Select Your Language

Notifications

webdunia
webdunia
webdunia
webdunia

ಐಟಂ ನಂಬರ್ ನಲ್ಲಿ ಶ್ರುತಿ ಹಾಸನ್ ?

ಐಟಂ ನಂಬರ್ ನಲ್ಲಿ ಶ್ರುತಿ ಹಾಸನ್ ?
ಮುಂಬೈ , ಶನಿವಾರ, 7 ಜೂನ್ 2014 (09:59 IST)
ಅತ್ಯಂತ ಕ್ಯೂಟಿ ಹುಡುಗಿಯರ ಪಟ್ಟಿಯಲ್ಲಿ  ಶ್ರುತಿ ಹಾಸನ್ ಗೂ ಸಹ  ಜಾಗ ಇದೆ. ಈ ಚೆಲುವೆ ಒಂದು ಚಿತ್ರದಲ್ಲಿ ಐಟಂ ಡ್ಯಾನ್ಸ್ ಮಾಡಲು ಸಿದ್ಧ ಆಗಿದ್ದಾಳೆ. ಈ ಸುದ್ದಿ ಎಷ್ಟರಮಟ್ಟಿಗೆ  ನಿಜ ಅನ್ನುವುದು ಈಗ ಎದುರಾಗಿರುವ ಪ್ರಶ್ನೆ ಆಗಿದೆ. 
 
ಹೀರೋಯಿನ್ ಆಗಿ ಒಳ್ಳೊಳ್ಳೆಯ ಅವಕಾಶಗಳನ್ನು ತನ್ನದಾಗಿಸಿಕೊಂಡಿರುವ ಈ ಮುದ್ದು ಹುಡುಗಿ ಈಗ ಐಟಂ ನಂಬರ್ ನಲ್ಲೂ   ಕಾಣಿಸಿಕೊಳ್ಳುತ್ತಾಳೆ ಎನ್ನುವ  ಮಾತು ಎಲ್ಲರ ಚಿತ್ತ ಆಕೆಯತ್ತ   ಎನ್ನುವಂತೆ ಆಗಿದೆ. ಆಕೆಯು ಖಂಡಿತ ಐಟಂ ನಂಬರ್ ಮುಖಾಂತರ ಎಲ್ಲರನ್ನು ರಂಜಿಸಿಯೇ ತೀರುತ್ತಾಳೆ ಎಂದು ಬಾಲಿವುಡ್ ಬಹಳಷ್ಟು ಮಂದಿಯ ಅಂಬೋಣ. 
 
ಹಾಗೇನಾದರು ಈ ಸುದ್ದಿ ನಿಜವಾದರೆ ಐಟಂ  ಸಾಂಗ್ ಪ್ರಿಯರಿಗೆ ಸುಗ್ಗಿಯೋ ಸುಗ್ಗಿ. ಪ್ರಸ್ತುತ ಮಹೇಶ್ ಬಾಬು ಮತ್ತು ಶ್ರೀನು ವೈಟ್ಲ ಕಾಂಬಿನೇಷನ್ ನಲ್ಲಿ ಚಿತ್ರ ತೆರೆ ಏರುತ್ತಿದೆ. ಆ ಚಿತ್ರದಲ್ಲಿ ಶ್ರೀನು ಹಾಡಿಗೆ, ಡ್ಯಾನ್ಸ್ ಗೆ ಅತಿ ಹೆಚ್ಚು ಗಮನ ನೀಡುತ್ತಿದ್ದಾರೆ. ಈ ಹಿಂದೆ  ರಿಲೀಸ್ ಆಗಿದ್ದ ಆಗದು ಚಿತ್ರದಲ್ಲಿ ಪಾರ್ವತಿ ಮಿಲ್ಟನ್  ಳನ್ನು ಐಟಂ ನಂಬರ್ ಭಾಗವಾಗಿ ಮಾಡಿಕೊಂಡಿದ್ದರು.  ಈಗ ಶ್ರುತಿಯತ್ತ ಇವರ ಚಿತ್ತವಿದೆ ಎನ್ನುವ ಸುದ್ದಿ ಟಾಲಿವುಡ್ ನಲ್ಲಿ ಓಡಾಡುತ್ತಿದೆ. 
 
ಆದರೆ ಶ್ರುತಿ ಈ ಚಿತ್ರದಲ್ಲಿ ಐಟಂ ನಂಬರ್ ನಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾಳ ಎನ್ನುವ ಸುದ್ದಿ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳಿಲ್ಲ. ಆ ಸಿನಿಮಾದ ಸಂಗೀತ ನಿರ್ದೇಶಕ ತಮನ್  ಮಾತ್ರ ಶ್ರುತಿಯ ಐಟಂ ನಂಬರ್ ಬಗ್ಗೆ ಟ್ವೀಟ್  ಮಾಡಿ ಹೇಳಿದ್ದಾರೆ.ತನ್ನದೇ ಶೈಲಿಯ  ಡ್ಯಾನ್ಸ್ ಮುಖಾಂತರ ಎಲ್ಲರ ಗಮನ ಸೆಳೆಯಲು ಮಿಸ್ ಹಾಸನ್ ಸಿದ್ಧ ಆಗುತ್ತಿದ್ದಾಳಂತೆ !  

Share this Story:

Follow Webdunia kannada