Webdunia - Bharat's app for daily news and videos

Install App

ಬ್ಲೂಫಿಲಂನಲ್ಲಿ ಅಭಿನಯಿಸಕ್ಕೂ ಸಿದ್ಧಳಾಗಿದ್ದ ತಾರೆ

Webdunia
ಸೋಮವಾರ, 2 ಜನವರಿ 2017 (13:58 IST)
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ತಾರೆ ಕಂಗನಾ ರನಾವತ್ ಇತ್ತೀಚೆಗೆ ತನ್ನ ವೃತ್ತಿಬದುಕಿನ ಬಗ್ಗೆ ಮಾತನಾಡುತ್ತಾ, ಆಸಕ್ತಿಕರವಾದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. 2006ರಲ್ಲಿ ಬಂದ ಗ್ಯಾಂಗ್‍ಸ್ಟರ್ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಅಡಿಯಿಟ್ಟಿದ್ದು ಗೊತ್ತೇ ಇದೆ.
 
ಒಂದು ವೇಳೆ ಆ ಸಿನಿಮಾದಲ್ಲಿ ಚಾನ್ಸ್ ಸಿಗದೇ ಇದ್ದಿದ್ದರೆ, ಒಂದು ಬಿ ಗ್ರೇಡ್ ಸಿನಿಮಾ ಮೂಲಕ ತನ್ನ ವೃತ್ತಿ ಬದುಕು ಆರಂಭವಾಗುತ್ತಿತ್ತು ಎಂದಿದ್ದಾರೆ. ಗ್ಯಾಂಗ್‍ಸ್ಟರ್ ಸಿನಿಮಾಗೂ ಮುಂಚೆ ನನಗೊಂದು ಆಫರ್ ಬಂದಿತ್ತು. ಅದು ಹೇಳಿಕೊಳ್ಳುವಂತ ಸಿನಿಮಾ ಅಲ್ಲ. ಆದರೂ ಪರ್ವಾಗಿಲ್ಲ ನಟಿಸೋಣ ಅಂದುಕೊಂಡಿದ್ದೆ. 
 
ಆಮೇಲೆ ಫೋಟೋಶೂಟ್ ಸಹ ಮಾಡಲಾಯಿತು. ಆಮೇಲೆ ಕಾಸ್ಟ್ಯೂಮ್ ರೋಬ್ ಕೊಟ್ಟರು. ಅದರಲ್ಲಿ ಬಟ್ಟೆಗಳೇನು ಇರಲಿಲ್ಲ. ಬಹುಶಃ ಇದು ನೀಲಿ ಚಿತ್ರ ಇರಬಹುದು ಎಂದುಕೊಂಡೆ. ಇದು ಒಳ್ಳೇ ಸಿನಿಮಾ ಅಲ್ಲ. ನಾನು ಮಾಡುವುದು ಅಷ್ಟು ಒಳ್ಳೆಯದಲ್ಲ ಅನ್ನಿಸಿತು. ಆಗ ಗ್ಯಾಂಗ್‌ಸ್ಟರ್ ಸಿನಿಮಾ ಬಂತು. ಆ ಸಿನಿಮಾ ಇಷ್ಟ ಆದಕಾರಣ ಅದನ್ನು ಒಪ್ಪಿಕೊಂಡೆ ಎಂದಿದ್ದಾರೆ ಕಂಗನಾ.
 
ಆ ಸಿನಿಮಾ ಬಿಟ್ಟಿದ್ದಕ್ಕೆ ನಿರ್ಮಾಪಕ ನನ್ನ ಮೇಲೆ ಗರಂ ಆದ. ಕೆಲವು ಕಷ್ಟಗಳನ್ನೂ ಅನುಭವಿಸಬೇಕಾಯಿತು. ಆಗ ನನಗಿನ್ನೂ 17, 18ರ ಪ್ರಾಯ. ಗ್ಯಾಂಗ್‍ಸ್ಟರ್ ಸಿನಿಮಾ ಬಂದಿಲ್ಲ ಎಂದಿದ್ದರೆ ಆ ಸಿನಿಮಾ ಒಪ್ಪಿಕೊಳ್ಳುತ್ತಿದ್ದೆ. ಆಗ ನನ್ನ ಪರಿಸ್ಥಿತಿ ಅವಕಾಶ ಸಿಕ್ಕಿದರೆ ಸಾಕು ಎಂಬಂತಿತ್ತು ಎಂದು ಹಳೆ ನೆನಪನ್ನು ಮೆಲುಕು ಹಾಕಿದ್ದಾರೆ ಬಾಲಿವುಡ್ ಕ್ವೀನ್ ಕಂಗನಾ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಮುಂದಿನ ಸುದ್ದಿ
Show comments