Select Your Language

Notifications

webdunia
webdunia
webdunia
webdunia

ನಾವಿಬ್ಬರು ಫ್ರೆಂಡ್ಸ್ ಆಗಿದ್ದೇವೆ, ಅದು ಲವ್ ಅಲ್ಲ - ಲೂಲಿಯಾ ವೆಂಟೂರ್

ನಾವಿಬ್ಬರು ಫ್ರೆಂಡ್ಸ್ ಆಗಿದ್ದೇವೆ, ಅದು ಲವ್ ಅಲ್ಲ - ಲೂಲಿಯಾ ವೆಂಟೂರ್
ಮುಂಬೈ , ಗುರುವಾರ, 25 ಆಗಸ್ಟ್ 2016 (18:24 IST)
ಸಲ್ಮಾನ್ ಖಾನ್ ಲೂಲಿಯಾ ವೆಂಟೂರ್ ಮದುವೆ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಖುದ್ದು ಲೂಲಿಯಾ ತಮ್ಮ ಸಂಬಂಧದ ಬಗ್ಗೆ ಹೇಳಿದ್ದಾರೆ. ಸಲ್ಮಾನ್ ಹಾಗೂ ನಾನು ಇಬ್ಬರು ಫ್ರೆಂಡ್ಸ್, ಫ್ರೆಂಡ್ಸ್ ಅಂದ್ರೆ ಫ್ರೆಂಡ್ಸ್ ಅಷ್ಟೇ , ಅದು ಲವ್ ಅಲ್ಲ ಎಂದು ತಿಳಿಸಿದ್ದಾರೆ. 

 
ಇತ್ತೀಚೆಗೆ ಖಾಸಗಿ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಲೂಲಿಯಾ ಕಡೆಗೂ ತಮ್ಮಿಬ್ಬರ ಸಂಬಂಧದ ಬಗ್ಗೆ ತಿಳಿಸಿದ್ದಾರೆ. ಎಲ್ಲವು ಉತ್ತಮವಾದ ಸಮಯಕ್ಕೆ ಆಗುತ್ತದೆ. ಅದು ಬೇಗವು ಅಲ್ಲ, ಅದು ಲೇಟಾಗಿಯೂ ಅಲ್ಲ ಎಂದು ತಿಳಿಸಿದರು. ಇಬ್ಬರ ರಿಲೇಷನ್‌ಶಿಪ್ ಬಗ್ಗೆ ವದಂತಿ ಹರಡಿತ್ತು. ಹಲವು ಕಾರ್ಯಕ್ರಮಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. 
 
ಕೆಲ ದಿನಗಳಿಂದ ಸಲ್ಮಾನ್ ಮತ್ತು  ಲೂಲಿಯಾ ಒಟ್ಟಿಗೆ ಓಡಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತು. ಇಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ವದಂತಿ ಬೆನ್ನೆಲ್ಲೇ ಇದೀಗ ಲೂಲಿಯಾ ಈ ರೀತಿ ಹೇಳಿಕೆ ನೀಡಿದ್ದಾರೆ. ಸಲ್ಮಾನ್ ಖಾನ್ ಲೂಲಿಯಾ ಜತೆಗೆ ಈಗಾಗ್ಲೇ ಮದುವೆಯಾಗಿದ್ದಾರೆ ಎಂದು ಕೂಡ ಹೇಳಲಾಗ್ತಿತ್ತು. ಆದ್ರೆ ನಾವಿಬ್ಬರು ಫ್ರೆಂಡ್ಸ್ ಎಂದು ಹೇಳುವ ಮೂಲಕ ಲೂಲಿಯಾ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. 
 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಜೂನಿಯರ್ ಎನ್‌ಟಿಆರ್ ಅಭಿನಯದ ಜನತಾ ಗ್ಯಾರೇಜ್ ರಿಲೀಸ್‌ಗೆ ಡೇಟ್ಸ್ ಫಿಕ್ಸ್