Select Your Language

Notifications

webdunia
webdunia
webdunia
webdunia

ಬಹುಭಾಷಾ ನಟಿ ಕಲ್ಪನಾ ಇನ್ನಿಲ್ಲ

ಬಹುಭಾಷಾ ನಟಿ ಕಲ್ಪನಾ ಇನ್ನಿಲ್ಲ
ಹೈದರಾಬಾದ್ , ಸೋಮವಾರ, 25 ಜನವರಿ 2016 (11:42 IST)
ರಾಷ್ಟ್ರ ಪ್ರಶಸ್ತಿ ಪುರಷ್ಕೃತೆ, ಬಹುಭಾಷಾ ನಟಿ ಕಲ್ಪನಾ ನಿಧನ ಹೊಂದಿದ್ದಾರೆ. ನಟಿ ಊರ್ವಶಿ ಅವರ ಸಹೋದರಿಯಾಗಿರುವ 51 ವರ್ಷದ ಕಲ್ಪನಾ ಸೋಮವಾರ ಮುಂಜಾನೆ ಹೈದರಾಬಾದ್‌ನ ಹೊಟೇಲ್‌ವೊಂದರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಚಿತ್ರ ನಿರ್ದೇಶಕ ಸಿಬಿ ಮಲಾಯಿಲ್‌ ಮಾಹಿತಿ ನೀಡಿದ್ದಾರೆ.

'ನಜನ್ ತಣಿಚಲ್ಲಾ‌' ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಕಲ್ಪನಾ ಅವರು 2012ರಲ್ಲಿ ಉತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. 
 
ತೆಲುಗು ಮತ್ತು ತಮಿಳು ಚಿತ್ರವೊಂದರ ಚಿತ್ರೀಕರಣದಲ್ಲಿ ಮತ್ತು ಹೈಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಹೈದರಾಬಾದ್‌ಗೆ ಆಗಮಿಸಿದ್ದ ಅವರು ಹೊಟೆಲ್ ಒಂದರಲ್ಲಿ ತಂಗಿದ್ದರು. ಇಂದು ಮುಂಜಾನೆ ತಾವು ತಂಗಿದ್ದ ಕೊಠಡಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು ಎಂದು ನಿರ್ದೇಶಕ ಮಲಾಯಿಲ್ ತಿಳಿಸಿದ್ದಾರೆ.
 
1983ರಲ್ಲಿ ವಾಸುದೇವನ್ ನಾಯರ್ ಅವರ 'ಮಂಜ್' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಅವರು ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಇತ್ತೀಚಿಗೆ ನಟಿಸಿದ್ದ ಮಲಯಾಳಂ ಸಿನಿಮಾ 'ಚಾರ್ಲಿ' ಸದ್ಯ ಕೇರಳದಲ್ಲಿ ಭರ್ಜರ ಪ್ರದರ್ಶನವನ್ನು ಕಾಣುತ್ತಿದೆ. ಕೆಲವೊಂದು ಕನ್ನಡ ಸಿನಿಮಾಗಳಲ್ಲೂ ಕೂಡ ಕಲ್ಪನಾ ನಟಿಸಿದ್ದಾರೆ. 

Share this Story:

Follow Webdunia kannada