Select Your Language

Notifications

webdunia
webdunia
webdunia
webdunia

50 ದಿನಗಳ ಸಂಭ್ರಮದಲ್ಲಿ ಲಾಸ್ಟ್ ಬಸ್ ಸಿನಿಮಾ

50 ದಿನಗಳ ಸಂಭ್ರಮದಲ್ಲಿ ಲಾಸ್ಟ್ ಬಸ್ ಸಿನಿಮಾ
ಬೆಂಗಳೂರು , ಸೋಮವಾರ, 29 ಫೆಬ್ರವರಿ 2016 (11:35 IST)
ಕನ್ನಡದಲ್ಲಿಯೂ ಇಂತಹ ಚಿತ್ರವನ್ನು ಮಾಡ್ಬಹುದು ಅಂತಾ ತೋರಿಸಿಕೊಟ್ಟ ಸಿನಿಮಾ ಲಾಸ್ಟ್ ಬಸ್. ಈಗಾಗಲೇ ಲಾಸ್ಟ್ ಬಸ್ ಹತ್ತಿದವರೆಲ್ಲಾ ಇಳಿಯೋವಾಗ ಬಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಕೂಡ ಇನ್ನು ಚಿತ್ರಮಂದಿರಗಳಲ್ಲಿ ತನ್ನ ನಾಗಾಲೋಟ ಮುಂದುವರೆಸಿದೆ.ಇದೀಗ ಸಿನಿಮಾ ತನ್ನ 50 ದಿನಗಳನ್ನು ಪೂರೈಸಿ ಮುನ್ನುಗುತ್ತಿದೆ.
 
  ಮೊನ್ನೆಯಷ್ಟೇ ಈ ಸಿನಿಮಾ ಫ್ರೆಂಚ್ ಭಾಷೆಗೆ ಡಬ್ ಆಗ್ತಿದೆ ಅಂತಾ ನಾವೇ ವೆಬ್ ದುನಿಯಾದಲ್ಲಿ ಹೇಳಿದ್ದೆವು. ಸೈಕೋಲಾಜಿಕಲ್ ಥ್ರಿಲ್ಲರ್ ಸಿನಿಮಾವಾಗಿರುವ ಲಾಸ್ಟ್ ಬಸ್ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಈಗಾಗಲೇ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರು. ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾ ಅದ್ಭುತವಾಗಿದೆ ನೋಡಿ ಅಂತಾ ಚಿತ್ರ ನೋಡಿದವರೆಲ್ಲಾ ಹೇಳಿಕೊಂಡಿದ್ರು. ಹಾಗಾಗಿ ಅನೇಕರು ಸಿನಿಮಾವನ್ನು ಮತ್ತೆ ಮತ್ತೆ ನೋಡುತ್ತಲೇ ಇದ್ದಾರಂತೆ. ಇದೀಗ ಸಿನಿಮಾ 50 ದಿನಗಳ ಸಂಭ್ರಮದಲ್ಲಿದೆ.
 
        ಈ ಚಿತ್ರವನ್ನು ಎಸ್.ಡಿ.ಅರವಿಂದ್ ನಿರ್ದೇಶನ ಮಾಡಿದ್ದಾರೆ. ಅವಿನಾಶ್ ನರಸಿಂಹರಾಜು, ಮಾನಸ ಜೋಶಿ, ಮೇಘಶ್ರೀ ಭಾಗವತರ್, ಸಮರ್ಥ್ ನರಸಿಂಹರಾಜು, ಸುಧಾ ನರಸಿಂಹರಾಜು, ರಾಕ ಶಂಕರ್, ಲೋಕೇಶ್ ಆಚಾರ್, ಪ್ರಕಾಶ್ ಬೆಳವಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

Share this Story:

Follow Webdunia kannada