Select Your Language

Notifications

webdunia
webdunia
webdunia
webdunia

ಕತ್ರೀನಾ ಜಾಗಕ್ಕೆ ಬಂದ್ರು ದೀಪಿಕಾ ಪಡುಕೋಣೆ

ಕತ್ರೀನಾ ಜಾಗಕ್ಕೆ ಬಂದ್ರು ದೀಪಿಕಾ ಪಡುಕೋಣೆ
ಮುಂಬೈ , ಶನಿವಾರ, 20 ಆಗಸ್ಟ್ 2016 (09:58 IST)
ಆನಂದ್ ಎಲ್ ರೈ ನಿರ್ದೇಶನ ಮಾಡುತ್ತಿರುವ ಮುಂದಿನ ಸಿನಿಮಾದಲ್ಲಿ ಶಾರುಖ್ ಖಾನ್ ಅವರಿಗೆ ನಾಯಕಿಯಾಗಿ ಕತ್ರೀನಾ ಕೈಫ್ ಅವರು ನಾಯಕಿಯಾಗಿ ಅಭಿನಯಿಸಲಿದ್ದಾರೆ ಅನ್ನೋದು ಸುದ್ದಿಯಾಗಿತ್ತು. ಕತ್ರೀನಾ ಕೂಡ ಸಿನಿಮಾದಲ್ಲಿ  ಅಭಿನಯಿಸುತ್ತಿರೋದಾಗಿ ಸಣ್ಣದಾಗಿ ಕ್ಲೂ ಕೊಟ್ಟಿದ್ದರು.ಆದ್ರೀಗ ಕತ್ರೀನಾ ಜಾಗದಲ್ಲಿ ಬೇರೆ ಹೆಸರು ಕೇಳಿ ಬರುತ್ತಿದೆ.


ಈ ಹಿಂದೆ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಓಂ ಶಾಂತಿ ಓಂ, ಚೆನ್ನೈ ಎಕ್ಸ್ ಪ್ರೆಸ್ ಹಾಗೂ  ಹ್ಯಾಪಿ ನ್ಯೂಯರ್ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಇದೀಗ ಆನಂದ್ ಎಲ್ ರೈ ನಿರ್ದೇಶನದ ಸಿನಿಮಾದಲ್ಲಿ ಅವರಿಬ್ಬರು ಜೊತೆಯಾಗಿ ಅಭಿನಯಿಸುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ.

ಇನ್ನು ಇಷ್ಟು ದಿನ ಈ ಸಿನಿಮಾದಲ್ಲಿ ಕಿಂಗ್ ಖಾನ್ ಗೆ ಕ್ಯಾಟ್ ನಾಯಕಿ ಅಂತಾ ಹೇಳಲಾಗಿತ್ತು. ಸಿನಿಮಾಕ್ಕೆ  ಸಹಿ ಹಾಕದೊಂದೇ ಬಾಕಿ ಉಳಿದಿತ್ತು.ಆದ್ರೆ ಕೊನೆಯ ಕ್ಷಣದಲ್ಲಿ  ಕ್ಯಾಟ್ ಹೆಸರಿದ್ದಲ್ಲಿ ದೀಪಿಕಾ ಪಡುಕೋಣೆ ಅವರ ಹೆಸರು ಕೇಳಿ ಬಂದಿದೆ.

ಇನ್ನು ಕ್ಯಾಟ್ ಗೆ ಸಿಕ್ಕ ಅವಕಾಶ ದೀಪಿಕಾಗೆ ಸಿಕ್ಕಿರೋದಕ್ಕೆ ಕ್ಯಾಟ್ ಏನೋ ಬೇಜಾರು ಮಾಡಿಕೊಂಡಿಲ್ಲ. ಅವರು ಕರಣ್ ಜೋಹರ್ ನಿರ್ದೇಶಿಸುತ್ತಿರುವ ಧರ್ಮ ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶ ಸಿಕ್ಕಿದೆ. ಫವಾದ್ ಖಾನ್ ಅವರಿಗೆ ನಾಯಕಿಯಾಗಿ ಅವರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ದೀಪಿಕಾಗೆ ಸಿಕ್ಕಿ ಅವಕಾಶ ಕಂಡ ಬೇಸರಿಸಿಕೊಂಡ ಕ್ಯಾಟ್ ಗೆ ಈಗ ಭರ್ಜರಿ ಆಫರ್ ಸಿಕ್ಕಿದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲ ವರ್ಗದವರು ನೋಡಬಹುದಾದ ಸಿನಿಮಾ ಕ್ರೇಜಿ ಬಾಯ್