Webdunia - Bharat's app for daily news and videos

Install App

ಪ್ರತೀಕಾರ ಜ್ವಾಲೆಯಲ್ಲಿ ವಿಶ್ವಸುಂದರಿ ಯುಕ್ತಾಮುಖಿ ?

Webdunia
ಮಂಗಳವಾರ, 22 ಜುಲೈ 2014 (09:39 IST)
ವಿಶ್ವಸುಂದರಿಯ ಪಟ್ಟ ಪಡೆದ ಹೆಣ್ಣುಮಕ್ಕಳು ಕಡೆಗೆ ಆಯ್ದು ಕೊಂಡ ಮತ್ತು ಕೊಳ್ಳುತ್ತಿರುವ ಕ್ಷೇತ್ರವೆಂದರೆ ಸಿನಿಮಾ. ವಿಶ್ವಸುಂದರಿಯಾಗಿ ಭಾರತದ ಹೆಮ್ಮೆ ಹೆಚ್ಚಿಸಿರುವ ಯುಕ್ತಾಮುಖಿ ಸಹ ಇದಕ್ಕೆ ಹೊರತಲ್ಲ. ಆಕೆ ಸಹ ಆಯ್ಕೆ ಮಾಡಿಕೊಂಡಿರುವ ರಂಗ ಸಿನಿಮಾ. ರೇಖಾ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಪ್ರತಿಕಾರ ಜ್ವಾಲ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ ಯುಕ್ತ! ಇದನ್ನು ರಾಮಕೃಷ್ಣ ಗೌಡ್ ಅವರು ನಿರ್ಮಿಸುತ್ತಿದ್ದು, ಹರ್ಷದ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಸೆನ್ಸಾರ್ ಕಾರ್ಯಕ್ರಮ ಪೂರ್ಣ ಆಗಿದ್ದು , ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧತೆ ನಡೆದಿದೆ. 
 
1984 ರಲ್ಲಿ ಇಂದಿರಾಗಾಂಧಿ ಅವರ ಮರಣದ ನಂತರ ಗಲಾಟೆಯಲ್ಲಿ ಸಿಲುಕಿದ ಒಂದು ಕುಟುಂಬದ ಕಥೆಯ ಚಿತ್ರವನ್ನು ಈ ಸಿನಿಮಾ ಹೊಂದಿದೆಯಂತೆ. ಯುಕ್ತಾಮುಖಿ ರೆಡ್ಲೈಟ್ ಏರಿಯಾದಲ್ಲಿರುವ ವೇಶ್ಯೆ ಪಾತ್ರದಲ್ಲಿ  ನಟಿಸುತ್ತಾ ಇದ್ದಾಳೆ . ಆಕೆಯು ಅದರಲ್ಲಿ ಪ್ರತೀಕಾರದ ಪ್ರತಿರೂಪವಾಗಿ ಐದು ಶೆಡ್ ಗಳಲ್ಲಿ ಕಂಡು ಬರುತ್ತಿದ್ದಾಳಂತೆ !ಖಂಡಿತವಾಗಿ   ಇದು ಪ್ರೇಕ್ಷಕರನ್ನು ನಿಸ್ಸಂಶಯವಾಗಿ ಆಕರ್ಷಿಸುತ್ತದೆ ಎಂದಿದ್ದಾರೆ ಚಿತ್ರತಂಡ. 
 
.........ಇನ್ನು ಇದೆ. ಮುಂದೆ ಓದಿ. 
 
 

ಸಿನಿಮಾ ಕಂಡ ಸಿನಿಮಂದಿ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರಂತೆ. ಮೊದಲ ಬಾರಿಗೆ ತೆಲುಗು ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಸಕತ್ ಖುಷಿ ಆಗಿದೆ ಎನ್ನುವ ಖುಷಿ ಹಂಚಿಕೊಂಡಿದ್ದಾಳೆ ಆಕೆ.ಈ ಚಿತ್ರದಲ್ಲಿ ಯುಕ್ತಾಮುಖಿ ಡ್ಯಾನ್ಸ್ , ಫೈಟ್, ವಿಲನ್ ಗಳ ಮೇಲೆ ದ್ವೇಷ ತೀರಿಸಿಕೊಳ್ಳುವ ವಿಧಾನ ಎಲ್ಲವು ಚಿತ್ರದ ಮುಖ್ಯ ಹೈಲೈಟ್ ಆಗಿದೆ ಎನ್ನುವ ಅಂಶವನ್ನು ಅವರು ತಿಳಿಸಿದ್ದಾರೆ. 
 
ಎಲ್ಲ ವರ್ಗಕ್ಕೂ ಇಷ್ಟ ಆಗುವ ಕಥೆಯನ್ನು ಇದು ಹೊಂದಿದೆ ಎಂದು ಹೇಳಿದ್ದಾರೆ ಚಿತ್ರತಂಡ! ಸಿನಿಮಾ ನೋಡೋ ತನಕ  ಹೇಗೆ ಹೇಳ್ತೀರಿ ಅಂತಾ ಇದ್ದಾರೆ ಪ್ರೇಕ್ಷಕರು !!!  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments