Webdunia - Bharat's app for daily news and videos

Install App

ರೇಖಾರಂತೆ ನಾನು ಎಂದಿಗೂ ನಟಿಸಲಾರೆ- ಸೋನಂ ಕಪೂರ್

Webdunia
ಗುರುವಾರ, 24 ಜುಲೈ 2014 (09:38 IST)
ನಾನು ಹಿರಿಯ ನಟಿ ರೇಖಾ ಅವರಂತೆ ನಟಿಸೋದು ಎಂದಿಗೂ ಅಸಾಧ್ಯ. ಆಕೆಯು ಅದ್ಭುತ ನಟಿ, ತನ್ನ ಹಾವಭಾವ, ಉಡುಗೆತೊಡುಗೆ ಮುಖಾಂತರ ಜನರನ್ನು ಗೆದ್ದ ಪ್ರತಿಭಾವಂತೆ, ಆದರೆ ಆಕೆಯಂತೆ ನನಗೆ ನಟಿಸುವುದು ಕಷ್ಟ ಎನ್ನುವ ಮಾತನ್ನು ಗ್ಲಾಮರ್ ನಟಿ ಸೋನಂ ಕಪೂರ್ ಹೇಳಿದ್ದಾಳೆ.  
 
ಸೋನಂ ಈಗ ರೇಖಾ ನಟನೆಯ ಖೂಬ್ ಸೂರತ್ ಅನ್ನುವ ಚಿತ್ರದ ರೀಮೇಕ್ ನಲ್ಲಿ ನಟಿಸುತ್ತಿರುವ ಸಂಗತಿ ಎಲ್ಲರಿಗು ಗೊತ್ತಿದೆ. ಅದರ ಟ್ರೈಲರ್ ನಲ್ಲಿ ಭಾಗವಹಿಸಿದ್ದ ಆಕೆ ತನ್ನ ಮನದ ಭಾವನೆಗಳನ್ನು ಈ ರೀತಿ ಬಿಚ್ಚಿಟ್ಟಿದ್ದಾಳೆ.ರೇಖಾರಂತೆ ನಾನು ಎಂದಿಗೂ ನಟಿಸಲು ಸಾಧ್ಯವಿಲ್ಲ, ಹಾಗೇ ನಟಿಸುತ್ತೀನಿ ಎಂದು ಹೇಳಿದರೆ ಅದು ಸುಳ್ಳು ಮಾತಾಗುತ್ತದೆ ಎನ್ನುವ ಅಭಿಪ್ರಾಯ ಸೋನಂದ್ದಾಗಿದೆ. 
 
...... ......ಇನ್ನು ಇದೆ. ಮುಂದೆ ಓದಿ. 
 
 

ಖೂಬ್ ಸೂರತ್ ಚಿತ್ರದ ಪಾತ್ರದ ಹೋಲಿಕೆ ತನ್ನ ನಿಜ ಬದುಕಿಗೆ ಹೊಂದಿಕೆ ಆಗುತ್ತದೆ ಎನ್ನುವ ಸಂಗತಿಯನ್ನು ಸೋನಂ ಹೇಳಿದ್ದಾಳೆ. ಆ ಚಿತ್ರದ ಮಿಲಿ (ಪಾತ್ರದ ಹೆಸರು )ನನ್ನ ಸ್ವಭಾವಕ್ಕೆ ಹೆಚ್ಚು ಹೊಂದಿಕೆ ಆಗಿದ್ದು. ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ಸಂಪೂರ್ಣವಾಗಿ ತನ್ನಲ್ಲಿರುವ ಅಭಿನೇತ್ರಿಯನ್ನು ಬಳಸಿಕೊಂಡಿದ್ದಾರೆ  ಎಂದೂ ಸಹ ಈ ಸಮಯದಲ್ಲಿ ಹೇಳಿದ್ದಾಳೆ ಆಕೆ.
 
ಸೆಪ್ಟೆಂಬರ್ 19 ರಂದು ಈ ಚಿತ್ರ ಭಾರತವಿಡಿ ಬಿಡುಗಡೆ ಆಗುತ್ತಿದೆ. ಆ ದಿನಕ್ಕಾಗಿ ತಾನು ಕಾಯುತ್ತಿರುವುದಾಗಿ ಹೇಳಿದ್ದಾಳೆ ಆಕೆ. ಈ ಚಿತ್ರವನ್ನು ಸೋನಂ ತಂದೆ ಅನಿಲ್ ಕಪೂರ್ ಮತ್ತು ಸಹೋದರಿ ರಿಯಾ ಕಪೂರ್ ನಿರ್ಮಿಸಿದ್ದಾರೆ. ಶಶಾಂಕ್ ಘೋಷ್ ನಿರ್ದೇಶಿಸಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments