Select Your Language

Notifications

webdunia
webdunia
webdunia
webdunia

ತನ್ನ ಮುಂದಿನ ಸಿನಿಮಾದ ಶೂಟಿಂಗ್ ತಯಾರಿಯಲ್ಲಿ ಕರಣ್ ಜೋಹರ್

ತನ್ನ ಮುಂದಿನ ಸಿನಿಮಾದ ಶೂಟಿಂಗ್ ತಯಾರಿಯಲ್ಲಿ ಕರಣ್ ಜೋಹರ್
, ಸೋಮವಾರ, 31 ಆಗಸ್ಟ್ 2015 (10:50 IST)
ಬಾಲಿವುಡ್ ನ ಸಕ್ಸಸ್ ಫುಲ್ ನಿರ್ದೇಶಕ ಕರಣ ಜೋಹರ್ ಯಾವುದೇ ಸಿನಿಮಾ ಮಾಡಿದ್ರೂ ಅದಕ್ಕೆ ಪಕ್ಕಾ ಪ್ಲಾನಿಂಗ್ ಇರುತ್ತೆ. ಇದೀಗ ಕರಣ್ ತಮ್ಮ ಮುಂದಿನ ಸಿನಿಮಾ ಯೇ ದಿಲ್ ಹೈ ಮುಷ್ಕಿಲ್ ಸಿನಿಮಾದ ತಯಾರಿಯಲ್ಲಿದ್ದಾರೆ.

 
ಸಪ್ಟೆಂಬರ್ ಮೊದಲ ವಾರದಿಂದ ಕರಣ್ ತಮ್ಮ ಯೇ ದಿಲ್ ಹೈ ಮುಷ್ಕಿಲ್ ಸಿನಿಮಾದ ಶೂಟಿಂಗ್ ಅನ್ನು ಲಂಡನ್ ನಲ್ಲಿ ಆರಂಭಿಸಲಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಕರಣ್ ಸಿನಿಮಾದ ಶೂಟಿಂಗ್ ಹತ್ತು ದಿನಗಳ ಕಾಲ ನಡೆಯಲಿದ್ದು, ಅದರಲ್ಲಿ ಅನುಷ್ಕಾ ಶರ್ಮಾ ಹಾಗೂ ಐಶ್ವರ್ಯಾ ರೈ ಭಾಗವಹಿಸಲಿದ್ದಾರೆ ಅಂದಿದ್ದಾರೆ. ಅಲ್ಲದೇ ಸಿನಿಮಾದ ಬಗ್ಗೆ ತುಂಬಾನೇ ಎಕ್ಸೈಟ್ ಆಗಿದ್ದೇನೆ ಅಂತಾ ಅವರು ಟ್ವೀಟ್ ಮಾಡಿದ್ದಾರೆ.
 
ಯೇ ದಿಲ್ ಹೈ ಮುಷ್ಕಿಲ್ ಸಿನಿಮಾವನ್ನು ಕರಣ್ ಮೂರು ವರ್ಷಗಳ ಗ್ಯಾಪ್ ನಂತರ ನಿರ್ದೇಶಿಸುತ್ತಿದ್ದಾರೆ. 2012 ರಲ್ಲಿ ತೆರೆ ಕಂಡ ಆಲಿಯಾ ಭಟ್ ಹಾಗೂ ವರುಣ್ ಧವನ್ ಅವರ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದ ಬಳಿಕ ಕರಣ್  ಯಾವುದೇ ಸಿನಿಮಾ ಮಾಡಿರಲಿಲ್ಲ. ಇದೀಗ ಈ ಸಿನಿಮಾದ ಮೂಲಕ ಕರಣ್ ಕಮಾಲ್ ಮಾಡೋದಕ್ಕೆ ರೆಡಿಯಾಗಿದ್ದಾರೆ.

Share this Story:

Follow Webdunia kannada