Webdunia - Bharat's app for daily news and videos

Install App

ಮಹೇಶ್ ಬಾಬು ಜೊತೆ ನಟಿಸಲ್ಲವಂತೆ ಶ್ರೀದೇವಿ ಪುತ್ರಿ

Webdunia
ಶನಿವಾರ, 30 ಜುಲೈ 2016 (09:26 IST)
ಬಾಲಿವುಡ್ ಅಂಗಳದಲ್ಲಿ ಹಾಗೂ ಟಾಲಿವುಡ್ ಅಂಗಳದಲ್ಲಿ ಭಾರೀ ಸುದ್ದಿ ಮಾಡಿದ್ದ ವಿಚಾರ ಅಂದ್ರೆ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಅವರು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಜೊತೆ ಅಭಿನಯಿಸುತ್ತಾರೆ ಅನ್ನೋದು. ಅಭಿಮಾನಿಗಳು ಕೂಡ ಮಹೇಶ್ ಬಾಬು ಹಾಗೂ ಜಾಹ್ನವಿ ಅವರ ಕಾಂಬಿನೇಷನ್ ಹೇಗಿರುತ್ತೆ ಅಂತಾ ನೋಡೋಕೆ ಕಾತುರರಾಗಿದ್ದರು.ಆದ್ರೆ ಅಭಿಮಾನಿಗಳಿಗೆ ಇದೀಗ ನಿರಾಸೆಯಾಗಿದೆ,

ಅಂದ್ಹಾಗೆ ನಿರ್ದೇಶಕ ಎ.ಆರ್ ಮುರುಗದಾಸ್ ಅವರು ಮಹೇಶ್ ಬಾಬು ಅವರ ಸಿನಿಮಾದ ಮೂಲಕ ಜಾಹ್ನವಿ ಅವರನ್ನು ಸಿನಿಮಾ ರಂಗಕ್ಕೆ ಪರಿಚಯಿಸಬೇಕು ಅಂತಾ ಪ್ಲಾನ್ ಮಾಡಿಕೊಂಡಿದ್ದರು. ಇದಕ್ಕೆ ಜಾಹ್ನವಿ ಪೋಷಕರಾದ ಬೋನಿ ಕಪೂರ್ ಹಾಗೂ ಶ್ರೀದೇವಿ ಅವರು ಓಕೆ ಅಂದಿದ್ದರು. ಹಾಗಾಗಿ ಇನ್ನೇನು ಮಹೇಶ್ ಬಾಬು  ಹಾಗೂ ಜಾಹ್ನವಿ ಸಿನಿಮಾ ಸೆಟ್ಟೇರುತ್ತೆ ಅಂತಾ ಅಭಿಮಾನಿಗಳು ಅಂದುಕೊಂಡಿದ್ದರು.

ಆದ್ರೀಗ ಜಾಹ್ನವಿ ಅವರು ಅಭಿನಯಿಸುತ್ತಿಲ್ಲ ಅಂತಿದ್ದಾರೆ  ಮುರುಗದಾಸ್.ಇನ್ನು ಜಾಹ್ನವಿ ಅವರು ಸಿನಿಮಾದಲ್ಲಿ ಅಭಿನಯಸದೇ ಇರೋದಕ್ಕೆ ಕಾರಣ ಕೂಡ ಜಾಹ್ನವಿ ಅವರೇ. ಜಾಹ್ನವಿ ಅವರು ಸದ್ಯ ನಾನು ಸಿನಿಮಾದಲ್ಲಿ ಅಭಿನಯಿಸಲ್ಲ ಅಂತಾ ಹೇಳಿದ್ದಾರಂತೆ. ಸದ್ಯ ನಾನು ಸಿನಿಮಾದಲ್ಲಿ ಅಭಿನಯಿಸಬೇಕೋ ಬೇಡ್ವೋ ಅನ್ನೋ ಗೊಂದಲದಲ್ಲಿದ್ದಾರಂತೆ.

ಅದಕ್ಕಾಗಿಯೇ ಅವರು ತಾನು ಸಿನಿಮಾದಲ್ಲಿ ಅಭಿನಯಿಸಲ್ಲ ಅಂತಾ ಅವರು ಹೇಳಿದ್ದಾರಂತೆ. ಆದ್ರೆ ಇದರಿಂದ ಅಭಿಮಾನಿಗಳಿಗೆ ನಿರಾಸೆ ಆಗಿರೋದಂತು ನಿಜ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments