Select Your Language

Notifications

webdunia
webdunia
webdunia
webdunia

ಸೋನಾಕ್ಷಿ ಜೊತೆ ಅಕ್ಷಯ್ ಕುಮಾರ್ ಇನ್ನು ಮುಂದೆ ನಟಿಸೋಲ್ವಂತೆ ?

ಸೋನಾಕ್ಷಿ ಜೊತೆ ಅಕ್ಷಯ್ ಕುಮಾರ್ ಇನ್ನು ಮುಂದೆ ನಟಿಸೋಲ್ವಂತೆ ?
ಮುಂಬೈ , ಮಂಗಳವಾರ, 1 ಜುಲೈ 2014 (10:01 IST)
ಇಲ್ಲ ನೀವು ಇನ್ನುಮುಂದೆ ಅವಳ ಜೊತೆ ನಟಿಸ ಬಾರದು ಎಂದು ತಾಕೀತು ಮಾಡಿದ್ದಾಳೆ ಟ್ವಿಂಕಲ್ ಖನ್ನ ಅಲಿಯಾಸ್ ಟ್ವಿಂಕಲ್ ಅಕ್ಷಯ್ ಕುಮಾರ್. ಅದಕ್ಕೆ ಕಾರಣ ಯಾಕೆ ಎನ್ನುವುದಕ್ಕಿಂತ ಯಾರ ಜೊತೆ ತನ್ನ ಪತಿ ಅಕ್ಷಯ್ ನಟಿಸ ಬಾರದು ಎಂದು ಆಕೆ ಹೇಳಿದ್ದಾಳೆ ಎನ್ನುವುದು ಇಲ್ಲಿ ಮುಖ್ಯ. ಅದಕ್ಕಿಂತ ಮುಖ್ಯವಾಗಿ ಹೇಳ ಬೇಕಾದ ಸಂಗತಿ ಇಲ್ಲಿದೆ. ಅಕ್ಷಯ್ ಕುಮಾರ್ ಮತ್ತು ಸೋನಾಕ್ಷಿ ಸಿನ್ಹ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. 
 
ಅವರಿಬ್ಬರ ನಟನೆ, ಕೆಮಿಸ್ಟ್ರಿ, ಜೋಡಿ ಎಲ್ಲವು ಜನರಿಗೆ ಇಷ್ಟ ಆಗಿದ್ದು, ಗೆಲುವು ಕೈಚಾಚಿದೆ. ಎಲ್ಲಿ ಹಳ್ಳ ಇರುತ್ತೋ ಅಲ್ಲಿ ನೀರು ಬರುವುದು ಸಹಜ. ಹಾಗೆ ಆಗಿದೆ ಇವರಿಬ್ಬರ ವಿಷಯದಲ್ಲಿ . ಏಕೆಂದರೆ ಈ ಜೋಡಿಯ ಗೆಲುವಿನಿಂದ ಅನೇಕ ನಿರ್ಮಾಪಕ ಮತ್ತು ನಿರ್ದೇಶಕರ ಚಿತ್ತ ಇವರತ್ತ. ಅವರು ತಮ್ಮ ಚಿತ್ರಗಳಲ್ಲಿ ನಟಿಸುವಂತೆ ದುಂಬಾಲು ಬಿದ್ದಿದ್ದಾರೆ ಈ ಜೋಡಿಗೆ. ಆದರೆ ಈ ಸಂಗತಿ ಪಾಪ ಟ್ವಿಂಕಲ್ ಗೆ ಲೈಕ್ ಆಗಿಲ್ಲ, ಆಕೆ ತಕ್ಷಣ ಇನ್ನುಮುಂದೆ ನೀವು ದಬಾಂಗ್ ಹುಡುಗಿ ಜೊತೆ ನಟಿಸುವಂತಿಲ್ಲ ಎಂದು ಹೇಳಿದ್ದಾಳೆ. ಈ ಮೊದಲು ಅಕ್ಷಯ್ ಮತ್ತು ಪ್ರಿಯಾಂಕ ಚೋಪ್ರ ಅವರ ಪೇರ್  ಸಹ ಹೆಚ್ಚು ಜನಪ್ರಿಯ ಆಗಿತ್ತು. ಆಗ ಸಹ ಇಂತಹ ತಾಕೀತು ಮಾಡಿದ್ದಳು ಟ್ವಿಂಕಲ್.
 
ನೀವು ಇನ್ನು ಮುಂದೆ ಪ್ರಿಯಾಂಕಳ ಜೊತೆ ನಟಿಸ ಬಾರದು ಎಂದು ಆಜ್ಞೆ ಮಾಡಿದ್ದಳು ಆಕೆ. ಆ ಬಳಿಯ ಆ ಜೋಡಿ ಒಟ್ಟಾಗಿ ಕಾಣಲೇ ಇಲ್ಲ. ಈಗ ಸೋನಾಕ್ಷಿ ವಿಷಯದಲ್ಲೂ ಸಹಿತ ಇಂತಹದ್ದೇ ಕಾನೂನು ಜಾರಿ ಮಾಡಿದ್ದಾಳೆ  ಆಕೆ. ಸೋನಾಕ್ಷಿ ಮತ್ತು ಅಕ್ಷಯ್ ಇಬ್ಬರು ಒಟ್ಟಾಗಿರುವುದು ಆಕೆಯಲ್ಲಿ ಅಭದ್ರತೆ ಹೆಚ್ಚು ಮಾಡಿದೆ ಎಂದು ಬಾಲಿವುಡ್ ಮಂದಿ ಮೆಲ್ಲಗೆ ಎಲ್ಲರೂ ಕೇಳಿಸಿಕೊಳ್ಳುವ ಹಾಗೆ ಮಾತಾಡ್ತಾ ಇದ್ದಾರೆ. ವಿಷ್ಯ ಏನೇ ಇರಲಿ ಸದ್ಯದ ಸುದ್ದಿ ಪ್ರಕಾರ ಈ ಜೋಡಿ ನಟಿಸುವಂತಿಲ್ಲ ಒಟ್ಟಿಗೆ! 

Share this Story:

Follow Webdunia kannada