Select Your Language

Notifications

webdunia
webdunia
webdunia
webdunia

ಹಿಂದಿ ಕಹಾನಿ ಈಗ ಹಾಲಿವುಡ್ ನಲ್ಲಿ ನಿರ್ಮಾಣ

ಹಿಂದಿ ಕಹಾನಿ ಈಗ ಹಾಲಿವುಡ್ ನಲ್ಲಿ ನಿರ್ಮಾಣ
ಮುಂಬೈ , ಗುರುವಾರ, 31 ಜುಲೈ 2014 (10:05 IST)
ವಿದ್ಯಾಬಾಲನ್ ಅವರ ತಾರ ಬದುಕಲ್ಲಿ ಅತಿ ಹೆಚ್ಚು ಹೆಸರು ತಂದು ಕೊಟ್ಟ ಚಿತ್ರ ದರ್ಟಿ ಪಿಕ್ಚರ್ಸ್ . ಈ ಸಿನಿಮಾದ ಬಳಿಕ ಆಕೆ ನಟಿಸಿದ ಮತ್ತೊಂದು ಚಿತ್ರ ಕಹಾನಿ. ಅದರಲ್ಲಿ ಗರ್ಭಿಣಿಯ ಪಾತ್ರಧಾರಿ ಆಗಿದ್ದ ಆಕೆಯ ಪಾತ್ರವು ಎಲ್ಲರ ಗಮನ ಸೆಳೆದಿತ್ತು. ಅದು ಮಹಿಳಾ ಪ್ರಧಾನ ಚಿತ್ರವಾದರೂ ಕಮರ್ಷಿಯಲ್ಲಾಗಿ ಸಹ ಎಲ್ಲರ ಗಮನ ಸೆಳೆಯಿತು.
 
ಅದಾದ ಬಳಿಕ ದಕ್ಷಿಣ ಭಾರತದಲ್ಲಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಯನತಾರ ಈ ಪಾತ್ರವನ್ನು ಮಾಡಿದ್ದರು. ಇಲ್ಲಿ ಸಹಿತ ಹೆಚ್ಚಿನ ಜನಪ್ರಿಯತೆ ಪಡೆಯಿತು. ಈಗ ಇದೆ ಸಿನಿಮಾವನ್ನು ಹಾಲಿವುಡ್ ನಲ್ಲೂ ಸಹ ರೀಮೇಕ್ ಮಾಡ ಬೇಕು ಎಂದು ನಿಶ್ಚಯಿಸಿದ್ದಾರಂತೆ. 
 
......ಇನ್ನು ಇದೆ. ಮುಂದೆ ಓದಿ 
 
 
webdunia
ಡೈಟಿ ಹೆಸರಿನಲ್ಲಿ  ಈ ಚಿತ್ರವನ್ನು ಯಶ್ರಾಜ್ ಫಿಲಿಮ್ಸ್ ಅವರು ಹಾಲಿವುಡ್ ನಲ್ಲಿ ನಿರ್ಮಿಸುತ್ತಿದ್ದಾರೆ. 
ಯಶ್ರಾಜ್ ಫಿಲಿಮ್ಸ್ ಎಂಟರ್ ಟೈನ್ ಮೆಂಟ್  ಹೆಸರಲ್ಲಿ ಲಾಸ್ ಎಂಜಲೀಸ್ ನಲ್ಲಿ ಕಹಾನಿ ರೀಮೇಕ್ ಕೆಲಸ ಮಾಡುತ್ತಿದೆ. ಇದರಲ್ಲಿ ಹಾಲಿವುಡ್ ನ ಪ್ರಸಿದ್ಧ ನಾಯಕಿ ನಟಿಸುತ್ತಿದ್ದಾರಂತೆ. ಅಲ್ಲಿನ ನೇಟಿವಿಟಿಗೆ ಹೊಂದುವಂತೆ ಚಿತ್ರದ ಕಥೆಯನ್ನು ಬದಲಾವಣೆ ಮಾಡಲಾಗಿದೆ ಎನ್ನುವ ಸಂಗತಿ ಹೇಳಿದ್ದಾರೆ ಚಿತ್ರ ತಂಡದವರು .

Share this Story:

Follow Webdunia kannada