ಐತಿಹಾಸಿಕ ರಿಯಾಲಿಟಿ ಷೋ ನಲ್ಲಿ ಮುಖ್ಯ ಭಾಗ ಆಗುತ್ತಿದ್ದಾರೆ ಸಲ್ಲು. ಆರಂಭದಲ್ಲಿ ಈ ಕಾರ್ಯಕ್ರಮವನ್ನು ಶಾರುಖ್ ಅವರು ನಡೆಸಿಕೊಡುತ್ತಾರೆ ಎನ್ನುವ ರೂಮರ್ಗಳು ಇತ್ತು. ಆದರೆ ಕಲರ್ಸ್ ವಾಹಿನಿ ಟ್ವಿಟ್ಟರ್ ನಲ್ಲಿ ಸಲ್ಮಾನ್  ಈ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ತಿಳಿಸಿದೆ. ಈ ಮುಖಾಂತರ ಮತ್ತೊಮ್ಮೆ ಸಲ್ಮಾನ್ ಅಭಿಮಾನಿಗಳು ಅವರ ಮೆಚ್ಚಿನ ನಾಯಕನ ತುಂಟಾಟ   ನೋಡುವ ಸದವಕಾಶ.   

Share this Story:

Follow Webdunia kannada