Select Your Language

Notifications

webdunia
webdunia
webdunia
webdunia

ಅರ್ಪಿತ ಖಾನ್ ಮದುವೆ -ಬದುಕಿನ ಬಗ್ಗೆ ಮತ್ತೊಂದಷ್ಟು ಮಾಹಿತಿ

ಅರ್ಪಿತ ಖಾನ್  ಮದುವೆ -ಬದುಕಿನ ಬಗ್ಗೆ ಮತ್ತೊಂದಷ್ಟು ಮಾಹಿತಿ
, ಸೋಮವಾರ, 24 ನವೆಂಬರ್ 2014 (09:53 IST)
ಸಲ್ಮಾನ್ ಖಾನ್ ಅವರು ತಮ್ಮ ತಂಗಿ ಅರ್ಪಿತ ಖಾನ್ ಮದುವೆಯನ್ನು ದೆಹಲಿ ಮೂಲದ ಪಂಜಾಬಿ ಬ್ರಾಹ್ಮಣ ಯುವಕ ಆಯುಷ್ ಶರ್ಮ ಅವರ ಜೊತೆ ಮದುವೆ ಮಾಡಿದ್ದು ಸಾಕಷ್ಟು ಸುದ್ದಿ ಮಾಡಿತ್ತು ಕಳೆದ ವಾರದಿಂದ. ಹಿಂದಿನ ಮಂಗಳವಾರ ಹೈದರಾಬಾದ್ ನಲ್ಲಿ ರುವ ಫಲಕ್ ನುಮಾ ಅರಮನೆಯಲ್ಲಿ ಆಕೆಯ ಮದುವೆ ಆಯುಷ್ ಜೊತೆ ನಡೆಯಿತು. ಮದುವೆ ಕಾರ್ಯಕ್ರಮಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚು ಆಗಿತ್ತು. ಮದುವೆ ಮಂಟಪಕ್ಕೆಂದು ಮಾಡಿದ ಖರ್ಚು ಬರೋಬ್ಬರಿ 2 ಕೋಟಿ ರೂಪಾಯಿಗಳಿಗಿಂತ ಅಧಿಕ. 
ತನ್ನ ಮುದ್ದಿನ ತಂಗಿ ಅರ್ಪಿತಳಿಗಾಗಿ ಅವಳ ಮದುವೆಯ ಸಂಭ್ರಮದ ಕಾಣಿಕೆಯಾಗಿ ಸಲ್ಮಾನ್ ಖಾನ್ ಅವರು 16  ಕೋಟಿ ರೂಪಾಯಿಗಳಷ್ಟು ಮೊತ್ತದ  ಫ್ಲಾಟ್ ಕಾಣಿಕೆಯಾಗಿ ನೀಡಿದರು.ಉಳಿದ ಸಹೋದರರಾದ ಅರ್ಬಾಜ್ ಮತ್ತು ಸೊಹೈಲ್ ಖಾನ್ ಸಹ ಭಾರಿ ಪ್ರಮಾಣದ ಕಾಣಿಕೆ ನೀಡಿದ್ದಾರೆ.
 
ಸಲ್ಮಾನ್ ಸಹೋದರರು ಇಷ್ಟೊಂದು ಪ್ರೀತಿಯಿಂದ ಕಾಣುವ ಈಕೆ ಇವರ ಸ್ವಂತ ತಂಗಿಯಲ್ಲ. ಆಕೆ ಅನಾಥೆ. ಫುಟ್ಪಾತ್ ಮೇಲೆ ಓರ್ವ ಮಹಿಳೆ ಸತ್ತು ಹೋಗಿದ್ದಳು. ಸಲ್ಮಾನ್ ತಂದೆ ಸಲೀಮ್ ಖಾನ್ ಆ ಮಗುವನ್ನು ಕಂಡು ಮಾನವೀಯತೆಯಿಂದ ತಮ್ಮ ಮನೆಗೆ ಕರೆತಂದರು. ಅದಕ್ಕೆ ಅರ್ಪಿತ ಎಂದು ಹೆಸರನ್ನು ನೀಡಿದರು. ಆ ಮಗುವನ್ನು ದತ್ತು ತೆಗೆದುಕೊಂಡರು. ಅವಳನ್ನು ಸ್ವಂತ ಮಗುವಿಗಿಂತ ಹೆಚ್ಚಿನ ಪ್ರೀತಿಯಿಂದ ಸಾಕಿದ್ದಾರೆ. 
 
ದೆಹಲಿಯ ಮೂಲದ ವ್ಯಾಪಾರಿ ಆಯುಷ್ ಶರ್ಮ ಅವರನ್ನು ಅರ್ಪಿತ ಪ್ರೀತಿಸಿದಾಗ ಅವರ ಕುಟುಂಬದವರ ಜೊತೆ ಮಾತನಾಡಿ ಸಂಬಂಧ ಕುದುರಿಸಿ ತಂಗಿಯ ಕನಸು ನನಸಾಗುವಂತೆ ಮಾಡಿದ್ದಾರೆ ಸಲ್ಮಾನ್ ಭಾಯ್ !

Share this Story:

Follow Webdunia kannada