Select Your Language

Notifications

webdunia
webdunia
webdunia
webdunia

ಕಂಗನಾ ರನೌತ್ ಗೆ ಒನ್ ಟೇಕ್ ನಟಿ ಅನ್ನೋ ಹೆಗ್ಗಳಿಕೆ

ಕಂಗನಾ ರನೌತ್ ಗೆ ಒನ್ ಟೇಕ್ ನಟಿ ಅನ್ನೋ ಹೆಗ್ಗಳಿಕೆ
guna , ಶನಿವಾರ, 23 ಜನವರಿ 2016 (13:30 IST)
ಬಾಲಿವುಡ್ ನ ಪ್ರತಿಭಾವಂತ ನಟಿಯರಲ್ಲಿ ಒಬ್ಬರು ಕಂಗನಾ ರನೌತ್. ತಮ್ಮ ಅಭಿನಯದ ಮೂಲಕವೇ ಕೋಟ್ಯಂತರ ಅಭಿಮಾನಿಗಲ ದಿಲ್ ಕದ್ದ ಈ  ನಟಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಈಗಾಗಲೇ ತಮ್ಮ ಅಭಿನಯಕ್ಕೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಕಂಗನಾ ಇದೀಗ ಮತ್ತೊಂದು ಹೆಗ್ಗಳಿಕೆ ಪಾತ್ರವಾಗಿದ್ದಾರೆ.
 
ಹೌದು... ಕಂಗನಾ ಬಾಲಿವುಡ್ ಅಂಗಳದಲ್ಲಿ ತಮ್ಮ ಕಲಸ ಕಾರಣದಿಂದಲೇ ಅನೇಕರಿಗೆ ಇಷ್ಟವಾಗುತ್ತಾರೆ ಅವರ ಕೆಲಸ ನೋಡಿಯೇ ಅನೇಕರು ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ವಿಶಾಲ್ ಭಾರದ್ವಾಜ್ ಅವರಿಂದ ಹೊಗಳಿಕೆಗೆ ಪಾತ್ರವಾಗಿದ್ದಾರೆ.  ತಮ್ಮ ರಂಗೂನ್ ಸಿನಿಮಾದ ಶೂಟಿಂಗ್ ವೇಳೆ ಕಂಗನಾ ಒಂದೇ ಒಂದು ಟೇಕ್ ನಲ್ಲಿ ಸೀನ್ ಒಂದನ್ನು ಮುಗಿಸಿದ್ರಂತೆ ಅದಕ್ಕೆ ಸಿನಿಮಾ ನಿರ್ದೇಶಕರಾದ ವಿಶಾಲ್ ಭಾರದ್ವಾಜ್ ಕಂಗನಾ ಅವರನ್ನು ಒನ್ ಟೇಕ್ ನಟಿ ಅಂತಾ ಹೊಗಳಿದ್ದಾರೆ.
 
ಈ ಬಗ್ಗೆ ಟ್ವೀಟ್ ಮಾಡಿರುವ ವಿಶಾಲ್ ಸಿನಿಮಾದ ಶೂಟಿಂಗ್ ವೇಳೆ ಕಂಗನಾ ಅತ್ಯದ್ಭುತವಾದ ಪರ್ಫಾಮೆನ್ಸ್ ನೀಡಿದ್ದಾರೆ. ಅವರು ಒಂದೇ ಟೇಕ್ ನಲ್ಲಿ ನಟಿಸುತ್ತಾರೆ. ಅವರು ನಿಜವಾಗಿಯೂ ಗ್ರೇಟ್. ಅದಕ್ಕಾಗಿ ಅವರನ್ನು ಸಿಂಗಲ್ ಟೇಕ್ ನಟಿ ಅಂತಾ ಕರೆಯುತ್ತೇನೆ ಅಂತಾ ಹೇಳಿದ್ದಾರೆ.

Share this Story:

Follow Webdunia kannada