Select Your Language

Notifications

webdunia
webdunia
webdunia
webdunia

ಆಲಿಯ ಮೊದಲ ಇಷ್ಕ್ ಆಗಿದ್ದು ಇವರ ಮೇಲಂತೆ !

ಆಲಿಯ ಮೊದಲ ಇಷ್ಕ್ ಆಗಿದ್ದು ಇವರ ಮೇಲಂತೆ !
ಮುಂಬೈ , ಬುಧವಾರ, 23 ಜುಲೈ 2014 (09:41 IST)
ಆಲಿಯ ಭಟ್ ದಿನಕ್ಕೊಂದು ಸುದ್ದಿ ಮೂಲಕ ಬಾಲಿವುಡ್ ಗೆ ತಾನು ಅತ್ಯಂತ ಲಾಯಕ್ಕಾದ  ನಟಿ ಅನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾಳೆ. ಈ ಮುದ್ದಾದ ಚೆಲುವೆ ಈಗ ತನ್ನ ಹಳೆಯ ಪ್ರೀತಿಯ ಬಗ್ಗೆ ಹೇಳಿದ್ದಾಳೆ ಮಾಧ್ಯಮಗಳ ಮುಂದೆ. ಆಕೆಯು ಕಾಲಾನುಕಾಲದಿಂದ ಅತಿ ಹೆಚ್ಚು ಇಷ್ಟಪಟ್ಟ ಹೀರೋ ಅಂದ್ರೆ ಶಾಹಿದ್ ಕಪೂರ್ ಅಂತೆ. ಹನ್ನೊಂದನೇ ವಯಸ್ಸಿನಲ್ಲಿ ಆಲಿಯ ಶಾಹಿದ್ ಅವರ ಇಷ್ಕ್ ವಿಷ್ಕ್ ಚಿತ್ರವನ್ನು ಮುಂಬೈನ ಜೆಯಟಿ ಗ್ಯಾಲಕ್ಸಿ  ಚಿತ್ರಮಂದಿರದಲ್ಲಿ ವೀಕ್ಷಿಸಿದ್ದಳಂತೆ.ಶಾಹೀದ್ ಅತ್ಯುತ್ತಮ ನಟ ಎನ್ನುವುದನ್ನು ಆಕೆ ಹೇಳಿದ್ದಾಳೆ. 
 
ತನ್ನ ಹಳೆಯ ಪ್ರಿಯನಟ ಶಾಹೀದ್ ಕಪೂರ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಆಕೆಗೆ. ಅದರಲ್ಲೂ ವಿಕಾಸ್ ಬೆಹಾಲ್ ಚಿತ್ರದಲ್ಲಿ ನಟಿಸುವ ಸುಯೋಗ ದೊರೆತಿದ್ದು, ಆಕೆಯ ಪ್ರಿಯನತ ಶಾಹೀದ್ ಹೀರೋ ಆಗಿದ್ದಾರೆ. ಈ ಚಿತ್ರದಲ್ಲಿ ನಟಿಸಲು ಆಲಿಯ ಕಡೆಯಿಂದ ಸಮ್ಮತಿ ದೊರಕಿದೆ. ಹಾಗೆಂದು ಮಾಧ್ಯಮಗಳಿಗೆ ಹೇಳಿದ್ದಾಳೆ. 
 
.........ಇನ್ನು ಇದೆ. ಮುಂದೆ ಓದಿ. 
 
 

ಈ ವರೆಗೂ ತನ್ನ ಏಜ್ ಗೆ ಸರಿ ಹೊಂದುವ ಹೀರೋಗಳ ಜೊತೆ ನಟಿಸುವುದಕ್ಕೆ ಆದ್ಯತೆ ನೀಡುತ್ತಿದ್ದ ಈ ಚೆಲುವೆ ಈಗ ತನಗಿಂದ ಜಾಸ್ತಿನೆ ವಯಸ್ಸಾಗಿರುವ ಶಾಹೀದ್ ಜೊತೆ ನಟಿಸಲು ಶಾಂದರ್ ಚಿತ್ರದ ಮುಖಾಂತರ ಸಿದ್ಧ ಆಗುತ್ತಿದ್ದಾಳೆ. ಆಕೆಯ ಈ ವಿಧಾನ ಒಳ್ಳೆಯ ನಟಿಯಾಗಿ ಹೆಚ್ಚುಕಾಲ ಚಿತ್ರರಂಗದಲ್ಲಿ ಇರುವ ಲಕ್ಷಣಗಳನ್ನು ತೋರುತ್ತಿದೆ.  

Share this Story:

Follow Webdunia kannada