Webdunia - Bharat's app for daily news and videos

Install App

ದಿನೇ ದಿನೇ ಕುತೂಹಲಗಳ ಸರಮಾಲೆ ಆಗಿರುವ ಅಜಯ್ ದೇವಗನ್ ಅವರ ಆಕ್ಷನ್ ಜಾಕ್ಸನ್

Webdunia
ಶನಿವಾರ, 13 ಸೆಪ್ಟಂಬರ್ 2014 (10:22 IST)
ಅಜಯ್ ದೇವಗನ್ ಅವರ ಇತ್ತೀಚಿನ ಚಿತ್ರ ಸಿಂಗಂ ರಿಟರ್ನ್ಸ್. ಅದು ಬಾಕ್ಸಾಫೀಸಲ್ಲಿ ಒಳ್ಳೆಯ ಫಲಿತಾಂಶ ನೀಡಿತ್ತು. ಅದರ ನಡುವೆ ಅವರ ಮತ್ತೊಂದು ಚಿತ್ರ ಆಕ್ಷನ್ ಜಾಕ್ಸನ್ ಬಗ್ಗೆಯೂ ಸಹಿತ ಸುದ್ದಿ ಇದ್ದೆ ಇದೆ. ಈಗ ಆಕ್ಷನ್   ಜಾಕಸನ್‌ಗೆ ಸಂಬಂಧಪಟ್ಟಂತೆ ಅಜಯ್ ದೇವಗನ್ ನಿರ್ದೇಶಕ ಪ್ರಭುದೇವ ಅವರ ಸಲಹೆಯಂತೆ ಕೆಲವೊಂದು ಸಂಗತಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಈ ಚಿತ್ರದಲ್ಲಿ ಹೆಸರೇ ಹೇಳುವಂತೆ ಸಾಹಸಭರಿತ ಸಿನಿಮಾವಾದ್ದರಿಂದ ಅದಕ್ಕೆ ಪೂರಕವಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಅಜಯ್. ಇದರಲ್ಲಿ ಅಜಯ್ ಜೊತೆ ಸೋನಾಕ್ಷಿ ಸಿನ್ಹ, ಆದಿತ್ಯ ರಾಯ್ ಕಪೂರ್ ಅವರ ಸಹೋದರ ಕುನಾಲ್ ರಾಯ್ ಕಪೂರ್ ಸಹಿತ ನಟಿಸುತ್ತಿದ್ದಾರೆ. 
 
ಪ್ರಭುದೇವ ಅವರ ನಿರ್ದೇಶನದ ಈ ಸಾಹಸ ಭರಿತ ಚಿತ್ರ ಅಕ್ಷಯ್ ಕುಮಾರ್ ಅವರ ನಟನೆಯ ಶೌಕೀನ್ ಚಿತ್ರಕ್ಕೆ ಎದುರಾಳಿಯಾಗುವ ಸಾಧ್ಯತೆ ಇದೆ ಎಂದು ತಿಳಿದಿತ್ತು. ಈಗ ಈ ಚಿತ್ರಕ್ಕೆ ಆ ಸಮಸ್ಯೆ ಇಲ್ಲವಂತೆ. ಪ್ರಸ್ತುತ ಮುಂಬೈ ಮೆಟ್ರೋ ಯಾರ್ಡ್ನಲ್ಲಿ ಈ ಚಿತ್ರದ ಸಾಹಸ ದೃಶ್ಯಗಳನ್ನು ಶೂಟಿಂಗ್ ಮಾಡಿಕೊಳ್ಳಲಾಗುತ್ತಿದೆಯಂತೆ . ಮೊಟ್ಟ ಮೊದಲ ಬಾರಿಗೆ ಹಿಂದಿ ಚಿತ್ರದ ಶೂಟಿಂಗ್ ಈ ಸ್ಥಳದಲ್ಲಿ  ನಡೆಯುತ್ತಿದೆ.  ಅಜಯ್ ಹೊಸ ಚಿತ್ರದ ಬಗ್ಗೆ ದಿನೇ ದಿನೇ ಹೊಸ ಸಂಗತಿಗಳು ಹೊರ ಬಂದು ಈಗ ಅವರ ಅಭಿಮಾನಿಗಳು ಚಿತ್ರ ಎಂದು ಬಿಡುಗಡೆ ಆಗುತ್ತದೆಯೋ ಎಂದು ಕಾಯುವ ವಾತಾವರಣ  ಕಲ್ಪಿಸಿದ್ದಾರೆ ಚಿತ್ರ ತಂಡ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments