Select Your Language

Notifications

webdunia
webdunia
webdunia
webdunia

ರಜನಿಕಾಂತ್ ಮಗಳನ್ನು ಸೊಸೆ ಮಾಡಿಕೊಳ್ಳುವ ಆಸೆ ಇತ್ತು-ಮೋಹನ್ ಬಾಬು

ರಜನಿಕಾಂತ್ ಮಗಳನ್ನು ಸೊಸೆ ಮಾಡಿಕೊಳ್ಳುವ ಆಸೆ ಇತ್ತು-ಮೋಹನ್ ಬಾಬು
, ಸೋಮವಾರ, 21 ಏಪ್ರಿಲ್ 2014 (10:14 IST)
ಮೋಹನ್ ಬಾಬು ಮತ್ತು ರಜನಿಕಾಂತ್ ಜೊತೆಗಿನ ಸ್ನೇಹ ನಲವತ್ತು ವರ್ಷಗಳಷ್ಟು ಹಳೆಯದು. ಈಗಲು ಇಬ್ಬರು ಒಬ್ಬರನ್ನೊಬ್ಬರು ಏಕವಚನದಲ್ಲೇ  ಕರೆದುಕೊಳ್ಳುವುದು. ಅಷ್ಟೊಂದು ಸಲಿಗೆ ಮತ್ತು ಪ್ರೀತಿ. ಇತ್ತೀಚೆಗೆ ಮೋಹನ್ ಬಾಬು ರಜನಿಕಾಂತ್ ನಟನೆಯ ವಿಕ್ರಮ ಸಿಂಹ  ಚಿತ್ರದ ಆಡಿಯೋ ಬಿಡುಗಡೆಯ ಸಮಯದಲ್ಲಿ ಈವರೆಗೂ ಯಾರಿಗೂ ತಿಳಿಯದ ಸಂಗತಿ ಒಂದನ್ನು ಜಗತ್ತಿಗೆ ತಿಳಿಸಿದರು. 
   
ಮೋಹನ್ ಬಾಬು ಅವರಿಗೆ ರಜನಿ ಹೆಣ್ಣುಮಕ್ಕಳನ್ನು ತಮ್ಮ ಸೊಸೆಯಾಗಿ ಮಾಡಿಕೊಳ್ಳುವ ಆಸೆ ಇತ್ತಂತೆ. ಆದರೆ ಋಣಾನುಬಂಧ  ಇರಲಿಲ್ಲ ಎನ್ನುವ  ಮಾತು ಹೇಳಿದರು. ಅದೇ ಸಮಯದಲ್ಲಿ ಮಾತನಾಡಿದ ದಾಸರಿ ನಾರಾಯಣ ರಾವ್ ಅವರು ಸಾಮಾನ್ಯವಾಗಿ ಚಿತ್ರರಂಗದಲ್ಲಿ ತಮ್ಮ ತಂದೆಯ ಸಿನಿಮಾವನ್ನು ನಿರ್ಮಿಸುವ ಗಂಡುಮಕ್ಕಳಿದ್ದಾರೆ, ಹೆಣ್ಣುಮಕ್ಕಳು ತಂದೆಯ ಸಿನಿಮಾ ನಿರ್ಮಿಸುತ್ತಿರುವ ಪರಂಪರೆಗೆ ನಾಂದಿ ಹಾಡಿದ್ದಾರೆ ರಜನಿ ಪುತ್ರಿ ಸೌಂದರ್ಯ ಎನ್ನುವ ಹೊಗಳಿಕೆಯ ಮಾತನ್ನು ಆಡಿದರು. 
   
ತಾನು ನಿರ್ಮಿಸಿದ ಈಗ ಚಿತ್ರವು ಕೊಚ್ಚಾಡಿಯನ್  ಎದುರು ಏನೇನೂ ಇಲ್ಲ ಎನ್ನುವ ಮಾತು ಆಡಿದರು ಸ್ಟಾರ್ ನಿರ್ದೇಶಕ ರಾಜಮೌಳಿ. ಒಟ್ಟಾರೆ ಸಿನಿಮಾದ ಆಡಿಯೋ ಬಿಡುಗಡೆಯ ವಿಷಯಕ್ಕಿಂತ ರಜನಿಯನ್ನು ಹೊಗಳುವುದೇ ಅಂದಿನ ಹೈಲೈಟ್ ಆಗಿತ್ತು.  ಇಷ್ಟೆಲ್ಲಾ ಜನರ ಹೊಗಳಿಕೆ ಇದ್ದರು ಸಹ ರಜನಿ ಅವರ ಅಭಿಮಾನಿಗಳಿಗೆ ಮಾತ್ರ  ಈ ಚಿತ್ರದ ಟ್ರೈಲರ್ ಅಷ್ಟೊಂದು ಮನ ಸೆಳೆಯಲೇ ಇಲ್ಲವಂತೆ...! ಅದೇ ಸದ್ಯದ ಸುದ್ದಿ. ಈ ಚಿತ್ರ ಮೇ ತಿಂಗಳು 9ರಂದು ಬಿಡುಗಡೆ ಕಾಣಲಿದೆ. 

Share this Story:

Follow Webdunia kannada