Select Your Language

Notifications

webdunia
webdunia
webdunia
webdunia

ದೀಪಿಕಾ ಹೆಸರನ್ನು ತಪ್ಪಾಗಿ ಬರೆದ ಮ್ಯಾಗಜೀನ್‌.. ಅಭಿಮಾನಿಗಳು ತರಾಟೆಗೆ

ದೀಪಿಕಾ ಹೆಸರನ್ನು ತಪ್ಪಾಗಿ ಬರೆದ ಮ್ಯಾಗಜೀನ್‌.. ಅಭಿಮಾನಿಗಳು ತರಾಟೆಗೆ
ಮುಂಬೈ , ಬುಧವಾರ, 24 ಆಗಸ್ಟ್ 2016 (15:51 IST)
ಬಾಲಿವುಡ್ ನಟಿ ದೀಪಿಕಾ ಪಡಿನಕೋಣೆ ಯಾರಿಗೆ ಗೊತ್ತಿಲ್ಲ ಹೇಳಿ. ಆದ್ರೆ ಖಾಸಗಿ ಮ್ಯಾಗಜೀನ್‍ವೊಂದರಲ್ಲಿ ದೀಪಿಕಾ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ಇದ್ದರಿಂದ ಸಿಟ್ಟಿಗೆದ್ದೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಟ್ವಿಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.  


ದೀಪಿಕಾ ಪಡುಕೋಣೆ ಟಾಪ್ 10 ದುಬಾರಿ ಸೆಲೆಬ್ರಿಟಿಯ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಜಗತ್ತಿನ ದುಬಾರಿ ನಟಿಯರ ಪಟ್ಟಿಯರಲ್ಲಿ ಇವರು ಕೂಡ ಸ್ಥಾನ ಪಡೆದಿದ್ದಾರೆ. ಟಾಪ್ 10ರ ಪಟ್ಟಿಯ ಹೆಸರನ್ನು ವಿವರಿಸಿದ ಮ್ಯಾಗಜೀನ್ ಇದರಲ್ಲಿ ದೀಪಿಕಾ ಹೆಸರನ್ನು ತಪ್ಪಾಗಿ ನಮೂದಿಸಿದೆ . 
 
ಮೂಲಗಳ ಪ್ರಕಾರ ಟೈಪ್ ನಿಂದಾಗಿ ತಪ್ಪಾಗಿರಬಹುದು ಎನ್ನಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಅಭಿಮಾನಿಗಳು ಫುಲ್ ಗರಂ ಆಗಿದ್ದಾರಂತೆ. 
 
ದೀಪಿಕಾ ಪಡುಕೋಣೆ ಬೋಲ್ಡ್ ಆಗಿ ನಟನೆ ಮಾಡುವುದರಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಟಾಪ್ 10 ದುಬಾರಿ ಸೆಲೆಬ್ರಿಟಿಗಳು ಪಟ್ಟಿಯಲ್ಲಿ  ದೀಪಿಕಾ ಪಡುಕೋಣೆ ಇದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ದೀಪಿಕಾಗೆ 12 ಕೋಟಿಯಷ್ಟು ಸಂಭಾವನೆ ಪಡೆದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಧನಂಜಯ್ ಬರ್ತಡೇಗೆ 'ಬದ್ಮಾಶ್' ಚಿತ್ರದ ಇಷ್ಟ ಇಷ್ಟ ಹಾಡು ಗಿಫ್ಟ್