Select Your Language

Notifications

webdunia
webdunia
webdunia
webdunia

ದೆಹಲಿಯ ಬೀದಿಗಳಲ್ಲಿ ಕತ್ರೀನಾ –ಆದಿತ್ಯಾ ಕಪೂರ್ ಭರ್ಜರಿ ಶಾಪಿಂಗ್

ದೆಹಲಿಯ ಬೀದಿಗಳಲ್ಲಿ ಕತ್ರೀನಾ –ಆದಿತ್ಯಾ ಕಪೂರ್ ಭರ್ಜರಿ ಶಾಪಿಂಗ್
, ಸೋಮವಾರ, 8 ಫೆಬ್ರವರಿ 2016 (10:49 IST)
ಕತ್ರೀನಾ ಕೈಫ್ ಹಾಗೂ ಆದಿತ್ಯಾ ರಾಯ್ ಕಪೂರ್ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸಿರುವ ಫಿತೂರ್ ಸಿನಿಮಾ ಫೆಬ್ರವರಿ 12 ರಂದು ರಿಲೀಸ್ ಆಗುತ್ತಿದೆ. ಸಿನಿಮಾದ ರಿಲೀಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇರೋದರಿಂದ ಸಿನಿಮಾ ತಂಡ ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.
    
ಅದರಂತೆ ಸಿನಿಮಾದ ನಾಯಕಿಯಾದ ಕತ್ರೀನಾ ಕೈಫ್ ಹಾಗೂ ನಾಯಕ ಆದಿತ್ಯಾ ರಾಯ್ ಕಪೂರ್ ದೆಹಲಿಯಲ್ಲಿ ಭರ್ಜರಿ ಪ್ರಮೋಷನ್‌ನಲ್ಲಿ ತೊಡಗಿದ್ದರು. 
ದೆಹಲಿಯ ಶಾಪಿಂಗ್ ಸ್ಟ್ರೀಟ್‌ಗಳಲ್ಲಿ ಸುತ್ತಾಡಿದ ಆದಿ ಹಾಗೂ ಕ್ಯಾಟ್ ಶಾಪಿಂಗ್ ಕೂಡ ಮಾಡಿದ್ರು. ದೆಹಲಿಯ ಜನ್ಪತ್ ಬೀದಿಯಲ್ಲಿ ಸಾಗಿದ ಇಬ್ಬರೂ ಅಲ್ಲಿ ಬೀದಿ ಬದಿ ವ್ಯಾಪಾರಿಗಳಲ್ಲಿ ಸಿನಿಮಾ ನೋಡಿವಂತೆ ಮನವಿ ಮಾಡಿದ್ರು. ಅಲ್ಲದೇ ಕ್ಯಾಟ್ ಭರ್ಜರಿ ಖರೀದಿ ಕೂಡ ಮಾಡಿದ್ರಂತೆ. ಇನ್ನು ಸಿನಿಮಾ ತಾರೆಯರು ಬಂದ್ರು ಅಂದ್ರೆ ಜನಕ್ಕೇನೋ ಖುಷಿ. ನೆಚ್ಚಿನ ತಾರೆಯರ ಫೋಟೋಗಳನ್ನು ಯಾರ್ರಾಬಿರ್ರಿ ಕ್ಲಿಕ್ಕಿಸಿ ಖುಷಿ ಪಟ್ರು.
 
ಫಿತೂರ್ ಸಿನಿಮಾದಲ್ಲಿ ಕತ್ರೀನಾ ಹಾಗೂ ಆದಿತ್ಯಾ ರಾಯ್ ಕಪೂರ್ ನಾಯಕಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾದಲ್ಲಿ ಟಬು ಕೂಡ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾ ಇದೇ ವಾರ ಅಂದ್ರೆ ಫೆಬ್ರವರಿ 12 ರಂದು ವಿಶ್ವದಾದ್ಯಂತ ತೆರೆ ಕಾಣುತ್ತಿದೆ.

Share this Story:

Follow Webdunia kannada