Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಬಾಲಿವುಡ್ ನೂರು ಕೋಟಿ ಕ್ಲಬ್ ಸರದಾರ

ಸಲ್ಮಾನ್ ಖಾನ್   ಬಾಲಿವುಡ್  ನೂರು ಕೋಟಿ ಕ್ಲಬ್ ಸರದಾರ
ಮುಂಬೈ , ಶುಕ್ರವಾರ, 1 ಆಗಸ್ಟ್ 2014 (10:25 IST)
ಸಿನಿಮಾ ಚರಿತ್ರೆಯಲ್ಲಿ   ಒಂದಷ್ಟು ಜನರು ಮಾತ್ರ  ಭಿನ್ನ ಬಗೆಯ ಸಾಧನೆ ಮಾಡಿರುತ್ತಾರೆ. ಆದ ಕಾರಣ ಅವರ ಹೆಸರು ಹೆಚ್ಚು  ಕಾಲ ಉಳಿದಿರುತ್ತದೆ. ಸಲ್ಮಾನ್ ಖಾನ್ ವಿಷಯದಲ್ಲಿ ಸಹಿತ ಅಂತಹದ್ದೇ ಸಾಧನೆ ನಡೆದಿದೆ. ಅವರು ಕಳೆದ ಕೆಲವು  ವರ್ಷಗಳಲ್ಲಿ ಬಿಡುಗಡೆ ಆದ ಚಿತ್ರವೂ ನಿರಂತರವಾಗಿ ನೂರು ಕೋಟಿ ಕ್ಲಬ್ ಸೇರ್ಪಡೆ ಆಗಿದೆ. ಇದೊಂದು ವಿಶೇಷವಾದ ಸಾಧನೆ ಆಗಿದೆ ಎಂದೇ ಹೇಳ ಬಹುದಾಗಿದೆ. ಈಗ ನಿರಂತರವಾಗಿ ಕೋಟಿ ಕ್ಲಬ್ ಸೇರ್ಪಡೆ ಆದ ಏಕೈಕ ಹೀರೋ ಆತ ಎನ್ನುವ ಸಂಗತಿ ಹೊರ ಬಂದಿದೆ. ಇತ್ತೀಚೆಗೆ ಬಿಡುಗಡೆ ಆದ ಚಿತ್ರ ಕಿಕ್ ಬಗ್ಗೆ ಜನರು ತೋರಿರುವ  ಪ್ರೀತಿ ಅದ್ಭುತ. ಆ ಚಿತ್ರವೂ ಈಗ 200 ಕೋಟಿ ಕ್ಲಬ್ ಸೇರ್ಪಡೆ ಆಗುತ್ತಿದ್ದೆ ಸಧ್ಯದಲ್ಲೇ.ಈ ಸಂಗತಿಯನ್ನು ಚಿತ್ರ ಪಂಡಿತರು ತಿಳಿಸಿದ್ದಾರೆ.  
 
ನೂರು ಕೋಟಿ ಕ್ಲಬ್ ಗೆ ಸೇರ್ಪಡೆ ಆದ ಸಲ್ಮಾನ್ ಚಿತ್ರಗಳು ಮತ್ತು ಅದು ಗಳಿಸಿದ ಮೊತ್ತದ ವಿವರ ಇಂತಿದೆ. ಕಿಕ್ -126.70* ,ಏಕ್ ಥಾ ಟೈಗರ್   -198.00,ದಬಾಂಗ್ -2 - 158.50,ದಬಾಂಗ್  - 145.00,ಬಾಡಿಗಾರ್ಡ್  - 142.00,ರೆಡಿ  - 120.00, ಜೈ ಹೋ -111.00 ಈ  ಚಿತ್ರಗಳ ಗೆಲುವು ಸಲ್ಮಾನ್ ಖಾನ್ ಅವರನ್ನು ಅಗ್ರನಾಯಕರ ಪ ತೀಯಲ್ಲಿ ಅದರಲ್ಲೂ ಮೊದಲ ಸ್ಥಾನದಲ್ಲಿ ನಿಲ್ಲಿಸುವಂತೆ ಮಾಡಿದೆ. 

Share this Story:

Follow Webdunia kannada