Select Your Language

Notifications

webdunia
webdunia
webdunia
webdunia

ಹಾಟ್ ಫೋಟೋ ಶೂಟ್ ನಿಂದ ಹಂಗಾಮ ಮಾಡುತ್ತಿರುವ ದೀಪಿಕಾ

ಹಾಟ್ ಫೋಟೋ ಶೂಟ್ ನಿಂದ ಹಂಗಾಮ ಮಾಡುತ್ತಿರುವ ದೀಪಿಕಾ
ಮುಂಬೈ , ಗುರುವಾರ, 31 ಜುಲೈ 2014 (09:43 IST)
ಕಾಲ ಎಲ್ಲವನ್ನು ಬದಲಾವಣೆ ಮಾಡುತ್ತದೆ. ಹಿಂದೆ ರಾಜರಾಗಿದ್ದವರು ಇಂದು ಏನೇನು ಅಲ್ಲ ಅನ್ನುವಂತಹ ಸ್ಥಿತಿಗೆ ಬಂದಿರುತ್ತಾರೆ. ಅದೇರೀತಿ, ಈ ಹಿಂದೆ ಏನೇನು ಅಲ್ಲದವರ ಬದುಕಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ. ಚಿತ್ರರಂಗದಲ್ಲೂ ಸಹ ಅವಕಾಶಕ್ಕಾಗಿ ಒದ್ದಾಡುವ ಕಲಾವಿದರು  ಮುಂದೆ ಯಶಸ್ವಿ ಅದಾಗ ಅವರ ಕಾಲ್ಶೀಟ್ ಗಾಗಿ ಒದ್ದಾಡುವಂತಹ ಪರಿಸರ ಕ್ರಿಯೇಟ್ ಮಾಡಿ ಬಿಡ್ತಾರೆ. 
 
ದೀಪಿಕ ಪಡುಕೋಣೆ ವಿಷಯದಲ್ಲೂ ಸಹಿತ ಹಾಗೆ ಆಗಿದೆ. ಹಿಂದೊಮ್ಮೆ ಅವಕಾಶಕ್ಕಾಗಿ ನಿರ್ದೇಶಕ, ನಿರ್ಮಾಪಕರ ಮುಂದೆ ಕಾದು ಕುಳಿತ ಈ ಚೆಲುವೆ ಗೆಲುವಿನ ಹುಡುಗಿ ಆಗಿದ್ದು ಆಕೆಯ ಕಾಲ್ಶೀಟ್ ಗಾಗಿ  ಕಾಯುವಂತೆ ಮಾಡಿದ್ದಾಳೆ. ಈಗ ಆಕೆ ಏನು ಮಾಡಿದರು ಸೈ ಅನ್ನುವ ಯಶಸ್ಸು ಆಕೆಯನ್ನು ಅಪ್ಪಿದೆ. 
 
......ಇನ್ನು ಇದೆ. ಮುಂದೆ ಓದಿ 
 
 

ಇತ್ತೀಚೆಗೆ ಆಕೆ ಒಂದು ಹಾಟ್ ಫೋಟೋ ಶೂಟ್ ಮಾಡಿಸಿಕೊಂಡಳು. ಮೇಲ್ನೋಟಕ್ಕೆ ಅದು ಆಕೆಯ ಸ್ವಂತಕ್ಕೆ ಎನ್ನಿಸುವಂತೆ ಅನ್ನಿಸಿದರೂ ಸಹ ಆ ಫೋಟೋಸ್ ನ್ನು ಕಾರ್ಪೊರೇಟ್ ಸಂಸ್ಥೆಯ ಪ್ರಚಾರಕ್ಕೆ ಈ ಫೋಟೋ ತೆಗೆಸಿಕೊಂಡಿದ್ದಾಳೆ. ಅದಕ್ಕೆಂದು ಅವರು ಸಿಕ್ಕಾಪಟ್ಟೆ ಸಂಭಾವನೆ ನೀಡಿದ್ದಾರಂತೆ.
 
ತಾನು ನಟಿಸುವ ಚಿತ್ರಕ್ಕೆ ಆಕೆ ಎರಡರಿಂದ ಐದು ಕೋಟಿಗಳಷ್ಟು ಸಂಭಾವನೆ ಪಡೆಯುತ್ತಿದ್ದಾಳೆ. ಈಗ ಸುಮಾರು ನಲವತ್ತು ಸೆಕೆಂಡು ಗಳಷ್ಟು ಕಾಲ ಇದ್ದ ಈ ಫೋಟೋ ಶೂಟ್ ಗೆ ಆಕೆ ಪಡೆಯುತ್ತಿರುವ ಮೊತ್ತ 57  ಲಕ್ಷ ರೂಪಾಯಿಗಳು. ಇದರಲ್ಲಿ ಆಕೆ ಸಂಪೂರ್ಣವಾಗಿ ಬ್ಲಾಕ್ ಅಂಡ್ ವೈಟ್ ಡ್ರಸ್ ಮತ್ತು ಬಿಕಿನಿಯಲ್ಲಿ  ಕಾಣಿಸಿಕೊಳ್ಳುತ್ತಿದ್ದಾಳೆ. ಈಗ ಈ ಸಂಗತಿ ಬಾಲಿವುಡ್ ನಲ್ಲಿ ಹೆಚ್ಚು ಪ್ರಚಾರ ಪಡೆಯುತ್ತಿದೆ. 

Share this Story:

Follow Webdunia kannada