Webdunia - Bharat's app for daily news and videos

Install App

ರೇಟಿಂಗ್ಸ್ ಇಲ್ಲದೆ ಬಡವಾದ ಅಮಿತಾಬ್ ಬಚ್ಚನ್ ಯುದ್ಧ್

Webdunia
ಸೋಮವಾರ, 28 ಜುಲೈ 2014 (09:40 IST)
ಕಿರುತೆರೆಯಲ್ಲಿ ಸಾಕಷ್ಟು ಸುದ್ದಿ ಮಾಡಿದ ಕಾರ್ಯಕ್ರಮ ಅಮಿತಾಬ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್ ಪತಿ. ಆ ಕಾರ್ಯಕ್ರಮದ ಮುಖಾಂತರ ಕಿರುತೆರೆಯ  ವೀಕ್ಷಕರಿಗೆ ಹೆಚ್ಚು ಆಪ್ತರಾದರು ಬಿಗ್ ಬಿ.ಕಳೆದ ಕೆಲವು ವರ್ಷಗಳಿಂದ ಈ ರಿಯಾಲಿಟಿ ಷೋ ಮುಖಾಂತರ ತಮ್ಮದೊಂದು ಅಧಿಪತ್ಯವನ್ನು ಕಿರುತೆರೆಯಲ್ಲಿ ಸ್ಥಾಪಿಸಿದ್ದಾರೆ ಬಿಗ್ ಬಚ್ಚನ್. ಆದರೆ ಆ ಕಿರುತೆರೆಯ ಅಧಿಪತ್ಯಕ್ಕೆ ಪೆಟ್ಟು ಬೀಳುವಂತಹ ಪರಿಸ್ಥಿತಿ   ಉಂಟಾಗಿದೆ ಈಗ .
 
ಇತ್ತೀಚಿನವರೆಗೂ ಅಪಾರ ಸಂಖ್ಯೆಯ ಜನರನ್ನು ಕರೋಡ್ಪತಿ ಮಾಡಿದ ಅಮಿತಾಬ್ ಅವರ ಷೋ ಗಿರುವ ಪಾಪ್ಯುಲಾರಿಟಿಯನ್ನು ಎನ್ಕ್ಯಾಶ್ ಮಾಡಿಕೊಳ್ಳುವ ಸಲುವಾಗಿ ಹೊಸ ಧಾರವಾಹಿ ಆರಂಭಿಸಿದರು, ಅದು ಹೆಚ್ಚು ಬಜೆಟ್ ನ ಅದ್ಧೂರಿ ಯುದ್ಧ್ ಹೆಸರಿನ ಈ  ಸೀರಿಯಲ್ ಈಗಾಗಲೇ ಪ್ರತಿದಿನ ರಾತ್ರಿ 10 .30  ಗೆ ಪ್ರಸಾರ ಆಗುತ್ತಿದೆ. ಆದರೆ ಇದು ನಿರೀಕ್ಷಿಸಿದಷ್ಟು ರೇಟಿಂಗ್ಸ್ ಪಡೆಯುತ್ತಿಲ್ಲ, ಅದೇ ಸಧ್ಯ ಸೋನಿ ಟೀವಿಯವರ ತಲೆಬಿಸಿ ಮಾಡಿರುವ ಸಂಗತಿ ಆಗಿದೆ. 
 
..........ಇನ್ನು ಇದೆ. ಮುಂದೆ ಓದಿ. 
 
 

ಈ ಸಂಗತಿ ಬಾಲಿವುಡ್ ಹಾಟ್ ಟಾಪಿಕ್ ಆಗಿ ಬದಲಾಗಿದೆ ಎಂದೇ ಹೇಳ ಬಹುದಾಗಿದೆ. ಇಂಡಿಯನ್ ಟೆಲಿವಿಶನ್ ನ ಅತ್ಯಂತ ಕಾಸ್ಟ್ಲಿ ಸೀರಿಯಲ್ ಯುದ್ಧ್  ಒಂದು ಎಪಿಸೋಡ್ ಗೆ ಸುಮಾರು ಒಂದು ಕೋಟಿ ರೂಪಾಯಿಗಳಷ್ಟು ಖರ್ಚಾಗುತ್ತಿದೆ. 
 
ಆದರೆ ಅದರ ರೇಟಿಂಗ್ಸ್   ಕೇವಲ 0.7  ರಷ್ಟು ದೊಕಿದ್ದು ಇದರಿಂದ ಕಾರ್ಯಕ್ರಮದ ನಿರ್ವಾಹಕರಿಗೆ ಏನು ಮಾಡ ಬೇಕು ಎನ್ನುವುದು ತಿಳಿಯದ ಪರಿಸ್ಥಿತಿ   ಎದುರಾಗಿದೆ.   ಆದರೂ ಮುಂದೆ ಪರಿಸ್ಥಿತಿ ಸರಿ ಆಗ ಬಹುದೆನ್ನುವ ನಿರೀಕ್ಷೆ ಹೊಂದಿದ್ದಾರೆ ಈ ಕಾರ್ಯಕ್ರಮದ ಆಯೋಜಕರು. ನೋಡುವ ಏನಾಗುತ್ತದೆ ಎಂದು. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments