Select Your Language

Notifications

webdunia
webdunia
webdunia
webdunia

ಕಾಮಿಡಿ ಕಪಿಲ್ ಬ್ಯಾಂಕ್ ಚೋರ್ ಆಗಿದ್ದಾರೆ ನರ್ಗೀಸ್ ಜೊತೆ ಸೇರಿ!

ಕಾಮಿಡಿ ಕಪಿಲ್ ಬ್ಯಾಂಕ್ ಚೋರ್ ಆಗಿದ್ದಾರೆ ನರ್ಗೀಸ್ ಜೊತೆ ಸೇರಿ!
ಮುಂಬೈ , ಬುಧವಾರ, 2 ಜುಲೈ 2014 (09:45 IST)
ಕಾಮಿಡಿ ವಿತ್ ಕಪಿಲ್ ಹಾಸ್ಯ ಪ್ರಧಾನ ಕಾರ್ಯಕ್ರಮದ ಮುಖಾಂತರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದ ಕಲಾವಿದ ಕಪಿಲ್ ಶರ್ಮ. ಒಂದು ಪುಟ್ಟ ಮನೆಯ ಯಜಮಾನ, ಅದರಲ್ಲಿ ಆತನ ಅಜ್ಜಿ, ಹೆಂಡತಿ, ಅತ್ತೆ , ಕೆಲಸಗಾರ ಮತ್ತು ಪಕ್ಕದ ಮನೆಯವರದ್ದೇ ಸಾಮ್ರಾಜ್ಯ.
 
ಪುಟ್ಟ ಜಾಗದಲ್ಲಿ ತನ್ನ ಪ್ರತಿಭೆ ತೋರಿ ಪ್ರಪಂಚ ಗೆದ್ದ ಟೀಮ್ ಅದಾಗಿತ್ತು. ಈಗ ಈ ಚಿತ್ರದ ಮುಖ್ಯ ಪಾತ್ರಧಾರಿ ಕಪಿಲ್ ಶರ್ಮ ಅವರಿಗೆ ಚಿತ್ರದಲ್ಲಿ ನಟಿಸುವ ಅವಕಾಶ ದೊರಕಿದೆ. ನೋಡಲು ಮುದ್ದಾಗಿರುವ, ಒಳ್ಳೆ ನಟನೆ, ಹಾಡು ಹೇಳಲು ಬರುವ ಈ ಅಭಿಜಾತ ಕಲಾವಿದ ಈಗ ಬಾಲಿವುಡ್ ಚಿತ್ರ ಒಂದರ ಹೀರೋ ಆಗಲಿದ್ದಾರೆ. ಬ್ಯಾಂಕ್ ಚೋರ್ ಚಿತ್ರದ ಮುಖಾಂತರ ತಮ್ಮ ಪ್ರತಿಭೆ  ಹಿರಿತೆರೆಯಲ್ಲಿ   ಹಂಚಲಿದ್ದಾರೆ ಕಪಿಲ್ .
 
ಬ್ಯಾಂಕ್ ಚೋರ್ ಚಿತ್ರದಲ್ಲಿ ಕಪಿಲ್ ಜೊತೆ ನರ್ಗಿಸ್  ಫಕ್ರಿ ಸಹ ನಟಿಸುತ್ತ ಇದ್ದಾಳೆ. ಮುದ್ದಾದ ನಟಿ ತನ್ನ ಸಿನಿಮಾಗಳಿಗಿಂತ ಹೆಚ್ಚಾಗಿ ಗೊತ್ತಾಗಿದ್ದು ಯಶ್ ಚೋಪ್ರ ಮಗ ಉದಯ್ ಚೋಪ್ರ ಅವರ ಜೊತೆಗಿನ ಡೇಟಿಂಗ್ ನಿಂದ.ಅದು ಕೇವಲ ಸುದ್ದಿ ಅಂತ ಆಕೆ ಹೇಳ್ತಾ ಇದ್ರೂ ಯಾರು ನಂಬುವಂತೆ ಇರಲಿಲ್ಲ. ಆದರೆ ಸೀನ್ ಬದಲಾಗಿದೆ. ಸದ್ಯಕ್ಕೆ ಈ ಪ್ರೇಮ ವಿಫಲ ಆಗಿದೆ. ಆದ ಕಾರಣ ಆಕೆ ತನ್ನ ಕೆರಿಯರ್ ಕಡೆ ಗಮನ ಕೊಟ್ಟಿದ್ದಾಳೆ. ಈ ಹುಡುಗಿಯ ಆಗಮನದಿಂದ ಚಿತ್ರದ ಬಗ್ಗೆ ಎಲ್ಲರಿಗು ಹೆಚ್ಚು ಆಕರ್ಷಣೆ ಆರಂಭ ಆಗಿದೆ. .

Share this Story:

Follow Webdunia kannada