Select Your Language

Notifications

webdunia
webdunia
webdunia
webdunia

ಕತ್ರೀನಾ ಮನೆಯ ವಾರ್ಡ್ ರೋಬ್ ಗೆ ಫಿದಾ ಆದ ಹೃತಿಕ್

ಕತ್ರೀನಾ ಮನೆಯ ವಾರ್ಡ್ ರೋಬ್ ಗೆ ಫಿದಾ ಆದ ಹೃತಿಕ್
ಮುಂಬೈ , ಗುರುವಾರ, 4 ಆಗಸ್ಟ್ 2016 (09:34 IST)
ಬಾಲಿವುಡ್ ಸ್ಟಾರ್ ಗಳಿಗೆ ಅದ್ಯಾಕೋ ಗೊತ್ತಿಲ್ಲ ತಮ್ಮ ಮನೆಗಳನ್ನು ಬೇಕಾದಂತೆ ವಿನ್ಯಾಸ ಮಾಡಿಕೊಳ್ಳೋದದು ಒಂದು ಫ್ಯಾಶನ್ ಆಗಿ ಬಿಟ್ಟಿದೆ. ಅದರಲ್ಲೂ ಒಬ್ಬ ತಾರೆಗಿಂತ ಮತ್ತೊಬ್ಬ ತಾರೆಗೆ ನನ್ನ ಮನೆ ಸುಂಗರವಾಗಿರಬೇಕು ಅನ್ನೋ ಪೈಪೋಟಿ ಮಾಮೂಲಿ. ಇದೀಗ ನಟ ಹೃತಿಕ್ ರೋಷನ್ ಅವರು ತಮ್ಮ ಹೊಸ ಮನೆಯ ವಿನ್ಯಾಸಕ್ಕೆ ನಾನಾ ರೀತಿಯ ಕಸರತ್ತುಗಳಲ್ಲಿ ತೊಡಗಿದ್ದಾರೆ.


ನಟ ಹೃತಿಕ್ ರೋಷನ್ ಜೂಹು ನಲ್ಲಿ ಸಮುದ್ರ ಕಾಣುವಂತೆ ಹೊಸ ಮನೆಯೊಂದನ್ನು ಒಂದು ಹಾಲಿಡೇ ಹೋಮ್ ರೀತಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರಂತೆ. ತುಂಬಾನೇ ಸುಂದರವಾಗಿರುವ ಈ ಮನೆಗೆ ನಾನಾ ರೀತಿಯ ವಿನ್ಯಾಸಗಳನ್ನು ಮಾಡುತ್ತಿದ್ದಾರಂತೆ ಹೃತಿಕ್.

ಅಂದ್ಹಾಗೆ ಹೃತಿಕ್ ರೋಷನ್ ಅವರು ಮನೆಯನ್ನು ವಿನ್ಯಾಸಗೊಳಿಸುತ್ತಿರೋದು ಕತ್ರೀನಾ ಕೈಫ್ ಅವರ ಬಾಂದ್ರಾದಲ್ಲಿರುವ ನಿವಾಸವನ್ನು ವಿನ್ಯಾಸಗೊಳಿಸಿದ ಆಯಿಶೇಶ್ ಶಾ ಅವರಂತೆ.ಅದಕ್ಕೆ ಕಾರಣ ಕೂಡ ಇದೆಯಂತೆ.

ಈಗಗಾಲೇ ಕತ್ರೀನಾ ಅವರ ಮನೆಯ ವಿನ್ಯಾಸವನ್ನು ನೋಡಿರುವ ಹೃತಿಕ್ ರೋಷನ್ ರು ಅದರಿಂದ ತುಂಬಾನೇ ಆಕರ್ಷಿತರಾಗಿದ್ದಾರಂತೆ. ಹಾಗಾಗಿ ಅದೇ ವಿನ್ಯಾಸಕರನ್ನು ಕರೆದು ಮನೆ ವಿನ್ಯಾಸ ಮಾಡಿಸುತ್ತಿದ್ದಾರಂತೆ.

ಇನ್ನೊಂದು ಅಚ್ಚರಿಯ ವಿಚಾರ ಅಂದ್ರೆ ಕತ್ರೀನಾ ಕೈಫ್ ಅವರ ಮನೆಯ ವಾರ್ಡ್ ರೋಬ್ ವಿನ್ಯಾಸ ಹೃತಿಕ ಅವರನ್ನು ತುಂಬಾನೇ ಸೆಳೆದಿದೆಯಂತೆ.ಹಾಗಾಗಿ ಅದೇ ರೀತಿಯ ವಾರ್ಡ್ ರೋಬ್ ತಮ್ಮ ಮನೆಗೂ ಬೇಕು ಅಂತಾ ಹೃತಿಕ್ ವಿನ್ಯಾಸಕಾರರಲ್ಲಿ ಹೇಳಿದ್ದಾರಂತೆ. ಹಾಗಾಗಿ ಅವರು ಕ್ಯಾಟ್ ಮನೆಯಲ್ಲಿರುವ ವಾರ್ಡ್ ರೋಬ್ ರೀತಿಯ ವಾರ್ಡ್ ರೋಬ್ ಗಳನ್ನು ಹೃತಿಕ್ ಮನೆಯಲ್ಲಿಯೂ ನಿರ್ಮಿಸುತ್ತಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಪಂಜಾಬಿಯಾಗಿ ಮಿಂಚೋದಕ್ಕೆ ರೆಡಿಯಾಗಿದ್ದಾರೆ ಸಂಜಯ್ ದತ್