Select Your Language

Notifications

webdunia
webdunia
webdunia
webdunia

ಸಂಭಾವನೆಯಲ್ಲಿ ಡಿಪ್ಪಿಯನ್ನು ಹಿಂದಿಕ್ಕಿದ ಕಂಗನಾ

ಸಂಭಾವನೆಯಲ್ಲಿ ಡಿಪ್ಪಿಯನ್ನು ಹಿಂದಿಕ್ಕಿದ ಕಂಗನಾ
Mumbai , ಮಂಗಳವಾರ, 13 ಡಿಸೆಂಬರ್ 2016 (12:06 IST)
ಕ್ವೀನ್, ತನು ವೆಡ್ಸ್ ಮನು ರಿಟರ್ನ್ಸ್...ಈ ಚಿತ್ರಗಳಿಗೆ ಶ್ರೇಷ್ಠ ನಟಿ ರಾಷ್ಟ್ರ ಪ್ರಶಸ್ತಿಯನ್ನು ಬಾಲಿವುಡ್ ನಟಿ ಕಂಗನಾ ರನಾವತ್ ಪಡೆದರು. ಆಗಲೇ ವೃತ್ತಿಬದುಕು ಜೋರಾಗಿದ್ದ ದಿನಗಳು. ಇನ್ನು ರಾಷ್ಟ್ರಪ್ರಶಸ್ತಿ ಬಂದರೆ ಕೇಳಬೇಕೆ. ಅವಕಾಶಗಳು ಮನೆಗೆ ಬಂದು ಬಿದ್ದವು.
 
ಕಂಗನಾ ಈ ಅವಕಾಶಗಳನ್ನು ಬಿಡಲಿಲ್ಲ. ತಮ್ಮ ಸಂಭಾವನೆಯನ್ನು ಸಿಕ್ಕಾಪಟ್ಟೆ ಏರಿಸಿಕೊಂಡರು. ಸದ್ಯಕ್ಕೆ ಚಿತ್ರವೊಂದಕ್ಕೆ ಕಂಗನಾ ತೆಗೆದುಕೊಳ್ಳುತ್ತಿರುವ ಸಂಭಾವನೆ ಮೊತ್ತ ರೂ.15 ಕೋಟಿ ಎನ್ನುತ್ತವೆ ಮೂಲಗಳು. 
 
ಪದ್ಮಾವತಿ ಚಿತ್ರಕ್ಕೆ ದೀಪಿಕಾ ಪಡುಕೋಣೆ ರೂ.12 ಕೋಟಿ ಎಣಿಸಿದ್ದಕ್ಕೇ ಜನ ಸುಸ್ತಾಗಿದ್ದರು. ಕಂಗನಾ ರೇಟು ಕೇಳಿ ಕಂಗಾಲಾಗಿದ್ದಾರಂತೆ. ಇದುವರೆಗೂ ಸಂಭಾವನೆ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದ್ದ ದೀಪಿಕಾ ಈಗ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ ಎನ್ನುತ್ತವೆ ಮೂಲಗಳು.
 
ಇತ್ತೀಚೆಗೆ ಮಾಧ್ಯಮಗಳು ಕಂಗನಾರನ್ನು ಈ ಬಗ್ಗೆ ಕೇಳಿದ್ದಕ್ಕೆ, "ನಾನು ಎಷ್ಟು ತೆಗೆದುಕೊಂಡರೆ ಯಾರಿಗೇನಾಗಬೇಕು. ನನಗೆ ಗೊತ್ತಾದರಷ್ಟೇ ಸಾಕು" ಎಂದಿದ್ದರು. ಇಷ್ಟಕ್ಕೂ ಅವರು ರು.15 ಕೋಟಿ ತೆಗೆದುಕೊಂಡಿದ್ದಾರಾ ಇಲ್ಲವೆ ಎಂಬುದನ್ನು ಮಾತ್ರ ಹೇಳಲಿಲ್ಲ. 
 
ಒಂದು ಕಾಲದಲ್ಲಿ ಚಿತ್ರಗಳಿಗಾಗಿ ಹಂಬಲಿಸುತ್ತಿದ್ದ ಕಂಗನಾ ಈಗ ಅವಕಾಶಗಳ ರಾಣಿ. ಗಾಳಿ ಬಂದಾಗ ತೂರಿಕೊಳ್ಳುವುದು ಮುಖ್ಯ ಅಲ್ಲವೇ. ಕಂಗನಾ ಮಾಡುತ್ತಿರುವುದು ಅದನ್ನೇ. ಸದ್ಯಕ್ಕೆ ರಂಗೂನ್, ಸಿಮ್ರಾನ್, ರಾಣಿ ಲಕ್ಷ್ಮಿ ಬಾಯಿ ಚಿತ್ರಗಳಲ್ಲಿ ಕಂಗನಾ ಅಭಿನಯಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜೇಮ್ಸ್ ಬಾಂಡ್ ಆಗಿ ಮತ್ತೆ ಡೇನಿಯಲ್ ಕ್ರೆಗ್?