Select Your Language

Notifications

webdunia
webdunia
webdunia
webdunia

ಚೈನಾ ದೇಶದ ಟಾಪ್ ಟೆನ್ ನಲ್ಲಿ ಸಿನಿಮಾಗಳಲ್ಲಿ ಭಾರತದ ಧೂಮ್ 3ಗೂ ಸ್ಥಾನ

ಚೈನಾ ದೇಶದ  ಟಾಪ್ ಟೆನ್ ನಲ್ಲಿ ಸಿನಿಮಾಗಳಲ್ಲಿ  ಭಾರತದ ಧೂಮ್ 3ಗೂ ಸ್ಥಾನ
ಮುಂಬೈ , ಶನಿವಾರ, 2 ಆಗಸ್ಟ್ 2014 (11:09 IST)
ವಿದೇಶಗಳಲ್ಲಿ  ಭಾರತೀಯ ಭಾಷೆಗಳ ಚಿತ್ರಗಳು ಡಬ್ ಆಗೋದು ಹೊಸದಲ್ಲ. ಆದರೆ ಕೆಲವು ಮಾತ್ರ ಸಿಕ್ಕಾಪಟ್ಟೆ ಹಂಗಾಮ ಮಾಡುತ್ತದೆ. ಅದರಲ್ಲಿ  ಕಳೆದ ವರ್ಷ ಬಿಡುಗಡೆ ಆದ ಆಮೀರ್ ಖಾನ್ ನಟನೆಯ ಧೂಮ್ 3 ಸಹ ಸೇರ್ಪಡೆ ಆಗಿದೆ. ಬಾಲಿವುಡ್ ಸಿನಿ ಇತಿಹಾಸದಲ್ಲೇ ಅತ್ಯಧಿಕ ಮೊತ್ತದ ಹಣ ಗಳಿಸಿದ ಚಿತ್ರ ಧೂಮ್3  ಈ ಚಿತ್ರದ ಮುಖಾಂತರ ಆಮೀರ್ ಖಾನ್ ವಿಲನ್  ಆಗಿಯೂ ಸಹ ತಮ್ಮ ಪ್ರತಿಭೆ ತೋರಿದರು. ಇತ್ತೀಚಿಗೆ ಚೈನಾ ದೇಶದಲ್ಲಿ 2 ಸಾವಿರ ಸ್ಕ್ರೀನ್ ಮೇಲೆ ಬಿಡುಗಡೆ ಆದ ಈ ಚಿತ್ರವೂ ಅಲ್ಲಿನ ಟಾಪ್ 10 ಚಿತ್ರಗಳಲ್ಲಿ ಒಂದಾಗಿದೆ. ಟರ್ಕಿ ದೇಶದಲ್ಲಿ ಧೂಮ್3  ಚಿತ್ರ  9ಸ್ಥಾನ ಪಡೆದ ಭಾರತೀಯ ಚಿತ್ರವಾಗಿತ್ತು. 
 
ಅದೇರೀತಿ ಚೈನ್ ಟಾಪ್ 10ಚಿತ್ರಗಳಲ್ಲಿ  9 ಸ್ಥಾನವನ್ನು ಪಡೆದಿದೆ . ಚೈನಾದಲ್ಲಿ 1 .35 ಮಿಲಿಯನ್  ಡಾಲರ್ ನಷ್ಟು ವಸೂಲಿ ಮಾಡಿದೆ ಎನ್ನುವ ಸಂಗತಿಯನ್ನು ಅಲ್ಲಿನ ಮಾಧ್ಯಮಗಳು ತಿಳಿಸಿವೆ. ಚೀನಿ  ಭಾಷೆಯಲ್ಲಿ  ಬಿಡುಗಡೆ ಆದ ರೊಮ್ಯಾಂಟಿಕ್ ಚಿತ್ರ ನೋ ಜು ನೋ ಡೈ ಚಿತ್ರವನ್ನು ಭಾರತದ ಧೂಮ್ 3  ಚಿತ್ರ ಹಿಂದಕ್ಕೆ ಹಾಕಿದೆ ಎನ್ನುವುದು ಸದ್ಯದ ಸುದ್ದಿ. 

Share this Story:

Follow Webdunia kannada