Select Your Language

Notifications

webdunia
webdunia
webdunia
webdunia

ಕನ್ನಡಕ್ಕೆ ಬಂದ ನೇಪಾಳಿ ಚೆಲುವೆ

ಕನ್ನಡಕ್ಕೆ ಬಂದ ನೇಪಾಳಿ ಚೆಲುವೆ
ಬೆಂಗಳೂರು , ಮಂಗಳವಾರ, 21 ಏಪ್ರಿಲ್ 2015 (12:55 IST)
ಅನೇಕ ದಿನಗಳಿಂದ ಮರೆಯಾಗಿದ್ದ ನಟಿ ಮೋಹಕ ನಟಿ ಮೊನಿಷಾ ಕೋಯಿರಾಲಾ ಮತ್ತೆ ಬಣ್ಣ ಹಚ್ಚಿದ್ದಾರೆ. ಅವರೀಗ ಕಾಣಿಸಿಕೊಂಡಿರುವುದು ಕನ್ನಡದ ಚಿತ್ರದಲ್ಲಿ ಅನ್ನುವುದು ವಿಶೇಷ.

 
ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕ ಕಾಲಕ್ಕೆ ನಿರ್ಮಾಣವಾಗುತ್ತಿರುವ 'ಗೇಮ್' ಎಂಬ ಸಿನಿಮಾದಲ್ಲಿ  ನೇಪಾಳಿ ಚೆಲುವೆ ಮೊನಿಷಾ ಅಭಿನಯಿಸುತ್ತಿದ್ದಾರೆ.
 
ಸೈನೈಡ್ ಚಿತ್ರದ ಖ್ಯಾತಿಯ ನಿರ್ದೇಶಕ ಎ.ಎಂ.ಆರ್. ರಮೇಶ್ ಅವರ ಚಿತ್ರದಲ್ಲಿ ಮೊನಿಷಾ ಶ್ರೀಮಂತ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ. ಕನ್ನಡ ಮೂಲದ ತಮಿಳು ನಟ ಶ್ಯಾಮ್ ಈ ಚಿತ್ರದಲ್ಲಿ ಮೊನಿಶಾರವರ ಪತಿಯಾಗಿ ಅಭಿನಯಿಸುತ್ತಿದ್ದಾರೆ. ಸದ್ಯ ಸಿಲಿಕಾನ್ ಸಿಟಿಯಲ್ಲಿರುವ ಮೊನಿಶಾ 'ಗೇಮ್' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 
 
ಈ ಸಿನಿಮಾ ದೇಶದ ಪ್ರಮುಖ ರಾಜಕಾರಣಿಯೊಬ್ಬರ ಪತ್ನಿಯ ನಿಗೂಢ ಸಾವಿನ ಪ್ರಕರಣಕ್ಕೆ ಹೋಲಿಕೆಯಾಗುತ್ತಿದೆ ಎಂದು ಹೇಳಲಾಗುತ್ತಿದ್ದು ಇದರಲ್ಲಿ ಅರ್ಜುನ್ ಸರ್ಜಾ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಖ್ಯ ಪಾತ್ರಕ್ಕೆ ಮೊನಿಶಾರವನ್ನು ಆಯ್ಕೆ ಮಾಡುವ ಸಲಹೆ ಕೂಡ ಸರ್ಜಾ ಅವರದ್ದೇ ಅಂತೆ. ಹಲವಾರು ಟ್ವಿಸ್ಟ್‌ಗಳಿರುವ ಈ ಸಿನಿಮಾಕ್ಕೆ ಮೊನಿಯಾ ಅವರೇ ಸೂಕ್ತರು ಎಂದು ಸರ್ಜಾ ಭಾವಿಸಿದರಂತೆ. 
 
"ರಮೇಶ್ ಅವರು ಈ ಕತೆಯನ್ನು ಹೇಳಿದಾಗ ಅದು ತುಂಬಾ ಮೆಚ್ಚಿಗೆಯಾಯಿತು. ತಕ್ಷಣ ನಾನೀ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡೆ. ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ತುಂಬಾ ಖುಷಿ ನೀಡುತ್ತಿದೆ", ಎನ್ನುತ್ತಾಳೆ ನೇಪಾಳಿ ಚೆಲುವೆ. 

Share this Story:

Follow Webdunia kannada