Webdunia - Bharat's app for daily news and videos

Install App

'ವೀರ್ ದಿ ವೆಡ್ಡಿಂಗ್' ಶೂಟಿಂಗ್ ಎಂಜಾಯ್ ಮಾಡುತ್ತಿದ್ದಾಳಂತೆ ಬೆಬೋ

Webdunia
ಬುಧವಾರ, 20 ಜುಲೈ 2016 (14:22 IST)
ಮುಂಬರುವ ಚಿತ್ರ 'ವೀರ್ ದಿ ವೆಡ್ಡಿಂಗ್' ಚಿತ್ರದಲ್ಲಿ ಕರೀನಾ ಅಭಿನಯಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ತಾಯಿಯಾಗುತ್ತಿರುವ ಕರೀನಾ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದಾಳೆ. ಸೆಟ್‌ನಲ್ಲಿ ಬೆಬೋ ಎಂಜಾಯ್ ಮಾಡುತ್ತಿರುವುದರ ಬಗ್ಗೆ ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ. ಮೊನ್ನೆ ನಿರ್ಮಾಪಕ ರೇಹಾ ಕಪೂರ್ ಹಾಗೂ ನಿರ್ದೇಶಕರು ಇತ್ತೀಚೆಗೆ ಹರಿಯಾಣಾದ ಪಟೌಡಿ ಪ್ಯಾಲೇಸ್‌ನಲ್ಲಿ ಭೇಟಿಯಾಗಿದ್ದರಂತೆ. 

 
ಈ ವೇಳೆ ಕರೀನಾ ಜತೆಗೆ ಚಿತ್ರದ ಶೂಟಿಂಗ್ ಸಮಯದ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಮೊದಲ ಶೂಟಿಂಗ್ ಬ್ಯಾಕಾಂಕ್‌ನಲ್ಲಿ ನಡೆಯಲಿದೆ.

ಆದ್ರೆ ಇತ್ತೀಚೆಗೆ ಸೈಫ್ ಆಲಿಖಾನ್ ಅವರು ನೀಡಿದ ಸುದ್ದಿಯೊಂದು ಕರೀನಾ ಅವರು ಒಪ್ಪಿಕೊಂಡ ಸಿನಿಮಾವನ್ನು ಮುಗಿಸುತ್ತಾರಾ ಅನ್ನೋ ಅನುಮಾನವನ್ನು ಹುಟ್ಟಿ ಹಾಕಿತ್ತು. ಅದಕ್ಕೆ ಕಾರಣ ಏನಪ್ಪಾ ಅಂದ್ರೆ ಸೈಫ್ ಅವರು ಕರೀನಾ ಕಪೂರ್ ಅವಕು ತಾಯಿಯಾಗುತ್ತಿರುವ ವಿಚಾರವನ್ನು ಖಚಿತಪಡಿಸಿದ್ದರು. 
 
ಇನ್ನು ಬೆಬೋ ತಾಯಿಯಾಗುತ್ತಿದ್ದಾರೆ ಅನ್ನೋ ವಿಚಾರ ಗೊತ್ತಾಗುತ್ತಿದ್ದಂತೆ ಕರೀನಾ ಅಭಿನಯಿಸುತ್ತಿರುವ ಸಿನಿಮಾ ವೀರ್ ದಿ ವೆಡ್ಡಿಂಗ್ ಸಿನಿಮಾ ತಂಡ ಕೂಡ ಫುಲ್ ಅಲರ್ಟ್ ಆಗಿತ್ತು. ಕರೀನಾ ತಾಯಿಯಾಗುತ್ತಿರೋದರಿಂದ ಅವರಿಗೆ ಅಭಿನಯಿಸೋದಕ್ಕೆ ಯಾವುದೇ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಅತೀ ಶೀಘ್ರದಲ್ಲಿ ಸಿನಿಮಾದ ಶೂಟಿಂಗ್ ಮುಗಿಸೋದಕ್ಕೆ ನಿರ್ಧರಿಸಿದೆ.
 
ಸದ್ಯ ಕರೀನಾ ಅವರಿಗೆ ನಾಲ್ಕು ತಿಂಗಳು. ಸಿನಿಮಾದಲ್ಲಿ ಅವರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರೋದರಿಂದ ಇನ್ನು ಲೇಟ್ ಮಾಡಿದ್ರೆ ಸಿನಿಮಾದಲ್ಲಿ ಅಭಿನಯಿಸೋದು ಅವರಿಗೆ ಕಷ್ಟವಾಗುತ್ತೆ. ಹಾಗಾಗಿ ಸಿನಿಮಾದ ಶೂಟಿಂಗ್‌ನ್ನು ಬೇಗ ಮುಗಿಸಿದ್ರೆ ಉತ್ತಮ ಅಂತಾ ಸಿನಿಮಾ ತಂಡ ಸಿನಿಮಾದ ಶೂಟಿಂಗ್ ಶೀಘ್ರದಲ್ಲೇ ಆರಂಭಿಸಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ರೀಲ್ಸ್‌ಗಾಗಿ ಮಚ್ಚು ಹಿಡಿದ ಪ್ರಕರಣ: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ಗೆ ಮತ್ತೆ ಪೊಲೀಸ್‌ ಬುಲಾವ್‌

ಕಾಲಿವುಡ್‌ನಲ್ಲಿ ಸ್ಟಾರ್ ವಾರ್‌ ಜೋರು: ಥಿಯೇಟರ್‌ನಲ್ಲೇ ಹೊಡೆದಾಡಿಕೊಂಡ ಸ್ಟಾರ್‌ ನಟರ ಅಭಿಮಾನಿಗಳು

ಮುಂದಿನ ಸುದ್ದಿ
Show comments