Webdunia - Bharat's app for daily news and videos

Install App

ಕಾಜಲ್ ಈಗ ಎಲ್ಲರ ಜೊತೆ ನಟಿಸಲು ಸಿದ್ಧ.. ಅಯ್ಯೋ ಯಾಕೆ ಹೀಗಾಯ್ತು ?

Webdunia
ಶನಿವಾರ, 31 ಮೇ 2014 (10:11 IST)
ದಕ್ಷಿಣ ಭಾರತ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬಳೆಂದು ಹೆಸರು ಪಡೆದ ನಟಿ ಕಾಜಲ್ ಅಗರ್ ವಾಲ್. ಆದರೆ ಆಕೆ ಅನೇಕ ಕಾರಣಗಳಿಂದ ಸಿನಿಮಾದಲ್ಲಿ ಚಾನ್ಸ್ ಕಳೆದು ಕೊಂಡಳು. ಈಗ ಅವಳ ಕೈಲಿ ಇರುವ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ. ಈ ಸುಂದರ ನಟಿಯು ಆರಂಭದಲ್ಲಿ ಒಂದು ಕೋಟಿ ಸಂಭಾವನೆ ಪಡೆದು ಚಿತ್ರಗಳಲ್ಲಿ ನಟಿಸುತ್ತಿದ್ದಳು. ಅಲ್ಲದೆ ಸಾಮಾನ್ಯವಾಗಿ ಯಂಗ್ ಹೀರೋಗಳ ಜೊತೆಗೆ ನಟಿಸುವ ಪರಿಪಾಟ ಹೊಂದಿದ್ದಳು ಈ ಚೆಲುವೆ.
 
 ಆದರೆ ಕಾಲ ಬದಲಾಗಿ ಆಕೆಗೆ ಅವಕಾಶಗಳು ಇಲ್ಲವಾಗಿ ಈಗ ಸ್ವಲ್ಪ ಏಜ್ ಆಗುತ್ತಿರುವ ಹೀರೋಗಳ ಜೊತೆ ನಟಿಸಲು ಓಕೆ ಅಂದಿದ್ದಾಳೆ, ಅಲ್ಲದೆ ಆ ನಟರ ಜೊತೆ ನಟಿಸಲು ಸಂಭಾವನೆಯನ್ನು ಸಹ ಕಡಿಮೆ ಮಾಡಿಕೊಂಡಿದ್ದಾಳೆ ಎನ್ನುವುದೇ ಈಗ ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಆಗಿದೆ. ಒಂದೊಮ್ಮೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಈ ಚೆಲುವೆ ಈಗ 80  ಲಕ್ಷಕ್ಕೆ ತನ್ನ ಸಂಭಾವನೆಯನ್ನು ಇಳಿಸಿಕೊಳ್ಳುವಂತಹ ದೊಡ್ಡ ಮನಸ್ಸು ಮಾಡಿದ್ದಾಳೆ. 
 
ಈಗ ಬಾಲಾಜಿ ಮೋಹನ್ ನಿರ್ದೇಶನದಲ್ಲಿ ಧನುಶ್ ಹೀರೋ ಆಗಿರುವ ಚಿತ್ರದಲ್ಲಿ ನಟಿಸಲು ಸಮ್ಮತಿ ಮುದ್ರೆ ನೀಡಿದ್ದಾಳೆ ಈ ಚೆಲುವೆ. ಅಲ್ಲದೆ ಕಾಲಿವುಡ್ ಮತ್ತೊಬ್ಬ ಹೀರೋ ಜಯಂ ರವಿ ಅವರ ಸಿನಿಮಾದಲ್ಲೂ ಸಹ ನಟಿಸಲು ಸಿದ್ಧ ಆಗಿದ್ದಾಳೆ ಆಕೆ. ಈಕೆ ಸಣ್ಣಪುಟ್ಟ ಹೀರೋಗಳಿಗೆ ಕಾಲ್ಶೀಟ್ ನೀಡಿದಲ್ಲಿ ವರ್ಷಪೂರ ಕೆಲಸ ಪಡೆಯ ಬಹುದಾಗಿದೆ.ಆ ಸಿನಿಮಾಗಳಲ್ಲಿ ಗೆದ್ದರೆ ಓಕೆ ಇಲ್ಲದಿದ್ದರೆ ಮದುವೆ ಆಗುವುದೇ ಆಕೆಗೆ ಸರಿಯಾದ ದಾರಿ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ ಚಿತ್ರಮಂದಿ.ಪ್ರಸ್ತುತ ಆಕೆಯು ಬ್ಯುಸಿನೆಸ್ ಮ್ಯಾನ್ ಜೊತೆ ಪ್ರೇಮಲೋಕದಲ್ಲಿ ಈಜಾಡುತ್ತಿದ್ದಾಳೆ. ಮದುವೆ ಎರಡು ವರ್ಷಗಳ ನಂತರ ಆಗುವೆ ಎನ್ನುವ ಮಾತನ್ನು ಹೇಳಿದ್ದಾಳೆ. ಸೊ ಅಲ್ಲಿವರೆಗೂ ಸಿಕ್ಕ ಅವಕಾಶಗಳನ್ನು ಆಕೆಗೆ ಬಳಕೆ ಮಾಡಿಕೊಳ್ಳುವ ಅವಕಾಶ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments