Select Your Language

Notifications

webdunia
webdunia
webdunia
webdunia

ಬಾಕ್ಸಾಫೀಸಲ್ಲಿ ಗದ್ದಲ ಎಬ್ಬಿಸುತ್ತಿರುವ ಕಿಕ್

ಬಾಕ್ಸಾಫೀಸಲ್ಲಿ ಗದ್ದಲ ಎಬ್ಬಿಸುತ್ತಿರುವ ಕಿಕ್
ಮುಂಬೈ , ಸೋಮವಾರ, 28 ಜುಲೈ 2014 (09:28 IST)
ಬಾಲಿವುಡ್ ಚಿತ್ರರಂಗದಲ್ಲಿ ಈಗ ಮತ್ತೊಮ್ಮೆ ತನ್ನ ಸ್ಥಾನ ಏನು ಎಂಬುದನ್ನು ಚಿತ್ರರಂಗದವರಿಗೆ ತಿಳಿಸಿದ್ದಾರೆ ನಟ ಸಲ್ಮಾನ್ ಖಾನ್. ಅವರ ಹೊಚ್ಚ ಹೊಸ ಚಿತ್ರ ಕಿಕ್ ನಿಲ್ಲದೆ ಓಡುತ್ತಿದೆ.. ಸಿಕ್ಕಾಪಟ್ಟೆ ಹಣವನ್ನು ಗಳಿಕೆ ಮಾಡುತ್ತಾ ಬಾಲಿವುಡ್ ಗಮನ ತನ್ನತ್ತ ಸೆಳೆಯುವಲ್ಲಿ ಸಫಲ ಆಗಿದೆ. 
 
ಜುಲೈ 25  ರಂದು ಈ ಚಿತ್ರ ವಿಶ್ವವಿಡಿ  ಬಿಡುಗಡೆ ಆಗಿದ್ದು. ಅತ್ಯುತ್ತಮ ಓಪನಿಂಗ್ಸ್ ಪಡೆದಿದೆ. ಭಾರತದಲ್ಲಿ 4500  ಥಿಯೇಟರ್ಸ್ ನಲ್ಲಿ ಬಿಡುಗಡೆ ಆದ ಕಿಕ್ ಓವರ್ಸೀಸ್ ನಲ್ಲಿ  ಸುಮಾರು 800  ಥಿಯೇಟರ್ ನಲ್ಲಿ ಬಿಡುಗಡೆ ಆಯಿತು. ಆರಂಭದಲ್ಲಿ ದಿನದಲ್ಲೇ ಶೇ90ರಷ್ಟು ಉತ್ತಮ ಫಲಿತಾಂಶ ಕಂಡು ಬಂದಿತ್ತು. 
 
ಬಾಕ್ಸಾಫೀಸಲ್ಲಿ ಮಾಡುತ್ತಿರುವ ಕಲೆಕ್ಷನ್ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕಿಕ್ ಮೊದಲ ದಿನ ಹೊಂದಿದ ಕಲೆಕ್ಷನ್ ಸುಮಾರು 27  ಕೋಟಿ ರೂಪಾಯಿಗಳು.
 
.......ಇನ್ನು ಇದೆ. ಮುಂದೆ ಓದಿ. 
 
ಶನಿವಾರವೂ ಸಹ ಈ ಚಿತ್ರವೂ ಶೇ. 90  ರಷ್ಟು ವೀಕ್ಷಕರನ್ನು ಹೊಂದಿತ್ತು. ಅಂದರೆ ಈ ಮುಖಾಂತರ 30 ಕೋಟಿಗೆ ರೀಚ್ ಆಗಿದೆ ಎನ್ನುವ ಸಂಗತಿಯನ್ನು ಬಾಕ್ಸಾಫೀಸ್ ಮಂದಿ ಹೇಳಿದ್ದಾರೆ. 
 
ಎರಡು ದಿನಗಳ ಗಳಿಕೆಯನ್ನು ಲೆಕ್ಕ ಹಾಕಿದರು 55  ಕೋಟಿ ರೂಪಾಯಿಗಳಷ್ಟು ಆಗಿದೆ. ಈದ್  ಸಮಯದಲ್ಲಿ ಕಿಕ್ ರಿಲೀಸ್ ಆದ ಕಾರಣ ಹೆಚ್ಚು ಮಂದಿ ವೀಕ್ಷಿಸಲು ಸಾಧ್ಯ ಆಗುತ್ತಿದೆ. ಇದು ಸಹಿತ ಕಲೆಕ್ಷನ್ ಗೆ ಧನಾತ್ಮಕ ಅಂಶವಾಗಿದೆ. 

Share this Story:

Follow Webdunia kannada