Select Your Language

Notifications

webdunia
webdunia
webdunia
webdunia

ಐಶ್ವರ್ಯ ಸೌಂದರ್ಯದ ಗುಟ್ಟು ಆರಾಧ್ಯ ಅಂತೆ!

ಐಶ್ವರ್ಯ ಸೌಂದರ್ಯದ ಗುಟ್ಟು ಆರಾಧ್ಯ ಅಂತೆ!
ಮುಂಬೈ , ಶನಿವಾರ, 2 ಆಗಸ್ಟ್ 2014 (11:04 IST)
ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮದುವೆ ಆದ ಬಳಿಕ ಅದರಲ್ಲೂ ಮಗಳು ಆರಾಧ್ಯ ಹುಟ್ಟಿದ ನಂತರ ಚಿತ್ರಗಳಲ್ಲಿ ನಟಿಸುವುದಕ್ಕೆ ಆದ್ಯತೆ ನೀಡದೆ ಸಂಪೂರ್ಣವಾಗಿ  ಫುಲ್ ಟೈಮ್ ಅಮ್ಮನಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಬಹಳ ವರ್ಷಗಳ ಬಳಿಕ ಆಕೆ ಸಂಜಯ್ ಗುಪ್ತ ಅವರ ನಿರ್ದೇಶನದ ಜಾಜ್ಬಾ  ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಈಗ ಹೇಳ ಹೊರಟಿರುವುದು ಆ ಸಂಗತಿ ಅಲ್ಲ, 
 
ಆಕೆಯ ಮೈಮಾಟದ ಬಗ್ಗೆ. ಈ ಮೊದಲು ಅಂದರೆ ಮದುವೆ ಆದ ಬಳಿಕವು ಐಶ್ವರ್ಯ ರೈ ತನ್ನ ಮಾದಕ ಬಳಕು ದೇಹವನ್ನು ಕಾಪಾಡಿಕೊಂಡು ಬಂದಿದ್ದ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಆದರೆ ಮಗಳು ಆರಾಧ್ಯ ಹುಟ್ಟಿದ ನಂತರ ಆಕೆಯು ಸ್ವಲ್ಪ ಜಾಸ್ತಿನೇ ದಪ್ಪಗಾಗಿ ಆ ಮುಖಾಂತರವು ಸಹಿತ ಎಲ್ಲರ ಗಮನ ಸೆಳೆದಿದ್ದರು.
 
.........ಇನ್ನು ಇದೆ. ಮುಂದೆ ಓದಿ. 
 
 ಸಪೂರ ಸುಂದರಿಯನ್ನು ಕಂಡಿದ್ದ ಆಕೆಯ ಅಭಿಮಾನಿಗಳಿ ಅದಾದ ಬಳಿಕ ದಪ್ಪ ಸುಂದರಿಯನ್ನು ಕಾಣುವ ಅವಕಾಶ ಪಡೆದು ಕೊಂಡರು. ಇತ್ತಿಚೆಗೆ ಆಕೆ ಫ್ಯಾಶನ್ ಪ್ಯಾರಡೈಸ್  ನಲ್ಲಿ ಭಾಗವಹಿಸಿದ್ದರು. ಅದರಲ್ಲಿ ಕ್ಯಾಟ್ವಾಕ್ ಮಾಡಿದ ಈ ಸುಂದರಿಯನ್ನು ಕಂಡಾಗ ಎಲ್ಲರು ಆಶ್ಚರ್ಯ ಚಕಿತರಾದರು. ಅದಕ್ಕೆ ಕಾರಣ ಮತ್ತೆ ಆಕೆಯು ತನ್ನ ಮೈಮಾಟವನ್ನು ಮೊದಲಿನಂತೆ ಮಾಡಿಕೊಂಡಿದ್ದರು. 
 
ಸಪೂರವಾಗಿ ಎಲ್ಲರ ಮುಂದೆ ಬಂದ ಈಕೆಯ ಈ ಸೌಷ್ಟವದ ಗುಟ್ಟೇನು ಎಂದು ಎಂದು ಕೇಳಿದಾಗ ತನ್ನ ಮಗಳು ಆರಾಧ್ಯ ಎಂದು ಹೇಳಿದರು ಆಕೆ. ತುಂಬಾ ದೊಡ್ಡ ಮನೆಯಲ್ಲಿ ಆರಾಧ್ಯ ಎಲ್ಲಂದರಲ್ಲಿ ಓಡಿ ಹೋಗುತ್ತಿದ್ದಳು. ಅವಳನ್ನು ಹಿಡಿಯುವ ಕೆಲಸದಲ್ಲಿ ಸದಾ ಮಗ್ನಳಾಗಿರುತ್ತಿದೆ. ಆ ಸಮಯದಲ್ಲಿ ಇಡೀ ಮನೆಯಲ್ಲಿ ಓಡಾಡಿ ಓಡಾಡಿ ಸಣ್ಣಗಾದೆ ಎಂದು ಹೇಳಿದ್ದಾರೆ. ಗೊತ್ತಾಯ್ತಲ್ಲ  ಜಿಮ್ ಗಿಂತ ಮನೆಗೆ ಸಂಬಂಧಪಟ್ಟ ಕೆಲಸಗಳು ನಮ್ಮನ್ನು ಆರೋಗ್ಯವಾಗಿಡುತ್ತದೆ ಎಂದು! 

Share this Story:

Follow Webdunia kannada