Select Your Language

Notifications

webdunia
webdunia
webdunia
webdunia

ಪೂನಂ ಪಾಂಡೆಗೆ ನಿರ್ದೇಶಕಿ ಆಗೋ ಆಸೆಯಂತೆ... ನಿರ್ಮಾಪಕರೇ ಸಿದ್ಧ ಇದ್ದೀರಾ ?

ಪೂನಂ ಪಾಂಡೆಗೆ ನಿರ್ದೇಶಕಿ ಆಗೋ ಆಸೆಯಂತೆ... ನಿರ್ಮಾಪಕರೇ ಸಿದ್ಧ ಇದ್ದೀರಾ ?
ಮುಂಬೈ , ಶನಿವಾರ, 26 ಜುಲೈ 2014 (09:08 IST)
ಬಾಲಿವುಡ್ ಸಿನಿಮಾ ರಂಗದಲ್ಲಿ ದಿನವೂ ಸಂಭ್ರಮ! ಇತ್ತೀಚೆಗೆ ಬಾಲಿವುಡ್ ಬೋಲ್ಡ್ ಸುಂದರಿ ಪೂನಂ ಪಾಂಡೆ ತನ್ನ ದೇಹದ ಸೆಮಿ ನ್ಯೂಡ್ ಚಿತ್ರಗಳನ್ನು ನೆಟ್ ನಲ್ಲಿ ಪಬ್ಲೀಶ್ ಮಾಡಿದ್ದು ಮಾತ್ರವಲ್ಲ, ಕಾಮೆಂಟ್ ಪ್ಲೀಸ್ ಅಂತ ಕೇಳಿದಳಂತೆ. ಆಗ ಅದನ್ನು ವೀಕ್ಷಿಸಿದವರಿಂದ ಸಿಕ್ಕಾಪಟ್ಟೆ ಕಾಮೆಂಟ್ಸ್ ಬಂತಂತೆ. 
 
ಅಷ್ಟೇ ಅಲ್ಲದೆ ಆಕೆ ಇತ್ತೀಚೆಗೆ ತನ್ನ ಫ್ರೆಂಡ್ಸ್ ಜೊತೆ ಡ್ರಿಂಕ್ಸ್ ಕುಡಿದ ವೀಡಿಯೋ ನೆಟ್ ನಲ್ಲಿ ಆಕೆ ಪಬ್ಲೀಶ್ ಮಾಡಿದಳಂತೆ. ಅದೂ ಸಹ ಹೆಚ್ಚು ಪ್ರಚಾರ ಪಡೆಯಿತು ಬೀ ಟೌನ್ ನಲ್ಲಿ! 
 
ನಿಜ ಏನೂ ಅಂದ್ರೆ ಈ ಮಾದಕ ಚೆಲುವೆ ಕೈಲಿ ಈಗ ಹೇಳಿಕೊಳ್ಳುವಂತಹ ಚಿತ್ರಗಳು ಇಲ್ಲ. ಹಾಗಂತ ಸುಮ್ಮನೆ ಇದ್ದಾರೆ ಜನರು ಈಕೆಯತ್ತ ಕಣ್ಣೆತ್ತಿ ನೋಡಲ್ಲ. ಆದ ಕಾರಣ ಪೂನಂ ಇಂತಹ ಹಲ್ಚಲ್ ಮಾಡ್ತಾ ಇದ್ದಾಳೆ. 
 
 ಆಕೆ ಓರ್ವ ನಿರ್ಮಾಪಕರ ಬಳಿ ಹೋದಳಂತೆ. ತನ್ನ ಬಳಿ ಒಂದು ಕಥೆ ಇದೆ ಅದನ್ನು  ನೀವು ನಿರ್ಮಿಸಿ, ನಾನೇ ಅದಕ್ಕೆ ನಿರ್ದೇಶನ  ಮಾಡ್ತೀನಿ ಎಂದು ಹೇಳಿದಳಂತೆ. ಆ ಕಥೆ ಕೇಳಿ ನಿರ್ಮಾಪಕ ದಂಗಾಗಿ ಹೋದರಂತೆ.  ಹಾಗೆ ಆಗಲು ಕಾರಣ ಅದರಲ್ಲಿ ತಿರುಳೇ ಇರಲಿಲ್ಲವಂತೆ! 
 
........ಇನ್ನು ಇದೆ. ಮುಂದೆ ಓದಿ. 
 
 

ತನ್ನ ಬಾಯ್ ಫ್ರೆಂಡ್ ಜೊತೆ ಅಫೇರ್ ಇಟ್ಟುಕೊಂಡು ಹೇಗೆ ಎಂಜಾಯ್ ಮಾಡೋದು ಅನ್ನೋದು ಕಥೆಯ ಮುಖ್ಯ ಅಂಶ ಆಗಿತ್ತಂತೆ! 
 
ಅಲ್ಲದೆ ಆ ಚಿತ್ರದಲ್ಲಿ ತಾನು ನ್ಯೂಡ್ ಆಗಿ ಸಹ ಕಾಣಿಸಿಕೊಳ್ಳುವುದಾಗಿ ಹೇಳಿದ್ದಳಂತೆ . ಪೂನಂ ಕಥೆ ಕೇಳಿ ಭಯ ಪಟ್ಟ ನಿರ್ಮಾಪಕರು ಆಯ್ತು ಈಗ ನನಗೆ ಆಗಲ್ಲ.. ಸಧ್ಯದಲ್ಲೇ ಚಿತ್ರವನ್ನು ನಿರ್ಮಿಸ್ತೀನಿ ಎಂದು ಬಚಾವಾದರಂತೆ!
 

Share this Story:

Follow Webdunia kannada