Select Your Language

Notifications

webdunia
webdunia
webdunia
webdunia

ಮೇರಿಕಾಮ್ ಫಸ್ಟ್ ಲುಕ್ ಗೆ ಪ್ರಿಯಾಂಕಾಗೆ ಬಂದ ಮೇಲ್ಸ್ ಎಷ್ಟು ಅಂದ್ರೆ !

ಮೇರಿಕಾಮ್ ಫಸ್ಟ್ ಲುಕ್ ಗೆ ಪ್ರಿಯಾಂಕಾಗೆ ಬಂದ ಮೇಲ್ಸ್ ಎಷ್ಟು ಅಂದ್ರೆ !
ಮುಂಬೈ , ಶನಿವಾರ, 2 ಆಗಸ್ಟ್ 2014 (11:13 IST)
ತನ್ನ ನಟನಾ ಬದುಕಲ್ಲಿ ಈಗ ಪಡೆದಿರುವಂತಹ ಸಂತೋಷವನ್ನು ನಟಿ ಪ್ರಿಯಾಂಕ ಮತ್ತೆಂದೂ ಪಡೆದಿಲ್ಲ ಎಂದೇ ಹೇಳ ಬಹುದಾಗಿದೆ. ಏಕೆಂದರೆ ಆಕೆ ನಟಿಸಿರುವ ಮೇರಿ ಕಾಮ್ ಚಿತ್ರದ ಮೊದಲ ಲುಕ್  ಹೊರ ಬಂದಿದೆ. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಬಂದಿರುವ ಪ್ರಶಂಸೆಗಳು ಸಹಿತ ಎಲ್ಲರ ಗಮನ ಸೆಳೆದಿದೆ. 
 
 ಬಾಕ್ಸಿಂಗ್ ಚಾಂಪಿಯನ್ ಮೇರಿಕಾಮ್  ನಂತೆಯೇ ಪ್ರಿಯಾಂಕ ಆಗಿದ್ದಾರೆ. ಅವರ ಪಾತ್ರದ ಪರಕಾಯ ಪ್ರವೇಶ ಮಾಡಿದ್ದಾರೆ ಎನ್ನುವ ಮಾತನ್ನು ಅನೇಕರು ಹೇಳಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಬಗ್ಗೆ ಹೇಳುತ್ತಾ ಪ್ರಿಯಾಂಕ  ಜೋಯಾ ಅಕ್ತರ್ ನಿರ್ದೇಶನದ ಅನೇಕ ಮುಖ್ಯ ಸನ್ನಿವೇಶಗಳನ್ನು ದೋಣಿಯಲ್ಲಿಯೇ ಶೂಟಿಂಗ್ ಮಾಡಲಾಯಿತು. 
 
ಅಲ್ಲಿಯೇ ನಾನು ಚಿತ್ರೀಕರಣದಲ್ಲಿ ತೊಡಗಿಕೊಂಡೆ ಎನ್ನುವ ಮಾತನ್ನು ಹೇಳಿದ್ದಾಳೆ ಪಿಗ್ಗಿ ಚಾಪ್ಸ್. ಅದೇರೀತಿ ಮೊದಲ ಲುಕ್ ಬಿಡುಗಡೆ ಆದ  ಮೂರು ಗಂಟೆ ಒಳಗೆ ಆಕೆಗೆ ಮುನ್ನೂರೈವತ್ತು ಮೇಲ್ ಬಂದಿತಂತೆ. ಅದೇರೀತಿ ಆಕೆಯ ಫ್ಯಾನ್ಸ್ ನಿಂದಲೂ 6  ಆರು ಸಾವಿರ ಮೆಸೇಜ್  ಗಳು ಬಂತು ಎನ್ನುವ ಸಂಗತಿಯನ್ನು ಆಕೆ ಖುಷಿಯಿಂದ ಹಂಚಿಕೊಂಡಿದ್ದಾರೆ. ತನ್ನ ಕೆರಿಯರ್ ನ ಈ ಹದಿನಾಲ್ಕು ವರ್ಷದ ಸಮಯದಲ್ಲಿ ಹೀಗೆ ಆಗಿರಲಿಲ್ಲ ಎನ್ನುವ ಖುಷಿ ಆಕೆಯದ್ದಾಗಿದೆ. 

Share this Story:

Follow Webdunia kannada