Select Your Language

Notifications

webdunia
webdunia
webdunia
webdunia

ದಪ್ಪಗಾದ ಕರೀನಾ ಸಣ್ಣ ಆಗಲು ಹೋಗಿದ್ದಾದರೂ ಎಲ್ಲಿ ?

ದಪ್ಪಗಾದ ಕರೀನಾ  ಸಣ್ಣ ಆಗಲು   ಹೋಗಿದ್ದಾದರೂ ಎಲ್ಲಿ ?
ಮುಂಬೈ , ಬುಧವಾರ, 7 ಮೇ 2014 (09:23 IST)
ಬಾಲಿವುಡ್ ನಲ್ಲಿ ಸಾಮಾನ್ಯವಾಗಿ ಭಿನ್ನತೆ ಬಯಸುವ ನಟಿ ಯಾರು ಎನ್ನುವ ಪ್ರಶ್ನೆಗೆ ಥಟ್ಟನೆ ಉತ್ತರ ಬರುವುದು ಕರೀನಾ ಕಪೂರ್ ಖಾನ್. ಆಕೆ ಮೊದಲಿನಿಂದಲೂ ಚಿತ್ರರಂಗದಲ್ಲಿ ತನ್ನನ್ನು ಭಿನ್ನ ರೀತಿಯಿಂದ ಪ್ರೆಸೆಂಟ್ ಮಾಡಿಕೊಂಡಿದ್ದಾಳೆ. ಇದಕ್ಕೆ ಪೂರಕವಾಗಿ ಆಕೆ ಕೇವಲ ತನ್ನ ಉಡುಪುಗಳಿಂದ ಮಾತ್ರವಲ್ಲ ಜೀರೋ ಸೈಜ್ ಮುಖಾಂತರವು ಸಹ ಹೆಚ್ಚು ಗಮನ ಸೆಳೆದಿದ್ದಳು. 
 
ಆದರೆ ಅದು ಎಷ್ಟು ದಿನ ಆಕೆಗೆ ಹೆಸರು ನೀಡಲು ಸಾಧ್ಯ. ಕರೀನ ಕಪೂರ್ ಈಗ ಗೃಹಿಣಿ. ಆದಕಾರಣ ಬಹುತೇಕ ತನ್ನ ಸಮಯವನ್ನು ಮನೆ... ಮನೆ... ಮನೆ... ಅಂತ ಕಾಲ ಕಳಿಯುವ ಪರಿಸ್ಥಿತಿ ಉಂಟಾಗಿದೆ. ಪರಿಣಾಮ ಆಕೆಯ ತೂಕದಲ್ಲಿ ಬದಲಾವಣೆ. ಇದು ಆಕೆಗೆ ಒಂದು ರೀತಿ ಆಶಾಂತಿ ಉಂಟು ಮಾಡಿತ್ತು. ಅಷ್ಟೇ ಅಲ್ಲದೆ ಆಕೆಗೆ ಅವಕಾಶಗಳು ಸಹ ಹೇಳಿಕೊಳ್ಳುವಷ್ಟು ಇಲ್ಲ, ಈ ಎಲ್ಲ ಕಾರಣಗಳಿಂದ ಮತ್ತೆ ತನಗೊಂದು ಹೊಸರೂಪ ಪಡೆಯಲು ಹಾಗು ತನ್ನ ಕೆರಿಯರ್ ಕಡೆಗೆ ಗಮನ ನೀಡಲು ಅಮೆರಿಕಾಕ್ಕೆ ಹೋಗಿ  ಸೈಜ್ ನಲ್ಲಿ ಮತ್ತೆ ಜೀರೋ ಮಾಡಿಕೊಳ್ಳಲು ಹೊರಟೇ ಬಿಟ್ಟಳು.
 
ಸದ್ಯದ ಸುದ್ದಿ ಪ್ರಕಾರ ಆಕೆ ಈಗಂತೂ ಇನ್ನು ಮುದ್ದಾಗಿದ್ದಾಳಂತೆ. ಆಕೆಯ ಸೈಜ್  ಇಲ್ಲವೇನೋ ಅನ್ನುವಷ್ಟು ಚೆನ್ನಾಗಿ ಆಗಿದೆಯಂತೆ. ಜೀರೋ ಸೈಜ್  ಇದ್ರೇನು ಲಾಭ.. ನೋಡೋಕೆ ಖಾಲಿ ಖಾಲಿ ಅಂತ ದಕ್ಷಿಣದ ಚಿತ್ರಪ್ರೇಮಿಗಳ ಅಂಬೋಣ! ಅದು ಸರೀ ಅಲ್ವೇ!
 
 

Share this Story:

Follow Webdunia kannada