Select Your Language

Notifications

webdunia
webdunia
webdunia
webdunia

ಬಾಲಿವುಡ್ ರಾಣಿ ಆಗುವ ಪ್ರಯತ್ನದಲ್ಲಿ ಶ್ರುತಿ ಹಾಸನ್

ಬಾಲಿವುಡ್ ರಾಣಿ ಆಗುವ ಪ್ರಯತ್ನದಲ್ಲಿ ಶ್ರುತಿ ಹಾಸನ್
ಮುಂಬೈ , ಸೋಮವಾರ, 4 ಆಗಸ್ಟ್ 2014 (10:01 IST)
ದಕ್ಷಿಣ ಭಾರತದ ಚಿತ್ರಗಳಲ್ಲಿ ಹೆಚ್ಚಿನ ಅವಕಾಶಗಳು ಇದ್ದರೂ ಸಹಿತ ಶ್ರುತಿ ಹಾಸನ್ ಬಾಲಿವುಡ್ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಾಳೆ ಎನ್ನುತ್ತಿದ್ದಾರೆ ಕಾಲಿವುಡ್ ಮತ್ತು ಟಾಲಿವುಡ್ ಮಂದಿ. ರೇಸುಗುರ್ರಂ ಯಶಸ್ಸು ಪಡೆದ ನಂತರ ಪ್ರಸ್ತುತ ಆಕೆ ಕೈಲಿ ನಾಲ್ಕು ಹಿಂದಿ ಚಿತ್ರಗಳಿದೆ.
 
 ತಮಿಳು ಮತ್ತು ತೆಲುಗು ಚಿತ್ರಗಳು ಒಂದೊಂದು ಇವೆ. ಮಹೇಶ್ ಬಾಬು ನಟನೆಯ ಆಗಡು ಚಿತ್ರದಲ್ಲಿ ಐಟಂ ನಂಬರ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚೆಲುವೆ   ನಲ್ಲತಂಬಿ ವಿಶಾಲ್  ಅವರ ಪೂಜೈ ಅನ್ನುವ ಚಿತ್ರದಲ್ಲಿ ಸಹಿತ ನಟಿಸುತ್ತಿದ್ದಾಳೆ. 
 
ಆಗಡು ಚಿತ್ರದ ನಂತರ ಆಕೆ ಯಾವುದೇ ತೆಲುಗು ಚಿತ್ರಕ್ಕೂ ಸಹಿತ ಕಮೀಟ್ ಆಗಿಲ್ಲ. ಅದೇ  ರೀತಿಯ ವರ್ತನೆ ಇದೆ ತಮಿಳು ಚಿತ್ರಗಳಿಗೂ ಸಂಬಂಧಪಟ್ಟಂತೆ. ಅಂದರೆ ಆಕೆ ದಕ್ಷಿಣಕ್ಕಿಂತ ಉತ್ತರ ಭಾರತದ ಅದರಲ್ಲೂ ಹಿಂದಿ ಚಿತ್ರಗಳಲ್ಲಿ ತನ್ನ ಪ್ರಭಾವ ತೋರುವ ಅತ್ಯುತ್ಸಾಹ ಹೊಂದಿರುವ ಈ ಚೆಲುವೆ ಅಧಿಕ ಪ್ರಮಾಣದಲ್ಲಿ ಅಲ್ಲಿಗೆ ಕಮೀಟ್ ಆಗಿದ್ದಾಳೆ. 
 
........ಇನ್ನು ಇದೆ. ಮುಂದೆ ಓದಿ 
 
 

 ಪ್ರಸ್ತುತ ವೆಲ್ಕಂ ಬ್ಯಾಕ್ , ಗಬ್ಬರ್, ರಾಕಿ ಹ್ಯಾಡ್ಸಂ ಮತ್ತು ಯಾರ ಚಿತ್ರಗಳಲ್ಲಿ ನಟಿಸುತ್ತಿರುವ ಈ ಚೆಲುವೆ ಎಲ್ಲಿ ತನಗೆ ಅಪಮಾನ ಆಗಿದೆಯೋ ಅಲ್ಲಿಯೇ ತಾನೇನು ಎನ್ನುವುದನ್ನು ಸಾಬೀತು ಮಾಡಿ ತೋರಿಸ ಬೇಕು ಎನ್ನುವ ನಿರ್ಧಾರಕ್ಕೆ ಬಂದಂತೆ ಇದೆ. 
 
ಅದಕ್ಕೆ ಪೂರಕವಾಗಿ ಆಕೆ ಕೆಲಸಗಳನ್ನು ಮಾಡುತ್ತಿದ್ದಾಳೆ. ಈಗ ಟಾಲಿವುಡ್, ಕಾಲಿವು ಮತ್ತು ಬಾಲಿವುಡ್ ನಲ್ಲಿ ಲಕ್ಕಿ ಗರ್ಲ್ ಆಗಿರುವ ಶ್ರುತಿ ಅದೃಷ್ಟದ ಬಗ್ಗೆ ಬೇರೆ ಹೀರೋಯಿನ್ ಗಳು ಸಹಿತ ಹೊಟ್ಟೆ ಉರಿ ಪಡ್ತಾ ಇದ್ದಾರಂತೆ.. ಹಾಗಂತ ಸಣ್ಣ ಸುದ್ದಿ ! 

Share this Story:

Follow Webdunia kannada